ಚೀನಾ, ರಷ್ಯಾಗಿಂತ ನಾವೇ ಉತ್ತಮ, ಅದೇ ಸಮಾಧಾನ

Subscribe to Oneindia Kannada

ನವದೆಹಲಿ, ಜನವರಿ, 28: ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಮನೆ ಮಾಡಿದೆ. ಲಂಚಗುಳಿತನ ತುಂಬಿಹೋಗಿದೆ. ಸಾಮಾನ್ಯರು ಯಾವ ಕೆಲಸವನ್ನು ಸುಲಭವಾಗಿ ಮಾಡಿಸಿಕೊಳ್ಳುವಂತಿಲ್ಲ... ಈ ಬಗೆಯ ದೂರುಗಳು ಪ್ರತಿದಿನ ನಿಮ್ಮ ಕಿವಿ ಮೇಲೆ ಬೀಳುತ್ತಲೇ ಇರುತ್ತವೆ.

ಇದನ್ನೆ ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿದ ಸಂಸ್ಥೆಯೊಂದು ವರದಿ ನೀಡಿದೆ. ಪ್ರಪಂಚದಲ್ಲಿ ಅತಿ ಕಡಿಮೆ ಭ್ರಷ್ಟಾಚಾರ ಇರುವ ದೇಶಗಳು ಎಂಬುದರ ಲೆಕ್ಕವನ್ನು ಸಂಸ್ಥೆಯೊಂದು ನೀಡಿದೆ. ಭಾರತಕ್ಕೆ ಪಟ್ಟಿಯಲ್ಲಿ 76ನೇ ಸ್ಥಾನ.[ಇಂಜಿನಿಯರಿಂಗ್ ಪದವಿಧರರ ವ್ಯಥೆ ಬಿಚ್ಚಿಟ್ಟ ಸಮೀಕ್ಷೆ]

ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ. 168 ರಾಷ್ಟ್ರಗಳ ಪಟ್ಟಿಯಲ್ಲಿ 85ನೇ ಸ್ಥಾನದಲ್ಲಿದ್ದ ಭಾರತ 76ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ನೆರೆಯ ಚೀನಾ, ಪಾಕಿಸ್ತಾನ ಹಾಗೂ ನೇಪಾಳಕ್ಕೆ ಹೋಲಿಸಿದರೆ ಭಾರತದಲ್ಲಿ ಭ್ರಷ್ಟಾಚಾರ ಕಡಿಮೆ ಇರುವುದು ಸಮಾಧಾನಕರ ಸಂಗತಿ.[ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!]

ವಿಶ್ವದಲ್ಲಿ ಡೆನ್ಮಾರ್ಕ್‌ ಮೊದಲ ಸ್ಥಾನದಲ್ಲಿದ್ದು, ಅತಿ ಕಡಿಮೆ ಭ್ರಷ್ಟ ದೇಶ ಎನಿಸಿಕೊಂಡಿದೆ. ಸತತ ಎರಡನೇ ವರ್ಷವೂ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಫಿನ್‌ಲೆಂಡ್‌, ಸ್ವೀಡನ್‌, ನ್ಯೂಜಿಲೆಂಡ್‌, ನೆದರ್ಲೆಂಡ್‌, ನಾರ್ವೆ, ಸ್ವಿಜರ್ಲೆಂಡ್‌, ಸಿಂಗಾಪುರ, ಕೆನಡಾ ಹಾಗೂ ಬ್ರಿಟನ್‌ ಟಾಪ್‌ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಯಾವ ಮಾನದಂಡ?

ಯಾವ ಮಾನದಂಡ?

ಭ್ರಷ್ಟಾಚಾರಕ್ಕೂ ರಾಜಕೀಯ ನಾಯಕರಿಗೂ ಯಾವ ಬಗೆಯ ಸಂಬಂಧ? ಜನರ ಅಗತ್ಯಕ್ಕೆ ಸರ್ಕಾರಿ ಸಂಸ್ಥೆಗಳ ಸ್ಪಂದನೆ ಯಾವ ಬಗೆಯಲ್ಲಿದೆ? ಎಂಬುದನ್ನು ಪ್ರಮುಖವಾಗಿ ಇಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ.

 168 ದೇಶಗಳಲ್ಲಿ ಸಮೀಕ್ಷೆ

168 ದೇಶಗಳಲ್ಲಿ ಸಮೀಕ್ಷೆ

ಪ್ರಪಂಚದ 68 ದೇಶಗಳಲ್ಲಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಮೂರನೇ ಎರಡರಷ್ಟು ದೇಶಗಳು 100ಕ್ಕೆ 50ಕ್ಕಿಂತ ಕಡಿಮೆ ಅಂಕ ಪಡೆದುಕೊಂಡಿದ್ದು ಸರಾಸರಿ 43 ಅಂಕ ಇದೆ.

 ಮೋದಿ ಬಂದ ಮೇಲೆ ಬದಲಾವಣೆ

ಮೋದಿ ಬಂದ ಮೇಲೆ ಬದಲಾವಣೆ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ದೇಶದಲ್ಲಿ ಭ್ರಷ್ಟಾಚಾರ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ ಆಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. 85ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ 76ನೇ ಸ್ಥಾನಕ್ಕೇರಿರುವುದೇ ಅದಕ್ಕೆ ಸಾಕ್ಷಿ.

ಚೀನಾಗಿಂತ ನಾವೇ ಉತ್ತಮ

ಚೀನಾಗಿಂತ ನಾವೇ ಉತ್ತಮ

ಚೀನಾ, ರಷ್ಯಾಗೆ ಹೋಲಿಸಿದರೆ ಭಾರತ ಭ್ರಷ್ಟಾಚಾರ ಕಡಿಮೆಇದೆಯಂತೆ. ಚೀನಾ 83ನೇ ಸ್ಥಾನದಲ್ಲಿದ್ದರೆ, ರಷ್ಯಾ 119ನೇ ಸ್ಥಾನದಲ್ಲಿದೆ. ಏಷ್ಯಾ ಖಂಡದ ದೊಡ್ಡ ಆರ್ಥಿಕ ವ್ಯವಸ್ಥೆಗಳ ಲೆಕ್ಕವನ್ನು ಸಂಸ್ಥೆ ನಮ್ಮ ಮುಂದೆ ಇಟ್ಟಿದೆ.

ಉತ್ತರ ಕೋರಿಯಾಕ್ಕೆ ಕುಖ್ಯಾತಿ

ಉತ್ತರ ಕೋರಿಯಾಕ್ಕೆ ಕುಖ್ಯಾತಿ

ಹಿರಿಯಣ್ಣ ಅಮೆರಿಕ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಮೇಲೇರಿ 16ನೇ ಸ್ಥಾನ ಪಡೆದಿದೆ. ಬ್ರಿಟನ್‌ 3 ಸ್ಥಾನ ಬಡ್ತಿ ಪಡೆದಿದೆ. ಅಮೆರಿಕ ಹಾಗೂ ಬ್ರಿಟನ್‌ ಈ ಪರಿ ಸಾಧನೆ ತೋರುತ್ತಿರುವುದು ಇದೇ ಮೊದಲು ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ತಿಳಿಸಿದೆ. ಉತ್ತರ ಕೊರಿಯಾ ಹಾಗೂ ಸೊಮಾಲಿಯಾ ಅತಿ ಭ್ರಷ್ಟ್ ರಾಷ್ಟ್ರಗಳು ಎಂಬ ಕುಖ್ಯಾತಿ ಪಡೆದುಕೊಂಡಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Berlin-based corruption watchdog Transparency International (TI) has put India at rank 76 out of 168 countries in its latest Corruption Perception Index. To compare with China and Russia India has got good place.
Please Wait while comments are loading...