ಆಟಿಕೆ ಪಿಸ್ತೂಲಿಂದ ಬ್ಯಾಂಕ್ ದರೋಡೆ ಮಾಡಿದ ಬಾಲಕ

ಅದನ್ನು ಕಂಡುಬೆಚ್ಚಿಬಿದ್ದ ಸಿಬ್ಬಂದಿ ಅವನ ಆದೇಶವನ್ನು ಪಾಲಿಸುತ್ತಾ, ಬ್ಯಾಂಕ್ ದರೋಡೆಗೆ ಮೌನ ಸಾಕ್ಷಿಯಾಗಿ ನಿಂತಿದ್ದಾರೆ. ಆದರೆ ಅವನ್ನು ಕೈಯಲ್ಲಿ ಹಿಡಿದಿದ್ದು ನಿಜವಾದ ಪಿಸ್ತೂಲು ಅಲ್ಲ. ಬದಲಿಗೆ, ಅವನು ಆಟಕ್ಕಾಗಿ ಬಳಸುತ್ತಿದ್ದ ಪಿಸ್ತೂಲು.
ಆದರೂ ಸಲೀಸಾಗಿ ಬ್ಯಾಂಕ್ ದೋಚಿದ ಹದಿಹರಯದ ಬಾಲಕ ಹಣ ದೋಚಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಹಾಗೆ ಪಾರಾಗಲು ಅವನು ಬಳಸಿದ ಸಾಧನ ಅವನಿಗೆ ಕೈಕೊಟ್ಟಿದೆ. ಏಕೆಂದರೆ ಅಬೋಧ ಬಾಲಕ ಬ್ಯಾಂಕ್ ದೋಚಿದ ಬಳಿಕ ಪರಾರಿಯಾಗಲು ಬಳಸಿದ್ದು ಸೈಕಲ್ ಅನ್ನು. ಸೈಕಲ್ಲಿನಲ್ಲಿ ಎಷ್ಟೂ ಅಂತ ವೇಗವಾಗಿ ಪರಾರಿಯಾಗಲು ಸಾಧ್ಯ. ಸಿಬ್ಬಂದಿ ಮತ್ತು ಪೊಲೀಸರು ಅವನ ಮೇಲೆ ಮುಗಿಬಿದ್ದು, ಹಿಡಿದು ಹಾಕಿದ್ದಾರೆ.
ಜರ್ಮನಿಯ ದಕ್ಷಿಣ ಭಾಗದಲ್ಲಿರುವ Bad Fuessingನ ಬವೇರಿಯಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ಸಮೀಪದಲ್ಲೇ ಇರುವ ಆಸ್ಟ್ರಿಯಾಕ್ಕೆ ಪರಾರಿಯಾಗುವುದು ಬಾಲಕನ ಉದ್ದೇಶವಾಗಿತ್ತು. ಆದರೆ ಸೈಕಲ್ ಬಳಸಿದ್ದೇ ಅವನಿಗೆ ಮುಳುವಾಗಿದ್ದು, ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.












Click it and Unblock the Notifications