ಅಫ್ಘಾನಿಸ್ತಾನದ ಶೇ.75ರಷ್ಟು ಭಾಗದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್

ಕಾಬೂಲ್, ಆಗಸ್ಟ್ 14: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದೆ. ಇದೀಗ ಕಾಬೂಲ್‌ಗೆ ಹತ್ತಿರವಿರುವ ಮತ್ತೆ ನಾಲ್ಕು ನಗರಗಳನ್ನು ವಶಪಡಿಸಿಕೊಂಡಿದೆ.

ಕಾಬೂಲ್‌: ಅಫ್ಗಾನಿಸ್ತಾನದ ದಕ್ಷಿಣ ಭಾಗವನ್ನು ದಾಟಿ ಮತ್ತೆ ನಾಲ್ಕು ಪ್ರಮುಖ ನಗರಗಳನ್ನು ತಾಲಿಬಾನ್‌ ಶುಕ್ರವಾರ ವಶಪಡಿಸಿಕೊಂಡಿದೆ. ಆ ಮೂಲಕ ಅಫ್ಘಾನಿಸ್ತಾನದ ಶೇ 75 ಭಾಗದ ಮೇಲೆ ತಾಲಿಬಾನ್‌ ಹಿಡಿತ ಸಾಧಿಸಿದಂತಾಗಿದೆ.

ತಾಲಿಬಾನ್‌ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಬಲ್ಯವನ್ನು ತೀವ್ರ ಗತಿಯಲ್ಲಿ ಸಾಧಿಸುತ್ತಿರುವುದು ಅಫ್ಗಾನಿಸ್ತಾನದ ಸರ್ಕಾರವನ್ನು ಚಿಂತೆಗೀಡು ಮಾಡಿದೆ.

Taliban Sweep Across Afghanistans South; Take 4 More Cities

ಹಲವೆಡೆ ಯುದ್ಧದ ಸ್ಥಳಗಳಿಂದ ವಿಶೇಷ ಕಾರ್ಯಾಚರಣೆ ಪಡೆಗಳೇ ಪಲಾಯನಗೈದಿವೆ. ಅಪಾರ ವೆಚ್ಚ ಮಾಡಿ ತರಬೇತಿ ಪಡೆದಿದ್ದರೂ ಸೇನಾ ಪಡೆಗಳು ಯುದ್ಧ ಭೂಮಿಯಿಂದ ಓಡಿ ಹೋಗುತ್ತಿರುವುದು ಏಕೆ ಎನ್ನುವ ಪ್ರಶ್ನೆ ಸರ್ಕಾರವನ್ನು ಕಾಡುತ್ತಿದೆ. ಲವೆಡೆ ಸಂಭವಿಸಿರುವ ಹಿಂಸಾಚಾರದಿಂದಾಗಿ ಸಾವಿರಾರು ಮಂದಿ ಕಾಬೂಲ್‌ನಲ್ಲಿ ಆಶ್ರಯ ಪಡೆದಿದ್ದಾರೆ.

ಎರಡು ದಶಕಗಳ ಅವಧಿಯಲ್ಲಿ ಅಮೆರಿಕ, ಬ್ರಿಟನ್ ಮತ್ತು ನ್ಯಾಟೋ ಪಡೆಗಳು ಅತಿಹೆಚ್ಚು ದಾಳಿಗಳನ್ನು ನಡೆಸಿದ ಹೆಲ್ಮಾಂಡ್ ಪ್ರಾಂತವನ್ನು ಬಂಡುಕೋರರು ವಶಪಡಿಸಿಕೊಂಡಿದ್ದಾರೆ. ಇದು ಕಾಬೂಲ್'ಗೆ ಸನಿಹದಲ್ಲಿದೆ. ಜೊತೆಗೆ ಜಬುಲ್ ಹಾಗೂ ಉರುಜ್ಗಲ್ ಎಂಬ ಇನ್ನೆರಡು ಪ್ರಾಂತಗಳನ್ನೂ ವಶಪಡಿಸಿಕೊಂಡಿದ್ದಾರೆ.

ಬಹುತೇಕ ಈಗ ತಾಲಿಬಾನಿಗಳು ರಾಜಧಾನಿ ಕಾಬೂಲ್‌ನ್ನು ಸುತ್ತುವರೆದಂತಾಗಿದ್ದು, ರಾಜಧಾನಿ ರಕ್ಷಣೆಗೆ ಆಫ್ಘಾನಿಸ್ತಾನ ಸರ್ಕಾರ ಹೋರಾಡುತ್ತಿದೆ. ತಾಲಿಬಾನ್ ಉಗ್ರರು ಕಂದಹಾರ್‌ ವಶಪಡಿಸಿಕೊಂಡಿರುವ ಬಗ್ಗೆ ನಿನ್ನೆ ಬೆಳಿಗ್ಗೆ ವರದಿಯಾಗಿತ್ತು.

ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್​ ಅನ್ನು ಕೂಡ ತಾಲಿಬಾನ್ ಪಡೆಗಳು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳಲ್ಲಿ ಕಂದಹಾರ್ 12ನೇ ಪ್ರಾಂತೀಯ ರಾಜಧಾನಿಯಾಗಿದೆ. ಕಂದಹಾರ್'ನ್ನೂ ಕೂಡ ತಾಲಿಬಾನ್ ವಶಕ್ಕೆ ಪಡೆದುಕೊಂಡಿದ್ದು, ಈ ಮೂಲಕ ತಾಲಿಬಾನಿಗಳು ಅಫ್ಘಾನಿಸ್ತಾನದ ಬಹುಭಾಗವನ್ನು ಈಗಾಗಲೇ ಆವರಿಸಿದ್ದಾರೆಂದು ಹೇಳಲಾಗುತ್ತಿದೆ.

ರಾಜಧಾನಿ ಮತ್ತು ಇತರ ಕೆಲವೇ ಭೂಭಾಗಗಳು ಸರ್ಕಾರದ ನಿಯಂತ್ರಣದಲ್ಲಿದ್ದು, ಉಳಿದಂತೆ ಹೆಚ್ಚಿನ ಭೂಭಾಗ ತಾಲಿಬಾನ್ ಉಗ್ರರ ವಶವಾಗಿವೆ. ಈ ಬೆನ್ನಲ್ಲೇ ಅಲ್ಲಿನ ಸರ್ಕಾರವ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಹೆಣಗಾಡುತ್ತಿದೆ.

'ಕಂದಹಾರ್‌ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದ್ದೇವೆ. ಮುಜಾಹಿದೀನ್, ನಗರದ ಹುತಾತ್ಮರ ಚೌಕ ತಲುಪಿದೆ' ಎಂದು ತಾಲಿಬಾನ್ ವಕ್ತಾರರು ಘೋಷಿಸಿದ್ದಾರೆ.

ಇತ್ತೀಚೆಗಷ್ಟೇ ಈಶಾನ್ಯ ಭಾಗದ ಬದಖ್‌ಷಾನ್‌ ಮತ್ತು ಪಶ್ಚಿಮ ಭಾಗದ ಬಘ್ಲಾನ್‌ ಹಾಗೂ ಫರಾಹ್‌ ಪ್ರಾಂತ್ಯಗಳ ರಾಜಧಾನಿಗಳನ್ನು ತಾಲಿಬಾನ್‌ ವಶಪಡಿಸಿಕೊಂಡಿತ್ತು. ಸದ್ಯ , ದೇಶದ ಮೂರನೇ ಎರಡರಷ್ಟು ಭಾಗ ತಾಲಿಬಾನ್‌ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

ಒಟ್ಟು 34 ಪ್ರಾಂತೀಯ ರಾಜಧಾನಿಗಳಲ್ಲಿ 11 ರಾಜಧಾನಿಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದ್ದು, ಹೆರಾತ್​ನಲ್ಲಿರುವ ಐತಿಹಾಸಿಕ ಮಸೀದಿ 'ಗ್ರೇಟ್ ಮಸೀದಿ' ಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಈ ಮಸೀದಿಯು ಕ್ರಿ.ಪೂ 500ನೇ ವರ್ಷಕ್ಕಿಂತ ಹಿಂದಿನದ್ದಾಗಿದ್ದು, ಅಲೆಕ್ಸಾಂಡರ್​ನಿಂದ ಹಾನಿಗೊಳಗಾಗಿತ್ತು .

ಅಲ್ಲಿನ ಸರ್ಕಾರಿ ಕಟ್ಟಡಗಳೂ ತಾಲಿಬಾನಿಗಳಿಗೆ ವಶವಾಗಿವೆ. ಘಜ್ನಿಯ ಮೇಲೆ ತಾಲಿಬಾನಿ ಉಗ್ರರು ಹಿಡಿತ ಸಾಧಿಸಿದ್ದಾರೆ. ಇದರಿಂದಾಗಿ ಕಾಬೂಲ್ ಮತ್ತು ಇತರ ದಕ್ಷಿಣ ಪ್ರಾಂತ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡಾ ಅವರ ವಶವಾಗಿದೆ. ಈಗ ಅಫ್ಘನ್ ರಾಜಧಾನಿ ತಾಲಿಬಾನ್ ಮೇಲೆ ಸಾಕಷ್ಟು ಒತ್ತಡ ಬಿದ್ದಿದ್ದು, ಸರ್ಕಾರಿ ಪಡೆಗಳು ತಾಲಿಬಾನಿಗಳನ್ನು ಎದುರಿಸಲು ಸದಾ ಸಿದ್ಧವಾಗಿವೆ.

ತಾಲಿಬಾನಿಗಳು ಈಗ ದೇಶದ ಮೂರನೇ ಎರಡರಷ್ಟು ಭಾಗವನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ ಮತ್ತು ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರಿ ಪಡೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಾಲಿಬಾನ್​ನಿಂದ ಅಫ್ಘನ್ ಸರ್ಕಾರ ಮರುವಶಕ್ಕೆ ಪಡೆದುಕೊಂಡ ನಗರಗಳೂ ಮತ್ತೆ ತಾಲಿಬಾನಿಗಳ ವಶವಾಗಿವೆ. ಈ ಬೆಳವಣಿಗೆ ಅಲ್ಲಿನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಈಶಾನ್ಯದ ಬದಾಕ್ಷನ್‌ ಪ್ರಾಂತ್ಯದ ರಾಜಧಾನಿ ಫೈಜಾಬಾದ್‌ ಅನ್ನು ಬುಧವಾರ ಉಗ್ರರು ಆಕ್ರಮಿಸಿದ್ದಾರೆ. ತಾಲಿಬಾನ್‌ ಉಗ್ರರ ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸುತ್ತಿದ್ದರೆ 90 ದಿನಗಳ ಒಳಗೆ ಆಫ್ಘನ್‌ ರಾಜಧಾನಿ ಕಾಬೂಲ್‌ ಸಹ ಉಗ್ರರ ಕೈವಶವಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+