ಪೋಲಿಯೊ ಲಸಿಕೆಗೆ ತಡೆ ಹಾಕಿದ ತಾಲಿಬಾನಿ ಉಗ್ರರು! ಕಾರಣ ಏನು?

ತಾಲಿಬಾನ್ ಉಗ್ರರ ಕೈಗೆ ಅಫ್ಘಾನಿಸ್ತಾನ ಆಡಳಿತ ಸಿಕ್ಕ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಯಾಕಂದ್ರೆ ತಾಲಿಬಾನಿಗಳು ದಿನಕ್ಕೊಂದು ಹೊಸ ರೂಲ್ಸ್ ತರುತ್ತಿದ್ದಾರೆ. ಅಲ್ಲದೆ, ಇದರಿಂದ ಜನರು ಅಫ್ಘಾನಿಸ್ತಾನ ದೇಶದಲ್ಲಿ ಬದುಕುವುದೇ ಕಷ್ಟಕರ ಎನ್ನುವಂತಾಗಿದೆ. ಹೀಗಿದ್ದಾಗಲೇ ಮಕ್ಕಳ ಲಸಿಕೆ ವಿಚಾರದಲ್ಲೂ ತಾಲಿಬಾನ್ ಉಗ್ರರ ಕಿರಿಕ್ ಶುರುವಾಗಿದೆ. ಹಾಗಾದ್ರೆ ಪೋಲಿಯೊ ವ್ಯಾಕ್ಸಿನ್ ಬಗ್ಗೆ ತಾಲಿಬಾನಿಗಳು ಯಾವ ನಿರ್ಧಾರ ಕೈಗೊಂಡಿದ್ದಾರೆ? ತಾಲಿಬಾನ್ ಆಡಳಿತದ ಬಗ್ಗೆ ವಿಶ್ವಸಂಸ್ಥೆ ರೊಚ್ಚಿಗೆದ್ದಿದ್ದು ಏಕೆ?

ತಾಲಿಬಾನಿ ಆಡಳಿತ ನಡೆಸುತ್ತಿರುವ ಉಗ್ರರದ್ದು ಬರೀ ತಿಕ್ಕಲು ತಿಕ್ಕಲು ನಿರ್ಧಾರ. ಪ್ರತಿಬಾರಿ ಕೂಡ ತಾಲಿಬಾನಿಗಳು ತಮ್ಮ ತಿಕ್ಕಲು ನಿರ್ಧಾರಗಳಿಗೆ ಫೇಮಸ್ ಆಗಿದ್ದಾರೆ. ಯಾಕೆ ಅಂದ್ರೆ, ಸರಿಯಾಗಿ ವಿದ್ಯೆ ಕಲಿಯದ ತಾಲಿಬಾನಿಗಳು ಸಾಂಪ್ರದಾಯಿಕ ಕಾನೂನು ಜಾರಿಗೆ ತರುತ್ತೇವೆ ಅಂತಾ ಓಳು ಬಿಡುತ್ತಾ, ಅಪ್ಘಾನಿಸ್ತಾನದ ಜನರನ್ನ ಹಿಂಸೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ. ಅದರಲ್ಲೂ ತಾಲಿಬಾನಿ ಉಗ್ರರ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರದಲ್ಲಿ, ಅಫ್ಘಾನಿಸ್ತಾನದ ಮಹಿಳೆಯರ ಜೀವಕ್ಕೆ & ಜೀವನಕ್ಕೆ ಬೆಲೆಯೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇಷ್ಟೆಲ್ಲದರ ನಡುವೆ ಅಫ್ಘಾನಿಸ್ತಾನ ದೇಶದ ಭವಿಷ್ಯ ರೂಪಿಸಬೇಕಿರುವ ಪುಟಾಣಿ ಮಕ್ಕಳ ಜೀವಕ್ಕೂ ಆಪತ್ತು ತಂದಿದ್ದಾರೆ ಈ ದುಷ್ಟರು!

Taliban Government Taken This Decision About Polio Vaccine

ಮಕ್ಕಳ ಭವಿಷ್ಯಕ್ಕೆ ಎದುರಾದ ಕಂಟಕ?

ಇಷ್ಟೆಲ್ಲಾ ಹೇಳಿದ್ದು ಯಾಕೆ ಅಂದ್ರೆ ಇದೀಗ ಅಫ್ಘಾನಿಸ್ತಾನ ದೇಶದಲ್ಲಿ ತಾಲಿಬಾನಿ ಉಗ್ರರು, ಪೋಲಿಯೋ ವ್ಯಾಕ್ಸಿನ್ ಅಭಿಯಾನಕ್ಕೆ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದನ್ನೇ ನಿಲ್ಲಿಸಲಾಗಿದೆ. ಈ ಕುರಿತು ವಿಶ್ವಸಂಸ್ಥೆ ಈಗ ಗಂಭೀರ ಆರೋಪ ಮಾಡಿದೆ. ಈಗಾಗಲೇ ಪಾಕಿಸ್ತಾನ ಸೇರಿದಂತೆ ಅಫ್ಘಾನಿಸ್ತಾನ ದೇಶಗಳಲ್ಲಿ ಪೋಲಿಯೋ ವೈರಸ್ ಮತ್ತೆ ಹಬ್ಬುತ್ತಿದೆ. ಪರಿಸ್ಥಿತಿ ಹೀಗಿದ್ದರೂ ತಾಲಿಬಾನಿ ಉಗ್ರರು ಮಾತ್ರ ತಮ್ಮ ತಿಕ್ಕಲು ಬುದ್ಧಿ ಓಡಿಸಿ, ಕೆಟ್ಟ ಹಠಕ್ಕೆ ಬಿದ್ದು ಅಫ್ಘಾನಿಸ್ತಾನದ ಮಕ್ಕಳ ಭವಿಷ್ಯವನ್ನ ಹಾಳು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಫ್ಘಾನಿಸ್ತಾನ ನೆಲದಲ್ಲಿ ವೈರಸ್ ಹಾವಳಿ

ತಾಲಿಬಾನಿಗಳು ಈ ರೀತಿ ಪೋಲಿಯೋ ಲಸಿಕೆ ಹಾಕಿಸುವುದನ್ನು ನಿಷೇಧ ಮಾಡಿದ ನಂತರ ಜಗತ್ತಿನ ಹಲವು ದೇಶಗಳು ಆಕ್ರೋಶ ಹೊರ ಹಾಕಿವೆ. ಅಲ್ಲದೆ ಈ ನಿರ್ಧಾರದ ಪರಿಣಾಮ, ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನ ದೇಶ ಹಲವು ಸಂಕಷ್ಟಗಳನ್ನ ಎದುರಿಸಲಿದೆ ಎನ್ನುತ್ತ ಎಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆ ಅಫ್ಘಾನಿಸ್ತಾನ ದೇಶದಲ್ಲಿ 2024, ಅಂದರೆ ಇದೇ ವರ್ಷದಲ್ಲಿ ಈವರೆಗೆ ಭರ್ಜರಿ 18 ಪೋಲಿಯೋ ವೈರಸ್ ಪ್ರಕರಣಗಳು ದೃಢಪಟ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ಮತ್ತೊಂದ್ಕಡೆ 2023 ರಲ್ಲಿ 6 ಕೇಸ್ ಪತ್ತೆ ಆಗಿದ್ದವು ಎನ್ನಲಾಗಿದ್ದು, ಪರಿಸ್ಥಿತಿ ಸೂಕ್ಷ್ಮವಾದ ಸಮಯದಲ್ಲೇ ಉಗ್ರರು ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಬೇಸರ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+