• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಾನ್-ಅಮೆರಿಕ ಸಂಬಂಧ ಮತ್ತಷ್ಟು ಹಾಳು; ಯುಎಇಯಲ್ಲಿ ತೈಲ ಟ್ಯಾಂಕರ್ ಗೆ ದಾಳಿಯಲ್ಲಿ ಹಾನಿ

By ಅನಿಲ್ ಆಚಾರ್
|

ರಿಯಾದ್ (ಸೌದಿ ಅರೇಬಿಯಾ), ಮೇ 13: ಅಮೆರಿಕ ಹಾಗೂ ಇರಾನ್ ಮಧ್ಯೆ ಸಂಬಂಧ ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ಎರಡು ತೈಲ ಟ್ಯಾಂಕರ್ ಗಳು ಅಮೆರಿಕದ 'ವಿಧ್ವಂಸಕ ದಾಳಿ'ಗೆ ಹಾನಿಗೀಡಾಗಿವೆ ಎಂದು ಸೌದಿ ಅರೇಬಿಯಾವು ಸೋಮವಾರ ಪರೋಕ್ಷವಾಗಿ ತಿಳಿಸಿದೆ. ಈ ಮಧ್ಯೆ ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪೆ ಮಾಸ್ಕೋಗೆ ತೆರಳಬೇಕಿದ್ದವರು, ಆ ಪ್ರವಾಸದ ವೇಳಾಪಟ್ಟಿ ಬದಲಿಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಯುರೋಪಿಯನ್ ಅಧಿಕಾರಿಗಳ ಜತೆ ಇರಾನ್ ಬಗ್ಗೆ ಮಾತುಕತೆ ಸಲುವಾಗಿ ಪೊಂಪೆ ಬ್ರಸೆಲ್ಸ್ ತೆರಳಿದ್ದಾರೆ. ಇರಾನ್ ನಿಂದ ಈಗಾಗಲೇ ಯಾವುದೇ ಎಚ್ಚರಿಕೆಯ ದಾಳಿ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ. ವಿದೇಶಿ ಶಕ್ತಿಗಳಿಂದ ನಡೆಯಬಹುದಾದ ಯಾವುದೇ ನೌಕಾ ಸಾಹಸದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಈ ಭಾಗದಲ್ಲಿ ಅಮೆರಿಕವು ಈಗಾಗಲೇ ಸೇನಾ ಬಲವನ್ನು ಹೆಚ್ಚಿಸಿದೆ. ಇರಾನ್ ನಿಂದ ಯಾವುದೇ ಆತಂಕ ಎದುರಾದಲ್ಲಿ B-52 ಬಾಂಬರ್ ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಸೌದಿ ಅರೇಬಿಯಾವು ಇಸ್ಲಾಮಿಕ್ ರಾಷ್ಟ್ರವಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಜಲ ಗಡಿ ಸಮೀಪ ವಾಣಿಜ್ಯ್ ಮತ್ತು ನಾಗರಿಕ ಸ್ಥಳಗಳನ್ನು ಗುರಿ ಮಾಡಿಕೊಂಡು ವಿಧ್ವಂಸಕ ದಾಳಿ ನಡೆಸುವುದನ್ನು ಖಂಡಿಸಿದೆ.

ಎರಡು ಟ್ಯಾಂಕರ್ ಗಳಿಗೆ ಗಂಭೀರ ಹಾನಿ

ಎರಡು ಟ್ಯಾಂಕರ್ ಗಳಿಗೆ ಗಂಭೀರ ಹಾನಿ

ನೌಕಾ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರವಾದ ಅತಂಕ ತಂದೊಡ್ಡುವ ಕೃತ್ಯ ಇದಾಗಲಿದೆ. ಇದರಿಂದ ಪ್ರಾದೇಶಿಕವಾಗಿ ಹಾಗೂ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಮೇಲೆ ಪ್ರಭಾವ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಎಮಿರೇಟ್ ಆಫ್ ಫ್ಯುಜೈರಾದಲ್ಲಿ ವಿವಿಧ ರಾಷ್ಟ್ರಕ್ಕೆ ಸೇರಿದ ನಾಲ್ಕು ವಾಣಿಜ್ಯ ಹಡಗುಗಳನ್ನು ಗುರಿ ಮಾಡಿಕೊಂಡು ವಿಧ್ವಂಸಕ ದಾಳಿ ನಡೆಸಲಾಗಿದೆ ಎಂದು ಯುಎಇ ಹೇಳಿದೆ. ಸೌದಿಯ ಇಂಧನ ಸಚಿವ ಖಲೀದ್ ಅಲ್-ಫಲೀಹ್ ಮಾತನಾಡಿ, ಎರಡು ಟ್ಯಾಂಕರ್ ಗಳಿಗೆ ಗಂಭೀರ ಹಾನಿಯಾಗಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಅಥವಾ ತೈಲ ಸೋರಿಕೆ ಆಗಿಲ್ಲ. ಹರ್ಮಜ್ ಜಲಸಂಧಿ, ಅರೇಬಿಯನ್ ಕಡಲ ತೀರದ ಯುಎಇಯಲ್ಲಿ ಇರುವ ಏಕೈಕ ಬಂದರು ಫ್ಯುಜೈರಾ. ಅದರ ಮೂಲಕವೇ ಗಲ್ಫ್ ನ ತೈಲವು ಸಾಗಿಹೋಗುತ್ತದೆ.

ಸಂಚಾರಕ್ಕೆ ಜಲಸಂಧಿ ಲಭ್ಯ ಇರದಂತೆ ಮುಚ್ಚುವ ಬೆದರಿಕೆ

ಸಂಚಾರಕ್ಕೆ ಜಲಸಂಧಿ ಲಭ್ಯ ಇರದಂತೆ ಮುಚ್ಚುವ ಬೆದರಿಕೆ

ಅಮೆರಿಕವು ಕದನಕ್ಕೆ ಇಳಿದರೆ ಆ ಜಲಸಂಧಿಯನ್ನು ಸಂಚಾರಕ್ಕೆ ಲಭ್ಯ ಇರದಂತೆ ಮುಚ್ಚಿಬಿಡುವುದಾಗಿ ಇರಾನ್ ಪದೇಪದೇ ಬೆದರಿಕೆ ಹಾಕಿದೆ. ಇದೀಗ ದಾಳಿ ಆಗಿರುವ ಟ್ಯಾಂಕರ್ ಪೈಕಿ ಒಂದರಲ್ಲಿ ಕಚ್ಚಾ ತೈಲ ಇತ್ತು. ಸೌದಿಯಿಂದ ಅಮೆರಿಕದ ಗ್ರಾಹಕರಿಗೆ ಅದನ್ನು ಕಲುಹಿಸಲಾಗುತ್ತಿತ್ತು ಎಂದು ಫಲಿಹ್ ತಿಳಿಸಿದ್ದಾರೆ. ಯುಎಇಯಿಂದ ಯಾರ ಮೇಲೂ ಆರೋಪ ಮಾಡಿಲ್ಲ. ಆದರೆ, ನಾಗರಿಕ ಹಾಗೂ ವಾಣಿಜ್ಯ ಹಡಗುಗಳ ಮೇಲೆ ನಡೆಯುವ ಇಂಥ ದಾಳಿಯು ಸುರಕ್ಷತೆಗೆ ಹಾಗೂ ಹಡಗಿನಲ್ಲಿ ಇರುವವರ ಜೀವಕ್ಕೆ ಅಪಾಯಕಾರಿ ಮತ್ತು ಇದು ಗಂಭೀರವಾದ ಬೆಳವಣಿಗೆ ಎಂದು ಹೇಳಿದೆ. ಈ ವರೆಗೆ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ನೌಕಾ ಸಂಚಾರವನ್ನು ಸುರಕ್ಷಿತವಾಗಿ ಇರಿಸಲು ವಿಶ್ವದ ಶಕ್ತಿಶಾಲಿ ರಾಷ್ಟ್ರಗಳು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಪ್ರತಿ ದಿನ ರಫ್ತಾಗುವ ಹದಿನೈದು ಮಿಲಿಯನ್ ಬ್ಯಾರಲ್ ತೈಲ

ಪ್ರತಿ ದಿನ ರಫ್ತಾಗುವ ಹದಿನೈದು ಮಿಲಿಯನ್ ಬ್ಯಾರಲ್ ತೈಲ

ಈಗಿನ ಘಟನೆಗಳು ಮತ್ತು ಅದರ ಸಂಭವನೀಯ ಪರಿಣಾಮಗಳ ಬಗ್ಗೆ ಇರಾನ್ ನ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅಬ್ಬಾಸ್ ಮೌಸವಿ ಆತಂಕ ವ್ಯಕ್ತಪಡಿಸಿದ್ದಾರೆ. ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್, ಕತಾರ್ ಮತ್ತು ಸ್ವತಃ ಇರಾನ್ ನಿಂದ ಪ್ರತಿ ದಿನ ರಫ್ತಾಗುವ ಹದಿನೈದು ಮಿಲಿಯನ್ ಬ್ಯಾರಲ್ ತೈಲವು ಹರ್ಮಜ್ ಜಲಸಂಧಿ ಮೂಲಕವೇ ಹಾದುಹೋಗುತ್ತದೆ. ನಾಲ್ಕು ವರ್ಷದ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಗೌರವಿಸುವುದಕ್ಕೆ ಆಗುವುದಿಲ್ಲ ಎಂದು ಇರಾನ್ ಕಳೆದ ಬುಧವಾರ ಹೇಳಿಕೆ ನೀಡಿದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಅಮೆರಿಕದ ಪೊಂಪೆ ತಮ್ಮ ಪ್ರವಾಸ ಯೋಜನೆ ಬದಲಿಸಿ, ಸೊಮವಾರದಂದು ಬ್ರಸೆಲ್ಸ್ ಅನ್ನು ಕೂಡ ಭೇಟಿ ಸ್ಥಳದಲ್ಲಿ ಸೇರಿಸಿದ್ದಾರೆ. ಫ್ರೆಂಚ್, ಬ್ರಿಟಿಷ್, ಜರ್ಮನ್ ಅಧಿಕಾರಿಗಳ ಜತೆಗೆ ಇರಾನ್ ಸೇರಿದಂತೆ ವಿವಿಧ ವಿಚಾರಗಳ ಚರ್ಚೆ ನಡೆಸಲಿದ್ದಾರೆ.

ಆತಂಕದ ವಾತಾವರಣ ಸೃಷ್ಟಿ ಆಗಿದೆ

ಆತಂಕದ ವಾತಾವರಣ ಸೃಷ್ಟಿ ಆಗಿದೆ

ಇರಾನ್ ಬಳಿ ಇರುವ ಅಣ್ವಸ್ತ್ರವು ನಿಯಮ ಉಲ್ಲಂಘನೆಯ ಪ್ರತೀಕ. ಅದು ಮಾಡಿಕೊಂಡಿದ್ದ ಒಪ್ಪಂದಕ್ಕೆ ಬದ್ಧವಾಗಿರಬೇಕು ಎಂಬುದು ಅಮೆರಿಕದ ತಾಕೀತು. ಅದಕ್ಕಾಗಿ ಇರಾನ್ ಮೇಲೆ ಅಮೆರಿಕವು ವಿವಿಧ ರೀತಿಯ ಆರ್ಥಿಕ ದಿಗ್ಬಂಧನವನ್ನು ಹೇರಿತು. ಹೀಗೆ ಏಕಪಕ್ಷೀಯವಾಗಿ ಇರಾನ್ ಮೇಲೆ ದಿಗ್ಬಂಧನ ಹೇರಿದ್ದರಿಂದ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿತು. ಆ ಕಾರಣಕ್ಕೆ ಈ ಹಿಂದಿನ ಒಪ್ಪಂದಕ್ಕೆ ಇನ್ನು ತಾನು ಬದ್ಧವಾಗಿರಲು ಸಾಧ್ಯವಿಲ್ಲ ಎಂದು ಇರಾನ್ ಘೋಷಣೆ ಮಾಡಿತು. ಆ ನಂತರ ಅಮೆರಿಕವು ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿ, ಇರಾನ್ ಸುತ್ತಮುತ್ತ ಆತಂಕ ಸೃಷ್ಟಿ ಆಗಿದೆ.

English summary
Tension soar between America and Iran, two oil tanker in UAE damaged in sabotage attack. Here is the latest development of crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more