ಸರ್ಜಿಕಲ್ ಸ್ಟ್ರೈಕ್2 ಭಾರತೀಯ ಮಾಧ್ಯಮಗಳ ಭ್ರಮೆ: ಇಮ್ರಾನ್ ಖಾನ್ ಪಕ್ಷ
ಇಸ್ಲಾಮಾಬಾದ್, ಫೆಬ್ರವರಿ 26: ಪಾಕಿಸ್ತಾನದಲ್ಲಿ ಭಾರತ ಇಂದು ಮಾಡಿರುವ ಸರ್ಜಿಕಲ್ ಸ್ಟ್ರೈಕ್ 2 ಅನ್ನು ಬಾಲಿವುಡ್‌ನ ಅಡ್ಡಪರಿಣಾಮ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ (ಪಾಕಿಸ್ತಾನ ಥೆಹರಿಕ್ ಎ ಇನ್ಸಾಫ್) ಪಿಟಿಐ ಕರೆದಿದೆ.
ಬಾಲಿವುಡ್ ಸಿನಿಮಾಗಳ ಅಡ್ಡಪರಿಣಾಮ ಭಾರತೀಯ ಮಾಧ್ಯಮಗಳ ಮೇಲೆ ಆಗಿ ಅವು ಸರ್ಜಿಕಲ್ ಸ್ಟ್ರೈಕ್ 2 ಎಂಬ ಭ್ರಮೆಯನ್ನು ಸೃಷ್ಟಿಸಿವೆ. ಮತ್ತು ಅದನ್ನು ನಿಜವೆಂದು ನಂಬಿಸುತ್ತಿವೆ ಎಂದು ಪಿಟಿಐ ಟ್ವೀಟ್ ಮಾಡಿದೆ.
ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿರುವುದನ್ನೇ ಸುಳ್ಳು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವಾದ ಪಿಟಿಐ ಪ್ರತಿಪಾದಿಸುತ್ತಿದ್ದು, ಆ ರೀತಿಯ ದಾಳಿಯೇ ನಡೆದಿಲ್ಲ ಎಂದು ಹೇಳುತ್ತಿದೆ.

ಪಾಕಿಸ್ತಾನದ ಮಾಧ್ಯಮಗಳು ದಾಳಿ ನಡೆದಿರುವುದಾಗಿ ಒಪ್ಪಿಕೊಂಡಿವೆ ಆದರೆ ಭಾರತೀಯ ಮಾಧ್ಯಮಗಳು ಹೇಳುವಂತೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಹೇಳುತ್ತಿವೆ.












Click it and Unblock the Notifications