ಜೋಕೆ... ನಾನು ಬಳ್ಳಿಯ ಮಿಂಚು..!

Posted By:
Subscribe to Oneindia Kannada

ಬುಡಾಪೆಸ್ಟ್ (ಹಂಗೇರಿ) ಜುಲೈ 21: ಹಂಗೇರಿಯ ಬುಡಾಪೆಸ್ಟ್ ಎಂಬಲ್ಲಿ ನಡೆಯುತ್ತಿರುವ ಫಿನಾ ವರ್ಲ್ಡ್ ಚಾಂಪಿಯನ್ ಶಿಪ್ 2017 ರ ಕಾಂಬಿನೇಷನ್ ಸಿಂಕ್ರನೈಸ್ಡ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಯುವತಿಯೊಬ್ಬಳು ಪ್ರದರ್ಶನ ನೀಡುತ್ತಿರುವ ದೃಶ್ಯ ನೋಡಿದರೆ, ಜೋಕೆ, ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು... ಎಂಬ ಎಲ್ ಆರ್ ಈಶ್ವರಿ ಅವರು ಹಾಡಿದ 'ಪರೋಪಕಾರಿ' ಚಿತ್ರದ ಹಾಡೊಮ್ಮೆ ನೆನಪಿಗೆ ಬಂದರೆ ಅಚ್ಚರಿಯೇನಿಲ್ಲ!

ಇದೇನು? ದೇಹವನ್ನು ಹೀಗೆಲ್ಲ ಬಳುಕಿಸೋಕೆ ಬರುತ್ತಾ ಎಂದು ಹುಬ್ಬೇರುವಂತೆ ಸ್ವಿಟ್ಜರ್ಲೆಂಡ್ ತಂಡದ ಯುವತಿಯೊಬ್ಬಳು ಕಾಂಬಿನೇಷನ್ ಸಿಂಕ್ರನೈಸ್ಡ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿದ್ದು, ಈ ಚಿತ್ರ ನೋಡುತ್ತಿದ್ದರೆ ಒಮ್ಮೆ ಮೈನವಿರೇಳಬಹುದು!

ಮುಖೇಶ್ ಅಂಬಾನಿ ಅಮ್ಮನ ಕಣ್ಣಲ್ಲಿ ಮನಕರಗಿದ ಘಳಿಗೆ

ಈ ಚಿತ್ರದೊಟ್ಟಿಗೆ ಜಿಯೋ ಮೊಬೈಲ್ ಕೊಡುಗೆ, ರಾಮನಾಥ್ ಕೋವಿಂದ್ ಗೆಲುವು, ಟೀಂ ಇಂಡಿಯಾ ಮಹಿಳಾ ತಂಡ ವಿಶ್ವಕಪ್ ಫೈನಲ್ ಗೆ ಲಗ್ಗೆ ಹಾಕಿದ್ದು... ಸೇರಿದಂತೆ ಪ್ರಪಂಚದಾದ್ಯಂತ ಸಂಭವಿಸಿದ ಪ್ರಮುಖ ಘಟನೆಗಳ ಸುತ್ತ ಒಂದು ನೋಟ ಇಲ್ಲಿದೆ. ಭಾರತದ ಮಟ್ಟಿಗೆ ರಾಮನಾಥ್ ಕೋವಿಂದ್ ಎಂಬ ದಲಿತ ಅಭ್ಯರ್ಥಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ವಿಶೇಷ ಸುದ್ದಿಯಾದರೆ, ರಿಲಾಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ಸಿಹಿ ಸುದ್ದಿಯೊಂದನ್ನು ನೀಡಿರುವುದು ಇನ್ನೊಂದು ವಿಶೇಷ.

ರಿಲಾಯನ್ಸ್ ಸಂಸ್ಥೆ ಜಿಯೋ ಸೇವೆ ಆರಂಭಿಸಿ ದೇಶದಲ್ಲೇ ಹೊಸ ಸಂಚಲನ ಮೂಡಿಸಿದ್ದು ಈಗ ಹಳೇ ವಿಷಯ. ಉಚಿತ ಡಾಟಾ, ಟಾಕ್ ಟೈಮ್ ಎಲ್ಲವೂ ಮುಗಿದು, ಇದೀಗ ತನ್ನ ಗ್ರಾಹಕರಿಗೆ 0 ರೂ.ಗೆ ಮೊಬೈಲ್ ನೀಡಲು ಜಿಯೋ ಮುಂದಾಗಿದೆಯಂತೆ ಅಂದಹಾಗೇ, ಇದು ರಿಲಾಯನ್ಸ್ ಸಂಸ್ಥೆಯ 40 ನೇ ವಾರ್ಷಿಕೋತ್ಸವದ ಕೊಡುಗೆಯಂತೆ! ಹಾಗೆಂದು ಸ್ವತಃ ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ. ಹೊಸ ಫೋನ್ ಪಡೆದುಕೊಳ್ಳುವವರು 1500 ರೂ. ಮುಂಗಡ ಪಾವತಿಸಬೇಕಾಗುತ್ತದೆ.

ಭಾರತ ವನಿತೆಯರ ಕ್ರಿಕೆಟ್ ತಂಡ ಕೊಂಡಾಡಿದ ಕೊಹ್ಲಿ, ಸೆಹ್ವಾಗ್, ಸಚಿನ್

ಈ ಹಣವನ್ನು ರಿಲಯನ್ಸ್ ಸಂಸ್ಥೆ ಮೂರು ವರ್ಷದಲ್ಲಿ ಗ್ರಾಹಕರಿಗೆ ವಾಪಾಸ್ ಕೊಡಲಿದೆ. ಒಟ್ಟಿನಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣವನ್ನುಂಟುಮಾಡಲು ರಿಲಾಯನ್ಸ್ ಸಂಸ್ಥೆ ಸಜ್ಜಾಗಿರುವುದು, ಉಳಿದೆಲ್ಲ ಮೊಬೈಲ್ ತಯಾರಿಕಾ ಕಂಪೆನಿಗಳಿಗೆ ಆತಂಕ ಶುರುವಾಗಿರುವುದಂತೂ ಸುಳ್ಳಲ್ಲ.

ಜಿಯೋ ಸುದ್ದಿಯ ನಡುವಲ್ಲೇ ಸುದ್ದಿ ಮಾಡಿದ ಮತ್ತಷ್ಟು ಸುದ್ದಿಗಳು ನಿಮಗಾಗಿ ಇಲ್ಲಿವೆ...

ಜೋಕೆ...!

ಜೋಕೆ...!

ಹಂಗೇರಿಯ ಬುಡಾಪೆಸ್ಟ್ ಎಂಬಲ್ಲಿ ನಡೆಯುತ್ತಿರುವ ಫಿನಾ ವರ್ಲ್ಡ್ ಚಾಂಪಿಯನ್ ಶಿಪ್ 2017 ರ ಕಾಂಬಿನೇಷನ್ ಸಿಂಕ್ರನೈಸ್ಡ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಸ್ವಿಟ್ಜರ್ಲೆಂಡ್ ತಂಡದ ಯುವತಿಯೊಬ್ಬಳು ಪ್ರದರ್ಶನ ನೀಡಿದ್ದು ಹೀಗೆ!

ಆ.15 ಕ್ಕೆ ಡಿಜಿಟಲ್ ಫ್ರೀಡಂ!

ಆ.15 ಕ್ಕೆ ಡಿಜಿಟಲ್ ಫ್ರೀಡಂ!

ತನ್ನ್ ಗ್ರಾಹಕರಿಗಾಗಿ 0 ರೂ. ಗೆ ಮೊಬೈಲ್ ಪರಿಚಯಿಸುತ್ತಿರುವ ರಿಲಾಯನ್ಸ್ ಸಂಸ್ಥೆಯ ಮಾಲೀಕ ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಕಂಡಿದ್ದು ಹೀಗೆ.

ರಾಮನಾಥ್ ಕೋವಿಂದ್

ರಾಮನಾಥ್ ಕೋವಿಂದ್

ಭಾರತದ ಪ್ರಥಮ ಪ್ರಜೆಯಾಗಿ ಆಯ್ಕೆಯಾದ ರಾಮನಾಥ್ ಕೋವಿಂದ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಅಭಿಮಾನಿಯೊಬ್ಬರು ಕೊಟ್ಟ ಹೂಗುಚ್ಛವನ್ನು ಹಿಡಿದು ಮುಂದಿನ ರಾಷ್ಟ್ರಪತಿ ಪೋಸು ನೀಡಿದ್ದು ಹೀಗೆ. ಜುಲೈ 20 ರಂದು ಹೊರಬಿದ್ದ ಫಲಿತಾಂಶದಲ್ಲಿ ಅವರು, ಶೇ 65 ಮತ ಪಡೆದು, ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಸೋಲಿಸಿದರು.

ಗೆಲುವಿನ ಸಂಭ್ರಮ

ಗೆಲುವಿನ ಸಂಭ್ರಮ

ಇಂಗ್ಲೆಂಡಿನ ಡರ್ಬಿಯಲ್ಲಿ ಜುಲೈ 20 ರಂದು ನಡೆದ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿಯೊಬ್ಬರನ್ನು ಔಟ್ ಮಾಡಿದ ಪೂನಮ್ ಅವರಿಗೆ ನಾಯಕಿ ಮಿತಾಲಿ ರಾಜ್ ಅಭಿನಂದನೆ ಸಲ್ಲಿಸಿದ್ದು ಹೀಗೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಜಯಗಳಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ಭರ್ಜರಿ ಶತಕ

ಭರ್ಜರಿ ಶತಕ

ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿ ವಿಶ್ವಕಪ್ ಫೈನಲ್ ತಲುಪುವಲ್ಲಿ ಭಾರತ ತಂಡಕ್ಕೆ ನೆರವಾಗಿದ್ದು ಅರ್ಮನ್ ಪ್ರೀತ್ ಕೌರ್ ಅವರ ಅಜೇಯ 171 ರನ್ ಗಳು. ಎದುರಾಳಿ ತಂಡ ಮಾಡಿದ್ದ ಅಪೀಲ್ ಗೆ ಥರ್ಡ್ ಅಂಪೈರ್ ನಿರ್ಧಾರವೇನು ಎಂದು ತವಕದಿಂದ ನೋಡುತ್ತ ನಿಂತಿದ್ದ ಹರ್ಮನ್ ಪ್ರೀತ್ ಕೌರ್ ಕಂಡಿದ್ದು ಹೀಗೆ.

ಕಾಮಿಕ್ ಕಾನ್

ಕಾಮಿಕ್ ಕಾನ್

ಸ್ಯಾನ್ ಡಿಗೋ ನಲ್ಲಿ ನಡೆಯುತ್ತಿರುವ ಕಾಮಿಕ್ ಕಾನ್ ಇಂಟರ್ನಾಶನಲ್ ನ ಮೊದಲ ದಿನದಂದು ತಮ್ಮ ಮುಖಕ್ಕೆ ತಾವೇ ಪೇಂಟ್ ಮಾಡಿಕೊಂಡಿದ್ದ ಓಕ್ಲಾಂದ ಅಬ್ರಿಯಾನಾ ಸಮನ್ಸ್ ಕಂಡಿದ್ದು ಹೀಗೆ.

ಭೂಮಿಯೆ ಹಾಸಿಗೆ, ಗಗನವೇ ಹೊದಿಕೆ!

ಭೂಮಿಯೆ ಹಾಸಿಗೆ, ಗಗನವೇ ಹೊದಿಕೆ!

ಟರ್ಕಿಯಲ್ಲಿ ಇಂದು(ಜು.21) ಬೆಳಗ್ಗೆ ಭೂಕಂಪ ಸಂಭವಿಸಿದ್ದು, ಇಲ್ಲಿನ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ. ವೃದ್ಧರೊಬ್ಬರು ಭೂಕಂಪದ ಭಯದಲ್ಲೂ ಭೂಮಿಯೇ ಹಾಸಿಗೆ, ಗಗನವೇ ಹೊದಿಕೆ ಎಂದುಕೊಂಡು ನಿದ್ದೆ ಹೋದದ್ದು ಹೀಗೆ. ರಿಕ್ಟರ್ ಮಾಪನದಲ್ಲಿ 6.7 ತೀವ್ರತೆ ದಾಖಲಾಗಿದ್ದು, ಭೂಕಂಪದಲ್ಲಿ ಇಬ್ಬರು ಮೃತರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A girl from Switzerland team performs during the Women's Free Combination Synchronized Swimming Preliminary Free Combination of the 17th FINA World Championships 2017 in Budapest, Hungary,on July 20th. Here are some more national and international news
Please Wait while comments are loading...