ಕ್ಯಾಲಿಫೋರ್ನಿಯಾದಲ್ಲಿ ತೆಲಂಗಾಣ ಯುವಕನ ಹತ್ಯೆ

Posted By:
Subscribe to Oneindia Kannada

ಹೈದರಾಬಾದ್, ಫೆಬ್ರವರಿ 13: ಸುಮಾರು ಮೂರು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ತೆಲಂಗಾಣದ ವಾರಂಗಲ್ ಜಿಲ್ಲೆಯ ವಿ. ವಂಶಿ ರೆಡ್ಡಿ (27) ಎಂಬಾತನನ್ನು ಭಾನುವಾರ ರಾತ್ರಿ ಅಪರಿಚಿತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ದರೋಡೆಗಾಗಿಯೇ ವಂಶಿಯವರನ್ನು ಕೊಲ್ಲಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಂಶಿ ಇದ್ದ ಅಪಾರ್ಟ್ ಮೆಂಟ್ ಬಳಿಯಲ್ಲೇ ಅವರನ್ನು ಹತ್ಯೆಗೈಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Telangana youth killed in Shootout in California

ಪೊಲೀಸ್ ಮೂಲಗಳ ಪ್ರಕಾರ, ಕ್ಯಾಲಿಫೋರ್ನಿಯಾದಲ್ಲಿ ಅರೆಕಾಲಿಕ ಕೆಲಸದಲ್ಲಿದ್ದ ವಂಶಿ ಕೆಲಸದಿಂದ ತಮ್ಮ ಅಪಾರ್ಟ್ ಮೆಂಟ್ ಕಡೆಗೆ ವಾಪಸ್ಸಾಗುತ್ತಿದ್ದಾಗ ವ್ಯಕ್ತಿಯೊಬ್ಬನು ಅವರ ಕಾರನ್ನು ತಡೆದಿದ್ದಾನೆ. ತಕ್ಷಣವೇ ವಂಶಿಗೆ ಪಿಸ್ತೂಲಿನಿಂದ ಹೆದರಿಸಿ ಆತನ ಪರ್ಸ್ ಕಿತ್ತುಕೊಂಡಿದ್ದಾನೆ. ಪರ್ಸ್ ಕಿತ್ತುಕೊಂಡ ನಂತರ ವಂಶಿಗೆ ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

2013ರಲ್ಲಿ ಅಮೆರಿಕಕ್ಕೆ ತೆರಳಿದ್ದ ವಂಶಿ, ಅಲ್ಲಿನ ಸಿಲಿಕಾನ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮುಗಿಸಿದ್ದರು. ವ್ಯಾಸಂಗ ಮುಗಿಸಿದ ಮೇಲೆ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಅವರು, ಸದ್ಯದ ಮಟ್ಟಿಗೆ ಜೀವನೋಪಾಯಕ್ಕಾಗಿ ಅಂಗಡಿಯೊಂದರಲ್ಲಿ ಅರೆಕಾಲಿಕ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Telangana youth, Vamshi Reddy has been killed in a shootout by unidentified gun man in California Sunday night. In 2013, he had been to America to procure degree in M.S.
Please Wait while comments are loading...