ಮ್ಯಾನ್‌ಹಟ್ಟನ್‌ನಲ್ಲಿ ಟ್ರಕ್ ಹರಿಸಿ 8 ಪಾದಚಾರಿಗಳ ಹತ್ಯೆ

Posted By:
Subscribe to Oneindia Kannada

ನ್ಯೂಯಾರ್ಕ್, ನವೆಂಬರ್ 1 : ಮ್ಯಾನ್ ಹಟ್ಟನ್ ನ ಜನನಿಬಿಡ ಪ್ರದೇಶದಲ್ಲಿ ಪಾದಚಾರಿಗಳ ಮೇಲೆ ಟ್ರಕ್ ಹರಿಸಿ ಶಂಕಿತ ಉಗ್ರಗಾಮಿಯೊಬ್ಬ ಎಂಟಕ್ಕೂ ಹೆಚ್ಚು ಜನರನ್ನು ಹತ್ಯೆಗೈದಿದ್ದಾನೆ.

ಸೆಪ್ಟೆಂಬರ್ 11ರಂದು ಸಂಭವಿಸಿದ್ದ ಭಯೋತ್ಪಾದಕ ದಾಳಿಯ ನಂತರ ನ್ಯೂಯಾರ್ಕ್ ನಲ್ಲಿ ಮಂಗಳವಾರ ನಡೆದ ಈ ಕೃತ್ಯ ಅತ್ಯಂತ ಭೀಕರ ದಾಳಿಯಾಗಿದೆ.

ಉಜ್ಬೇಕಿಸ್ತಾನದ 29 ವರ್ಷದ ವ್ಯಕ್ತಿಯೊಬ್ಬ, ತಾನು ಐಸಿಸ್ ಬೆಂಬಲಿಗ ಎಂದು ಹೇಳಿಕೊಂಡಿದ್ದು, ಬಾಡಿಗೆ ಟ್ರಕ್ ಅನ್ನು ಬೈಸಿಕಲ್ ಟ್ರಾಕ್ ಮೇಲೆ ಹೋಗುತ್ತಿದ್ದ ಜನರ ಮೇಲೆ ಹರಿಸಿದ್ದಾನೆ.

Terror attack in Manhattan : Man plows truck on pedestrian killing many

ಅಡ್ಡಾದಿಡ್ಡಿ ಚಲಿಸಿ ನಂತರ ಟ್ರಕ್ ಅನ್ನು ಶಾಲಾ ವಾಹನವೊಂದಕ್ಕೆ ಗುದ್ದಿದ್ದಾನೆ. ನಂತರ ಟ್ರಕ್ ನಿಂದಿಳಿದು ಅಮೆರಿಕದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Terror attack in Manhattan : A Man plows through truck on pedestrian killing at least 8 people on Tuesday. The Manhattan attack suspect is a 29-year-old from Uzbekistan who came to the U.S. in 2010.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ