ಲಾಹೋರ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, ಕನಿಷ್ಠ 10 ಮಂದಿ ಸಾವು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಲಾಹೋರ್, ಫೆಬ್ರವರಿ 13: ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ಹತ್ತು ಮಂದಿ ಮೃತಪಟ್ಟು, 69 ಮಂದಿ ಗಾಯಗೊಂಡ ಘಟನೆ ಸೋಮವಾರ ಪಾಕಿಸ್ತಾನದ ಲಾಹೋರ್ ನ ಪಂಜಾಬ್ ವಿಧಾನಸಭೆ ಹೊರಭಾಗದಲ್ಲಿ ನಡೆದಿದೆ. ಆ ವೇಳೆ ಪ್ರತಿಭಟನೆ ನಡೆಯುತ್ತಿತ್ತು. ಪ್ರಾಥಮಿಕ ವರದಿ ಪ್ರಕಾರ ಈ ದಾಳಿಯಲ್ಲಿ 69 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮೆಯೋ ಆಸ್ಪತ್ರೆ ಹಾಗೂ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯಲ್ಲಿ ಒಬ್ಬರು ನಿವೃತ್ತ ಪೊಲೀಸ್ ಅಧಿಕಾರಿ, ಮತ್ತೊಬ್ಬರು ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಅಹ್ಮದ್ ಮೊಬಿನ್ ಅವರು ಪ್ರತಿಭಟನಾನಿರತರ ಮನವೊಲಿಸಲು ಯತ್ನಿಸುತ್ತಿದ್ದರು.[ಪಾಕಿಸ್ತಾನ ತರಕಾರಿ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ, ಇಪ್ಪತ್ತು ಸಾವು]

Bomb blast

ಕಾನೂನುಬಾಹಿರ ಔಷಧ ಮಾರಾಟಗಾರರ ಮೇಲೆ ಸರಕಾರ ಮಾಡುತ್ತಿದ್ದ ದಾಳಿಗಳ ವಿರುದ್ಧ ಔಷಧ ಮಾರಾಟಗಾರರು ಪಂಜಾಬ್ ವಿಧಾನಸಭೆ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಕನಿಷ್ಠ ನಾಲ್ಕುನೂರು ಮಂದಿ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು. ಲಾಹೋರ್ ನಲ್ಲೇ ಅತಿ ಜನನಿಬಿಡವಾದ ಮಾಲ್ ರಸ್ತೆ ಇದು.

ಸ್ಫೋಟದ ನಂತರ ಪರಿಹಾರ ಕಾರ್ಯಾಚರಣೆ ಪಡೆ, ಅಗ್ನಿಶಾಮಕ ದಳ ಹಾಗೂ ಆಂಬ್ಯುಲೆನ್ಸ್ ಗಳು ಸ್ಥಳಕ್ಕೆ ತೆರಳಿವೆ. ಲಾಹೋರ್ ನಲ್ಲಿ ಉಗ್ರ ದಾಳಿಯಾಗಬಹುದು ಎಂಬ ಬಗ್ಗೆ ಫೆಬ್ರವರಿ 7ರಂದು ಎಚ್ಚರಿಕೆ ನೀಡಲಾಗಿತ್ತು. ಮುಖ್ಯ ಕಟ್ಟಡಗಳು, ಶಾಲೆಗಳು, ಆಸ್ಪತ್ರೆಗಳ ಮೇಲೆ ತೀವ್ರ ಕಣ್ಗಾವಲು ಇಟ್ಟಿರುವಂತೆ ಸೂಚನೆ ಕೂಡ ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 10 people were killed and 69 injured on Monday when a suicide bomber struck outside the Punjab Assembly in Lahore, Pakistan during a protest, police officials said.
Please Wait while comments are loading...