ಟೆಕ್ಸಾಸ್‌ : ಮನೆಯ ಮೇಲೆ ಗುಂಡಿನ ದಾಳಿ, 8 ಸಾವು

Posted By: Gururaj
Subscribe to Oneindia Kannada

ಟೆಕ್ಸಾಸ್, ಸೆಪ್ಟೆಂಬರ್ 11 : ಟೆಕ್ಸಾಸ್‌ನಲ್ಲಿ ಫುಟ್‌ಬಾಲ್ ಪಂದ್ಯಾವಳಿ ನೋಡುತ್ತಿದ್ದ ಮನೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ದಾಳಿ ನಡೆಸಿದ ವ್ಯಕ್ತಿ ಸೇರಿದಂತೆ 8 ಜನರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿ ನಡೆಸಿದ್ದು ಏಕೆ? ಎಂಬುದು ಇನ್ನೂ ತಿಳಿದುಬಂದಿಲ್ಲ.

ಟೆಕ್ಸಾಸ್ ನಗರದ ಮನೆಯ ಮೇಲೆ ಭಾನುವಾರ ರಾತ್ರಿ ಈ ಗುಂಡಿನ ದಾಳಿ ನಡೆದಿದೆ. ಫುಟ್ ಬಾಲ್ ಪಂದ್ಯಾವಳಿ ನೋಡಲು ಮನೆಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅಲ್ಲಿಗೆ ಬಂದ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Texas : Shooting on house party 8 killed

ಮನೆಯೊಂದರಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು ಮತ್ತು ಫುಟ್‌ ಬಾಲ್ ಪಂದ್ಯಾವಳಿ ವೀಕ್ಷಣೆ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ಅಲ್ಲಿಗೆ ಬಂದ ವ್ಯಕ್ತಿ ಮಹಿಳೆ ಜೊತೆ ವಾಗ್ವಾದ ಮಾಡಿದ್ದು, ಬಳಿಕ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಮನೆಯ ಬಳಿಗೆ ಬಂದ ವ್ಯಕ್ತಿ ಮಹಿಳೆ ಜೊತೆ ಜಗಳವಾಡಿದ್ದಾನೆ. ಮಹಿಳೆ ವಾಪಸ್ ಮನೆಗೆ ಹೋಗಲು ಮುಂದಾದಾಗ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯೊಳಗೆ ಅಡಗಿದ್ದ ವ್ಯಕ್ತಿಯನ್ನು ಕೊಂದು ಹಾಕಿದ್ದಾರೆ.

ಗುಂಡಿನ ದಾಳಿ ನಡೆಸಿದ ವ್ಯಕ್ತಿಗೂ ಮನೆಯವರಿಗೆ ಪರಿಚಯದವನೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Authorities in Texas say that at least eight people are dead, including a gunman, after a shooting at a home in the city of Plano. The shooting occurred on Sunday night.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ