ಪೇಶಾವರ ಕೃಷಿ ವಿವಿಯಲ್ಲಿ ರಕ್ತದೋಕುಳಿ ಹರಿಸಿದ ತಾಲಿಬಾನ್ ಉಗ್ರರು

Posted By:
Subscribe to Oneindia Kannada

ಇಸ್ಲಾಮಾಬಾದ್, ಡಿಸೆಂಬರ್ 1: ಪಾಕಿಸ್ತಾನದಪೇಶಾವರದಲ್ಲಿರುವ ಕೃಷಿ ಕಾಲೇಜಿನ ಮೇಲೆ ಪಾಕಿಸ್ತಾನಿ ತಾಲಿಬಾನ್‌ ಉಗ್ರರು ದಾಳಿ ನಡೆಸಿದ ಪರಿಣಾಮ 13 ಜನರು ಸಾವನ್ನಪ್ಪಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಶುಕ್ರವಾರ ಬೆಳಿಗ್ಗೆ ಈ ಕೃತ್ಯ ನಡೆದಿದ್ದು ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕೈಬರ್ ಪಂಖ್ತುಖ್ವಾ ಐಜಿಪಿ ಸಲಾಹುದ್ದೀನ್ ಮೆಹ್ಸೂದ್ ಹೇಳಿದ್ದಾರೆ. ಕಾಲೇಜನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಸೇನೆ ಬರೋಬ್ಬರಿ 2 ಗಂಟೆ ಕಾರ್ಯಾಚರಣೆ ಮಾಡಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

Terror attack on Peshawar Agricultural Training Institute, 13 killed

ಬೆಳಿಗ್ಗೆ ಮಾರುವೇಷದಲ್ಲಿ ಆಟೋ ರಿಕ್ಷಾದಲ್ಲಿ ಕೃಷಿ ವಿದ್ಯಾಲಯಕ್ಕೆ ನುಗ್ಗಿದ ನಾಲ್ವರು ಉಗ್ರರು ದಾಳಿ ನಡೆಸಿ 6 ಜನ ವಿದ್ಯಾರ್ಥಿಗಳು ಮತ್ತು ಇತರ ಮೂವರನ್ನು ಹತ್ಯೆ ಮಾಡಿದ್ದಾರೆ. ಈ ವೇಳೆ ಜೀವ ಉಳಿಸಿಕೊಳ್ಳಲು ಹಲವಾರು ವಿದ್ಯಾರ್ಥಿಗಳು ಕಟ್ಟಡದಿಂದ ಹಾರಿ ಕೈಕಾಲು ಮುರಿದುಕೊಂಡಿದ್ದಾರೆ.

ನಾನು ಹಫೀಜ್ ಸಯೀದ್ ನ ದೊಡ್ಡ ಬೆಂಬಲಿಗ : ಮುಷರಫ್

ಸಾಮಾನ್ಯವಾಗಿ ಕಾಲೇಜಿನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುತ್ತಾರೆ. ಆದರೆ ಶುಕ್ರವಾರವಾಗಿದ್ದರಿಂದ ಕೇವಲ 150 ವಿದ್ಯಾರ್ಥಿಗಳಿದ್ದರು. ಇದರಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ.

2014ರ ಡಿಸೆಂಬರ್‌ನಲ್ಲಿ ಪೇಶಾವರ ಶಾಲೆಯ ಮೇಲೆ ದಾಳಿ ನಡೆಸಿದ್ದ ತಾಲಿಬಾನ್ ಉಗ್ರರು 134ಕ್ಕೂ ಹೆಚ್ಚು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 13 people have been killed at a university in Peshawar, in an attack claimed by the Pakistani Taliban.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ