6 ಉಗ್ರರನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಇಮ್ರಾನ್ ಖಾನ್?
ಲಾಹೋರ್: ಪಾಕಿಸ್ತಾನ ಅದೆಂತಹ ದೇಶವೋ ಗೊತ್ತಿಲ್ಲ, ಮಾಜಿ ಪ್ರಧಾನಿ ಮನೆಯಲ್ಲೇ ಉಗ್ರರು ಪತ್ತೆಯಾಗಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. 40 ಉಗ್ರರು ಇಮ್ರಾನ್ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಇಮ್ರಾನ್ ಮನೆ ಸುತ್ತುವರಿದು ತಪಾಸಣೆ ನಡೆಸಿದ್ದರು, ಈ ವೇಳೆ 6 ಉಗ್ರರು ಲಾಕ್ ಆಗಿದ್ದಾರೆ.
ಇಮ್ರಾನ್ ಶನಿವಾರ ತಾನೆ ರಿಲೀಸ್ ಆಗಿದ್ದಾರೆ. ಹೀಗಿದ್ದಾಗ ಮತ್ತೆ ಅವರನ್ನ ಜೈಲಿಗೆ ಕಳುಹಿಸಬೇಕು ಎಂಬ ಹಠವನ್ನ ಪಾಕಿಸ್ತಾನ ಸರ್ಕಾರ ತೋರುತ್ತಿದೆ. ಇದೇ ಕಾರಣಕ್ಕೆ ಸುಖಾಸುಮ್ಮನೆ ಇಮ್ರಾನ್ ಖಾನ್ ಮನೆ ಮೇಲೆ ದಾಳಿ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ಇಮ್ರಾನ್ ಬೆಂಬಲಿಗರು ಆರೋಪಿಸಿದ್ದರು. ಆದರೆ ಈಗ 6 ಉಗ್ರರು ಇಮ್ರಾನ್‌ನ ಮನೆಯಲ್ಲೇ ಲಾಕ್ ಆಗಿದ್ದಾರೆ. ಇಮ್ರಾನ್ ಮನೆಯೊಳಗೆ 40 ಉಗ್ರರು ಅಡಗಿದ್ದಾರೆ ಎಂದು ನೆಪ ಹೇಳಿ ಖಾನ್ ಮನೆಯ ಸುತ್ತಲೂ ಸಾವಿರಾರು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು, ಆದರೆ ಈ ವೇಳೆ 6 ಉಗ್ರರು ಸಿಕ್ಕಿದ್ದಾರೆ.

ಇಮ್ರಾನ್ ಮನೆಯಲ್ಲಿ ಉಗ್ರರಿಗೆ ರಾಜಾಥಿತ್ಯ!
ಪಂಜಾಬ್ ಪೊಲೀಸರು ಇಮ್ರಾನ್ ಖಾನ್‌ನ ಮನೆ ಒಳಗೆ ನುಗ್ಗಿ ಪರಿಶೀಲನೆ ನಡೆಸಿದಾಗ ಗೊತ್ತಾಗಿದ್ದು ಆಘಾತಕಾರಿ ಸಂಗತಿ. ಅದೇನೆಂದರೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆಸಿ, 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಮಾಡಿರುವ ಉಗ್ರರ ಪಡೆ ಇಮ್ರಾನ್ ಖಾನ್ ಮನೆಯಲ್ಲೇ ಜಾಗ ಪಡೆದಿತ್ತು. ಹಿಂಸಾಚಾರ ನಡೆಸಿದ್ದವರಿಗೆ ಇಮ್ರಾನ್ ಮನೆಯ ಕಾಂಪೌಂಡ್ ಆವರಣದಲ್ಲಿ ಟೆಂಟ್‌ಗಳನ್ನ ಹಾಕಿ, ರಾಜಾಥಿತ್ಯ ನೀಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅಲರ್ಟ್ ಆದ ಪಂಜಾಬ್ ಪ್ರಾಂತ್ಯದ ಪೊಲೀಸರು, ಎಲ್ಲವನ್ನೂ ವಿಡಿಯೋ ಮಾಡಿ 6 ಉಗ್ರರನ್ನ ಬಂಧಿಸಿದ್ದಾರೆ.
ಮತ್ತೆ ಜೈಲಿಗೆ ಹೋಗ್ತಾರಾ ಇಮ್ರಾನ್ ಖಾನ್?
ಅಂದಹಾಗೆ ಈಗಿನ ಪರಿಸ್ಥಿತಿ ನೋಡುತ್ತಿದ್ರೆ ಇಮ್ರಾನ್ ಖಾನ್ ಮತ್ತೆ ಜೈಲಿಗೆ ಹೋಗೋದು ಬಹುತೇಕ ಪಕ್ಕಾ. ಈಗ ಇಮ್ರಾನ್ ಮನೆಯಲ್ಲಿ 6 ಉಗ್ರರು ಬೇರೆ ಲಾಕ್ ಆಗಿದ್ದಾರೆ, ಇದರ ಜೊತೆಗೆ ತಮ್ಮನ್ನು ಬಂಧನ ಮಾಡದಂತೆ ಇದೇ ಇಮ್ರಾನ್ ಖಾನ್ ಎಂಬ ಮಹಾಶಯ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದ. ಆದರೆ ತಡೆಯಾಜ್ಞೆ ಕೂಡ ಇದೀಗ ಖತಂ ಆಗಿದೆ. ಹೀಗಾಗಿ ಇಮ್ರಾನ್ ಖಾನ್ ಲಾಕ್ ಆಗಿ, ಕಂಬಿ ಎಣಿಸೋದು ಬಹುತೇಕ ಗ್ಯಾರಂಟಿ. ಈ ಮೂಲಕ ಮತ್ತೆ ಮತ್ತೆ ಜೈಲಿಗೆ ಹೋದ ಪಾಕಿಸ್ತಾನದ ಮಾಜಿ ಪ್ರಧಾನಿ ಎಂಬ ಕುಖ್ಯಾತಿ ಇಮ್ರಾನ್ ಖಾನ್‌ಗೆ ಸಿಗಲಿದೆ.

ಅದೆಂತಹ ದೇಶವೋ ಈ ಪಾಕಿಸ್ತಾನ?
ಈಗಾಗಲೇ ಪಾಕಿಸ್ತಾನ ಸೇನೆ & ಪಾಕಿಸ್ತಾನದ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಹಲವು ಪಿತೂರಿ ಮಾಡಿದೆ. ಅದರಲ್ಲಿ ಇದೂ ಕೂಡ ಒಂದು ಎಂದು ಆರೋಪಿಸಲಾಗುತ್ತಿದೆ. ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಹಾಗೇ ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಇಮ್ರಾನ್‌ಗೆ (Imran Khan Arrest) ಪಾಠ ಕಲಿಸಬಹುದು ಎಂಬ ತಂತ್ರ ಅಡಗಿರಬಹುದು. ಹೀಗೆ ಪಾಕಿಸ್ತಾನ ತಾನು ಎಂತಹ ದೇಶ ಅನ್ನೋದನ್ನ ಮತ್ತೊಮ್ಮೆ ಜಗತ್ತಿಗೇ ತೋರಿಸುತ್ತಿದೆ.
ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರ
ಇಮ್ರಾನ್ ವಿರುದ್ಧ ಪಾಕಿಸ್ತಾನ ಸೇನೆ & ಪಾಕಿಸ್ತಾನ ಗುಪ್ತಚರ ಸಂಸ್ಥೆ ISI ಮಸಲತ್ತು ನಡೆಸುತ್ತಿರುವ ಆರೋಪ ಇತ್ತು. ಈ ಸಂದರ್ಭದಲ್ಲಿ ಪಾಕ್ ಸರ್ಕಾರ ಕೂಡ ಇವರ ಜೊತೆ ಕೈಜೋಡಿಸಿದ ಗಂಭೀರ ಆರೋಪ ಕೇಳಿಬಂದಿತ್ತು. ಮೇ 9ರ ನಂತರ ಖಾನ್‌ನ ಗ್ಯಾಂಗ್ ನಡೆಸಿರುವ ಹಿಂಸೆಗೆ ಖಾನ್ ಹೊಣೆ ಮಾಡಲು ಯತ್ನಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಾಮೀನು ಪಡೆಯಲು ಇಮ್ರಾನ್ ಲಾಹೋರ್ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರವಾಗಲಿದೆ. ಆದರೆ ಅದಕ್ಕೂ ಮೊದಲೇ ಖಾನ್ ಮನೆಯಲ್ಲಿ ಉಗ್ರರು ಸಿಕ್ಕಿಬಿದ್ದಿದ್ದಾರೆ.












Click it and Unblock the Notifications