ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೌರಿಕರಿಗೆ ಹೊಸ ಆದೇಶ ಹೊರಡಿಸಿದ ತಾಲಿಬಾನ್

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 27: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ತಾಲಿಬಾನ್ ಹಲವು ನಿಯಮಗಳನ್ನು ಹೇರಲು ಆರಂಭಿಸಿದೆ. ಉದಾರವಾದದ ಸರ್ಕಾರ ರಚನೆ ಭರವಸೆ ನೀಡಿದ್ದ ತಾಲಿಬಾನ್ ತನ್ನ ಹಿಂದಿನ ಆಡಳಿತ ವೈಖರಿಯನ್ನು ಮತ್ತೆ ತರುವ ನೀತಿ ನಿಯಮಗಳನ್ನು ರೂಪಿಸುತ್ತಿದೆ. ಇದೀಗ ಕ್ಷೌರಿಕರಿಗೆ ಹೊಸ ಆದೇಶವನ್ನು ಹೊರಡಿಸಿದೆ.

ಗಡ್ಡದ ಶೇವ್ ಹಾಗೂ ಟ್ರಿಮ್ ಮಾಡುವುದನ್ನು ನಿಲ್ಲಿಸಬೇಕು ಎಂಬ ಆದೇಶವನ್ನು ಕ್ಷೌರಿಕರಿಗೆ ಹೊರಡಿಸಲಾಗಿದೆ. ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದಲ್ಲಿ ಈ ಹೊಸ ನಿಯಮಗಳನ್ನು ತರಲಾಗಿದೆ. ಈ ನಿಯಮ ಇಸ್ಲಾಮಿಕ್ ಕಾನೂನಿಗೆ ಪೂರಕವಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.

'ಕಾಬೂಲ್‌ ಏರ್‌ಪೋರ್ಟ್‌ನ ಸಮಸ್ಯೆ ಬಗೆಹರಿದಿದೆ, ಸೇವೆ ಆರಂಭಿಸಿ': ವಿಮಾನಯಾನ ಸಂಸ್ಥೆಗೆ ತಾಲಿಬಾನ್‌'ಕಾಬೂಲ್‌ ಏರ್‌ಪೋರ್ಟ್‌ನ ಸಮಸ್ಯೆ ಬಗೆಹರಿದಿದೆ, ಸೇವೆ ಆರಂಭಿಸಿ': ವಿಮಾನಯಾನ ಸಂಸ್ಥೆಗೆ ತಾಲಿಬಾನ್‌

ಹೆಲ್ಮಾಂಡ್ ಪ್ರಾಂತ್ಯದ ಸಲೂನ್‌ಗಳಲ್ಲಿ ಪ್ರಕಟಿಸಲಾದ ಈ ನೋಟೀಸ್‌ನಲ್ಲಿ, ಕೇಶವಿನ್ಯಾಸಕರು ಹೇರ್‌ ಕಟ್ ಹಾಗೂ ಗಡ್ಡದ ಶೇವಿಂಗ್ ಕುರಿತಂತೆ ಶರಿಯಾ ಕಾನೂನನ್ನು ಅನುಸರಿಸಲೇಬೇಕು ಎಂದು ತಾಲಿಬಾನ್ ಎಚ್ಚರಿಕೆ ನೀಡಿರುವುದಾಗಿ ಬಿಬಿಸಿ ವರದಿ ಮಾಡಿದೆ.

Taliban Asks Barbers To End Shaving Beard Trimming Services

ಯಾರೇ ಈ ನಿಯಮವನ್ನು ಉಲ್ಲಂಘಿಸಿದರೂ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಸಿದ್ದು, ನಿಯಮ ಪಾಲನೆ ಮೇಲೆ ನಿಗಾ ಇಡಲು ತಾಲಿಬಾನ್ ಧಾರ್ಮಿಕ ಪೊಲೀಸರನ್ನು ನಿಯೋಜಿಸಿರುವುದಾಗಿ ತಿಳಿದುಬಂದಿದೆ. ಹೆಲ್ಮಾಂಡ್ ಪ್ರಾಂತ್ಯವಲ್ಲದೇ ರಾಜಧಾನಿ ಕಾಬೂಲ್‌ನಲ್ಲಿಯೂ ಈ ಆದೇಶ ನೀಡಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಯಾರೂ ದೂರನ್ನು ಕೂಡ ಕೊಡುವಂತಿಲ್ಲ ಎಂದು ತಾಲಿಬಾನ್ ನೋಟೀಸ್‌ನಲ್ಲಿ ಉಲ್ಲೇಖಿಸಿದೆ. 'ಶೇವಿಂಗ್ ಹಾಗೂ ಟ್ರಿಮ್ಮಿಂಗ್ ನಿಲ್ಲಿಸುವಂತೆ ನಮಗೆ ತಾಲಿಬಾನ್ ಹೋರಾಟಗಾರರು ಆದೇಶಿಸಿದ್ದಾರೆ. ನಿಯಮ ಮೀರಿದರೆ ಬಂಧಿಸಲು ಜನರನ್ನು ನಿಯೋಜಿಸಲಾಗಿದೆ' ಎಂದು ಕಾಬೂಲ್‌ ಕ್ಷೌರಿಕರೊಬ್ಬರು ಹೇಳಿದ್ದಾರೆ.

ಭಯೋತ್ಪಾದಕರನ್ನು ಬೆಂಬಲಿಸುತ್ತೀರಾ?: ಪಾಕಿಸ್ತಾನಕ್ಕೆ ಕ್ವಾಡ್ ನಾಯಕರ ಎಚ್ಚರಿಕೆಭಯೋತ್ಪಾದಕರನ್ನು ಬೆಂಬಲಿಸುತ್ತೀರಾ?: ಪಾಕಿಸ್ತಾನಕ್ಕೆ ಕ್ವಾಡ್ ನಾಯಕರ ಎಚ್ಚರಿಕೆ

ಇಷ್ಟಲ್ಲದೇ, 'ಕೇಶ ವಿನ್ಯಾಸದಲ್ಲಿ ಅಮೆರಿಕನ್ ಶೈಲಿ ಅನುಸರಿಸುವುದನ್ನು ನಿಲ್ಲಿಸಿ ಹಾಗೂ ಗಡ್ಡವನ್ನು ಶೇವ್ ಹಾಗೂ ಟ್ರಿಮ್ ಮಾಡಬೇಡಿ. ಇದು ಶರಿಯಾ ಕಾನೂನಿಗೆ ವಿರುದ್ಧವಾಗಿದೆ' ಎಂದು ತಾಲಿಬಾನ್ ಸೂಚಿಸಿದ್ದು, ಕೇಶವಿನ್ಯಾಸಕರಿಗೆ ಈ ಆದೇಶ ಹೊರಡಿಸಿದ್ದಾರೆ.

Taliban Asks Barbers To End Shaving Beard Trimming Services

ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ತಾಲಿಬಾನ್ ಈ ಕಾನೂನನ್ನು ಹೊಂದಿತ್ತು. 1996ರಿಂದ 2001ರವರೆಗೆ ತಾಲಿಬಾನ್ ಮೊದಲ ಬಾರಿ ಅಧಿಕಾರದಲ್ಲಿದ್ದಾಗ ಪುರುಷರಿಗೂ ಕೇಶವಿನ್ಯಾಸವನ್ನು ನಿಷೇಧಿಸಿತ್ತು. ಜೊತೆಗೆ ಪುರುಷರು ಗಡ್ಡ ಬೆಳೆಸಬೇಕು ಎಂದು ಆದೇಶಿಸಿತ್ತು.

20 ವರ್ಷಗಳ ನಂತರ ತಾಲಿಬಾನ್ ಇದೇ ಆಗಸ್ಟ್‌ 15ರಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ತನ್ನದೇ ನೂತನ ಸರ್ಕಾರ ರಚನೆ ಮಾಡಿದೆ. ಆದರೆ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದ ತಾಲಿಬಾನ್, ಈಚೆಗೆ ತಾಲಿಬಾನ್ ನಾಯಕರನ್ನು ಒಳಗೊಂಡ ಮಧ್ಯಂತರ ಸರ್ಕಾರ ಘೋಷಣೆ ಮಾಡಿದೆ. ಜೊತೆಗೆ ಹಲವು ನಿಯಮಗಳನ್ನು ಹೇರುತ್ತಿದೆ.

ಅಧಿಕಾರ ವಹಿಸಿಕೊಂಡ ಒಂದು ತಿಂಗಳಿನಲ್ಲಿ ಹಲವು ವಿಷಯಗಳ ಮೇಲೆ ನಿಷೇಧ ಹೇರಿದೆ. ರೇಡಿಯೋ ಸ್ಟೇಷನ್‌ಗಳಲ್ಲಿ ಸಂಗೀತ ಹಾಕದಂತೆ ಆದೇಶ ಹೊರಡಿಸಿದೆ. ಕೇವಲ ದೇಶಭಕ್ತಿ ಗೀತೆಗಳನ್ನು ಹಾಕುವಂತೆ ತಿಳಿಸಿದೆ. ಈ ಬಾರಿ ಮಹಿಳೆಯರ ಹಕ್ಕು ರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದ ತಾಲಿಬಾನ್, ಮಹಿಳೆಯರಿಗೆ ಉದ್ಯೋಗ ನಿಷೇಧಿಸಿದೆ. ಮಹಿಳೆಯರನ್ನು ಕ್ರೀಡೆಗಳಿಂದಲೂ ನಿಷೇಧ ಮಾಡಿದೆ. ರಾಜಕೀಯದಲ್ಲಿ ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಕ್ಕೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಸಚಿವಾಲಯದೊಳಗೆ ಕೇವಲ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಅನುಮತಿ ಕಲ್ಪಿಸಿಕೊಟ್ಟಿದೆ.
ಮಹತ್ವದ ಜವಾಬ್ದಾರಿಗಳನ್ನು ಹೆಣ್ಣುಮಕ್ಕಳಿಗೆ ವಹಿಸಿದರೆ ಅವರ ಮೇಲೆ ಹೆಚ್ಚಿನ ಭಾರ ಹೇರಿದಂತಾಗುತ್ತದೆ. ಹೀಗಾಗಿ ಮಹಿಳೆಯರು ಕೇವಲ ಮಕ್ಕಳಿಗೆ ಜನ್ಮ ನೀಡಬೇಕಷ್ಟೇ ಎಂದು ಹೇಳಿ ಟೀಕೆಗೆ ಗುರಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ಶರಿಯಾ ಕಾನೂನಿನ ಅಡಿಯಲ್ಲಿ ಬರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಮಾತ್ರ ಅವಕಾಶ ನೀಡಿದೆ. ಜೀನ್ಸ್‌ ತೊಡುವುದನ್ನು ನಿಷೇಧ ಮಾಡಲಾಗಿದೆ.

ಇದರೊಂದಿಗೆ, ಈ ಯಾವುದೇ ನಿಯಮ, ಆದೇಶಗಳನ್ನು ವಿರೋಧಿಸಿ ಪ್ರತಿಭಟನೆ ಮಾಡುವಂತಿಲ್ಲ. ಸರ್ಕಾರದ ಅನುಮತಿ ಇಲ್ಲದೇ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ಎಂದು ನಿಯಮ ಹೇರಲಾಗಿದೆ. ಪ್ರತಿಭಟನೆಯ ಉದ್ದೇಶದ ಪ್ರತಿ ವಿವರಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳುವಂತೆ ಆದೇಶಿಸಲಾಗಿದೆ.

English summary
Taliban have ordered barbers in Helmand province of Afghanistan to stop trimming the beards of locals, saying beard-trimming goes against Islamic law
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X