ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ? ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮೀರಿಸಿದ ಕಮಲಾ!

ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹವಾ ಎಬ್ಬಿಸಿದ್ದಾರೆ. ಈ ಮೂಲಕ ಭಾರತ ಮೂಲದ ಮಹಿಳೆ ಒಬ್ಬರು ಅಮೆರಿಕದ ಇತಿಹಾಸದಲ್ಲೇ ಹೊಸ ದಾಖಲೆಗೆ ಸಜ್ಜಾಗಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲೇ, ದಿನದಿಂದ ದಿನಕ್ಕೆ ಈ ನಾಯಕಿಗೆ ಜನರ ಬೆಂಬಲ ಕೂಡ ಅಮೆರಿಕದಲ್ಲಿ ಹೆಚ್ಚಾಗುತ್ತಿದೆ. ಹಾಗಿದ್ರೆ, ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ? ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮೀರಿಸಿದ ಕಮಲಾ? ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಯೋಣ.

ನವೆಂಬರ್ 5 ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಇಡೀ ಪ್ರಪಂಚ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕಾಯುತ್ತಿದೆ. ಯಾಕಂದ್ರೆ ಜಗತ್ತಿನ ಶಕ್ತಿಶಾಲಿ ದೇಶ & ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಚುನಾವಣೆ ಪ್ರಪಂಚದ ಎಲ್ಲಾ ದೇಶಗಳಿಗೂ ಮುಖ್ಯ. ಹೀಗಾಗಿ ಲೆಕ್ಕಾಚಾರ ಕೂಡ ಜೋರಾಗಿದೆ, ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ನೇರ ಫೈಟಿಂಗ್ ನಡೆಯುತ್ತಿದೆ. ಆದರೆ ಸಮೀಕ್ಷೆಗಳು ಮಾತ್ರ ಕಮಲಾ ಹ್ಯಾರಿಸ್ ಪರ ತೀರ್ಪು ನೀಡುತ್ತಿವೆ. ಈಗಲೂ ಅಷ್ಟೇ ಏಷ್ಯಾ ಮೂಲದ ಅಮೆರಿಕನ್ನರ ಮತಗಳನ್ನ ಗಳಿಸಲು ಕಮಲಾ ಹ್ಯಾರಿಸ್ ಸಕ್ಸಸ್ ಆಗುತ್ತಿದ್ದಾರಂತೆ!

Survey Saying That Kamala Harris Is Lead By 38 Points Among The Asian American Voters

ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ?

ಅಮೆರಿಕ ಅದೆಷ್ಟು ಪುರುಷರ ಹಿಡಿತ ಇರುವ ದೇಶ ಅಂದ್ರೆ, ಈವರೆಗೂ ಅಲ್ಲಿ ಒಬ್ಬ ಮಹಿಳೆ ಕೂಡ ಅಧ್ಯಕ್ಷರಾಗಿ ಆಯ್ಕೆ ಆಗಿಲ್ಲ. ಹೀಗಾಗಿ ಇದೀಗ ಕಮಲಾ ಹ್ಯಾರಿಸ್ ಅವರು ಆ ಕೊರತೆ ನೀಗಿಸುವ ನಿರೀಕ್ಷೆ ಇದೆ. ಯಾಕಂದ್ರೆ ಕಮಲಾ ಹ್ಯಾರಿಸ್ ಪರವಾಗಿ ಇದೀಗ ಏಷ್ಯಾ ಮೂಲದ ಅಮೆರಿಕನ್ನರ ಬೆಂಬಲ ಹೆಚ್ಚಾಗುತ್ತಿದೆ ಎಂಬುದು ಸಮೀಕ್ಷೆಗಳಿಂದ ಗೊತ್ತಾಗಿದೆ. ಡೊನಾಲ್ಡ್ ಟ್ರಂಪ್ ಅವರಿಗಿಂತ 38 ಅಂಕಗಳನ್ನು ಹೆಚ್ಚಾಗಿ ಪಡೆದಿರುವ ಕಮಲಾ ಹ್ಯಾರಿಸ್ ಗೆಲುವಿಗಾಗಿ ಮುಂದೆ ನುಗ್ಗುತ್ತಿದ್ದಾರೆ!

ಡೊನಾಲ್ಡ್ ಟ್ರಂಪ್ ಸೋಲು ಪಕ್ಕಾ?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ಗೆಲುವಿಗಾಗಿ ಫೈಟಿಂಗ್ ನಡೆಯುತ್ತಿದ್ದು, ಇಬ್ಬರೂ ಚುನಾವಣೆ ರೇಸ್‌ನಲ್ಲಿ ಮುನ್ನುಗ್ಗುತ್ತಿದ್ದಾರೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ಪದೇ ಪದೇ ಮುನ್ನಡೆಯ ಸಾಧಿಸುತ್ತಿದ್ದಾರೆ. ಹೀಗಿದ್ದಾಗಲೇ ಚುನಾವಣಾ ಸಮೀಕ್ಷೆಗಳು ಕೂಡ ಕಮಲಾ ಹ್ಯಾರಿಸ್ ಪರ ಫಲಿತಾಂಶ ನೀಡುತ್ತಿವೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಬೆಂಬಲಿಗರಿಗೆ ಸಮೀಕ್ಷೆಗಳ ವರದಿಯು ಟೆನ್ಷನ್ ನೀಡುತ್ತಿದ್ದು, ತಮ್ಮ ನೆಚ್ಚಿನ ನಾಯಕ ಗೆಲ್ಲಬೇಕು ಎಂಬ ಗುರಿ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಲ್ಲಿ ಇದೆ. ಹೀಗಾಗಿ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ಅಧಿಕಾರದ ತಿಕ್ಕಾಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+