ತಾಲಿಬಾನ್ ಅಲ್ಲ.. ಅಲ್ಲ.. ಟ್ರಂಪ್ ಪಡೆಗೆ ಡಿಚ್ಚಿ ಕೊಟ್ಟು ಭಾರತಕ್ಕೆ ಜೈ ಎಂದ ಅಫ್ಘಾನ್! Bagram Airfield
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಂಡು ಮತ್ತೆ ಮತ್ತೆ ದೊಡ್ಡ ಸೌಂಡ್ ಮಾಡುತ್ತಿದ್ದಾರೆ. ಹೀಗೆಲ್ಲಾ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಎಡವಟ್ಟು ಹಾಗೂ ದಿಢೀರ್ ಆಡುತ್ತಿರುವ ಎಡವಟ್ಟಿನ ಮಾತುಗಳ ಪರಿಣಾಮ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಟ್ರಂಪ್ ಮಹಾಶಯ ಮಾಡಿದ ತಪ್ಪಿನ ಪರಿಣಾಮ ಈಗಾಗಲೇ ಅಮೆರಿಕ ಜೊತೆಗೆ ಭಾರತ ಸೇರಿದಂತೆ ಹಲವು ದೇಶಗಳು ಸಂಬಂಧ ತೊರೆಯುವ ಹಂತಕ್ಕೆ ಬರುವಂತಾಗಿದೆ. ಇಂತಹ ಸಮಯದಲ್ಲೇ ಅತ್ತ ತಾಲಿಬಾನ್ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ!
ಹೌದು, ಡೊನಾಲ್ಡ್ ಟ್ರಂಪ್ ತಮ್ಮ ಮಾತುಗಳ ಮೇಲೆ ಕಂಟ್ರೋಲ್ ಇಲ್ಲದ ರೀತಿ ವರ್ತಿಸುತ್ತಿದ್ದಾರೆ ಎಂಬ ಅವರ ವಿರೋಧಿಗಳ ಆರೋಪ ನಿಜವಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವು ತಿಂಗಳ ಹಿಂದೆ ದಿಢೀರ್ ಕೆನಡಾ ದೇಶವನ್ನೇ ಅಮೆರಿಕ ಜೊತೆ ವಿಲೀನ ಮಾಡಿಕೊಳ್ಳುವ ಮಾತು ಆಡಿದ್ದರು. ಆ ನಂತರ ಗ್ರೀನ್ ಲ್ಯಾಂಡ್ ಖರೀದಿ ಬಗ್ಗೆ ಮಾತನಾಡಿ, ಪನಾಮಾ ಕಾಲುವೆ ಕೂಡ ಒತ್ತುವರಿ ಮಾಡುವ ಆವಾಜ್ ಹಾಕಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಇದಾದ ನಂತರ ಚೀನಾ ಜೊತೆಗೆ ಟ್ಯಾಕ್ಸ್ ವಾರ್ ಮಾಡಲು ಹೋಗಿ ಸರಿಯಾಗೇ ಬುದ್ಧಿ ಕಲಿತು ಸುಮ್ಮನೆ ಆಗಿದ್ದ ಅಮೆರಿಕದ ನೂತನ ಅಧ್ಯಕ್ಷರು ಇದೀಗ ದಿಢೀರ್ ತಾಲಿಬಾನ್ ಆಡಳಿತಕ್ಕೂ ವಾರ್ನಿಂಗ್ ಕೊಟ್ಟಿದ್ದರು.

ಟ್ರಂಪ್ ವಿರುದ್ಧ ರೊಚ್ಚಿಗೆದ್ದ ತಾಲಿಬಾನ್!
ಹೌದು, ಡೊನಾಲ್ಡ್ ಟ್ರಂಪ್ ಅವರ ವರ್ತನೆ ಬಗ್ಗೆ ಇದೀಗ ಅಫ್ಘಾನಿಸ್ತಾನದ ಆಡಳಿತ ನಡೆಸುತ್ತಿರುವ ತಾಲಿಬಾನ್ ಮುಖಂಡರು ರೊಚ್ಚಿಗೆದ್ದಿದ್ದಾರೆ. ತಮ್ಮ ದೇಶವನ್ನು ಅಮೆರಿಕ ಬಿಟ್ಟು ಓಡಿ ಹೋಗಿದ್ದು, ಇದು ನಮ್ಮ ಗೆಲುವು ಅಂತಿದ್ದ ತಾಲಿಬಾನ್ ಮುಖಂಡರನ್ನು ಮತ್ತೊಮ್ಮೆ ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡಿದೆ ಅಮೆರಿಕ. ಹೀಗಾಗಿ ಇದೀಗ ಅಮೆರಿಕ ವಿರುದ್ಧ ಮತ್ತೆ ರೊಚ್ಚಿಗೆದ್ದು ಮಾತನಾಡಿರುವ ಇದೇ ತಾಲಿಬಾನ್ ಮುಖಂಡರು, ನಮ್ಮ ತಂಟೆಗೆ ಬರಬೇಡಿ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಟ್ರಂಪ್ ಪ್ರಸ್ತಾಪ ಮಾಡಿದ್ದ ಬಾಗ್ರಾಮ್ ವಾಯುನೆಲೆ ವಿಚಾರದಲ್ಲಿ ತಲೆ ಹಾಕದಂತೆಯೂ ಸೂಚಿಸಿದೆ ತಾಲಿಬಾನ್.
ಅಮೆರಿಕ ನೀಡುತ್ತಿರುವ ಒತ್ತಡಕ್ಕೆ ಮಣಿಯದ ತಾಲಿಬಾನ್ ಸರ್ಕಾರ ಇದೀಗ ಭಾರತದ ಜೊತೆಗೆ ನಿಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಇದು ಅಮೆರಿಕಗೆ ಮತ್ತೊಂದು ಮುಖಭಂಗ ಕೂಡ ತರಿಸಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಹಾಗೇ ಪಾಕಿಸ್ತಾನ ಕಂಡರೂ ತಾಲಿಬಾನ್ ಸರ್ಕಾರಕ್ಕೆ ಆಗಲ್ಲ, ಹೀಗಾಗಿ ಭಾರತದ ಜೊತೆಗೆ ನಿಲ್ಲಲು ನಿರ್ಧಾರ ಮಾಡಿದಂತೆ ಇದೆ.












Click it and Unblock the Notifications