ಇರಾಕಿ ಉಗ್ರರಿಂದ 'ಏಡ್ಸ್ ಬಾಂಬ್' ಬೀಳಲಿದೆ ಎಚ್ಚರ!
ಡಮಾಸ್ಕಸ್, ಆಗಸ್ಟ್ 21: ಆತ್ಮಾಹುತಿ ಬಾಂಬ್ ದಾಳಿಗಳ ಮೂಲಕ ಭಯೋತ್ಪಾದನೆ ಮಾಡುವ ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಗೆ ಈಗ ದಾಳಿ ಮಾಡಲು ಹೊಸ ಮಾರಣಾಂತಿಕ ಅಸ್ತ್ರ ಸಿಕ್ಕಿದೆ.
ಅಮಾನುಷವಾಗಿ ಕತ್ತು ಕತ್ತರಿಸಿ ಹಾಕುವ ಉಗ್ರರು ಆತ್ಮಾಹುತಿ ದಾಳಿಗಾಗಿ ಇತ್ತೀಚೆಗೆ 16 ಜನರನ್ನು ನೇಮಿಸಿಕೊಂಡಿದ್ದಾರೆ. ಈ ಎಲ್ಲಾ 16 ಜನ ಉಗ್ರ ಪಡೆ ಎಚ್ ಐವಿ ಪೀಡಿತರಾಗಿದ್ದು, ಏಡ್ಸ್ ಬಾಂಬ್ ಆಗಿ ಮಾರಕವಾಗಿ ದಾಳಿ ನಡೆಸಲು ಯೋಜಿಸಿದೆ.

ಡೈಲಿ ಮೇಲ್ ವರದಿಯಂತೆ, ಐಎಸ್ ಐಎಸ್ ನಾಯಕರು ತಮ್ಮ ಹೊಸ ಏಡ್ಸ್ ಬಾಂಬ್ ಪಡೆಗೆ ಈ ಹೊಸಬರನ್ನು ಸೇರಿಸಿಕೊಳ್ಳುವುದಕ್ಕೂ ಮುನ್ನ ಪೂರ್ವ ಸಿರಿಯಾದ ನಗರಗಳ ಆಸ್ಪತ್ರೆಗಳಲ್ಲಿ ಪರೀಕ್ಷಿಸಿದ್ದಾರೆ. ಮೊರಾಕ್ಕಾದ ಸೆಕ್ಸ್ ಜೀತದಾಳುಗಳಿಂದ ಇವರಿಗೆ ಎಚ್ ಐವಿ ಸೋಂಕು ತಗುಲಿರುವುದು ಪತ್ತೆಯಾಗಿದೆ.[ಉಗ್ರರಿಂದ ಬಚಾವಾದ ಶಿಕ್ಷಕ ವಿಜಯ್ ಹೇಳಿದ ಕಿಡ್ನಾಪ್ ಕಥೆ]
ಸಿರಿಯಾದಿಂದ ತಪ್ಪಿಸಿಕೊಂಡ ಇಬ್ಬರು ಮೊರಕ್ಕಾದ ಮಹಿಳೆಯರಿಂದ ಈ ಸೋಂಕು ತಗುಲಿದ್ದು, ಯುವಕರಿಗೆ ಸೋಂಕು ತಗುಲಿಸಿದ್ದರ ಬಗ್ಗೆ ಆ ಮಹಿಳೆಯರಿಗೆ ತಿಳಿದಿಲ್ಲ.[ಭಾರತೀಯರೆಂದರೆ ಲೈಂಗಿಕ ಗುಲಾಮರಂತೆ!]
ಎಚ್ಐವಿ ಪೀಡಿತ ಹದಿನಾರು ಉಗ್ರರನ್ನು ಈಗ ಪ್ರತ್ಯೇಕ ಕೇಂದ್ರವೊಂದರಲ್ಲಿ ಇರಿಸಲಾಗಿದೆ. ಆತ್ಮಾಹುತಿ ಬಾಂಬರ್ ಇವರನ್ನು ಬಳಸಲು ಇರಾಕಿ ಉಗ್ರ ಸಂಘಟನೆ ಯೋಜಿಸಲಿದೆ ಎಂದು ವರದಿ ಬಂದಿದೆ. ಈ ಸುದ್ದಿಯನ್ನು ಕೇಳಿಸಿಕೊಳ್ಳಿ: [ಜೀಹಾದಿಗಳು ಎಂಥೆಂತಾ ಜೋಕ್ ಮಾಡ್ತಾರಪ್ಪಾ!]












Click it and Unblock the Notifications