ಸುಡುಗಾಡು ಸುಡಾನ್ ದೇಶದಲ್ಲಿ ಅರೆಸೈನಿಕ ಪಡೆ ಅಟ್ಟಹಾಸ ಅಂತ್ಯ!
ಸುಡಾನ್ ಸುಡುತ್ತಿದೆ, ಹಸಿವು & ಬಡತನದ ಬೆಂಕಿಯಲ್ಲಿ ಬೆಂದು ಅಕ್ಷರಶಃ ಸುಡುಗಾಡಿನಂತೆ ಆಗಿರುವ ಸುಡಾನ್ ದೇಶದಲ್ಲಿ ಜನರಿಗೆ ನೆಮ್ಮದಿಯೇ ಇಲ್ಲವಾಗಿದೆ. ಯಾಕಂದ್ರೆ ಅಲ್ಲಿನ ಪ್ರತಿ ಹಳ್ಳಿಗಳಲ್ಲೂ ಒಂದೊಂದು ಹನಿ ನೀರಿಗೂ ಹಾಹಾಕಾರ ಇದೆ. ಅನ್ನ & ಆಹಾರದ ವಿಚಾರಕ್ಕೆ ಬಂದ್ರೆ ಸುಡಾನ್, ಈ ಭೂಮಿ ಮೇಲೆ ಇರುವ ನಿಜವಾದ ನರಕ. ಆದ್ರೆ ಅಲ್ಲಿನ ರಾಜಕಾರಣಿಗಳು ಮಾತ್ರ ಭ್ರಷ್ಟಾಚಾರ ನಡೆಸುತ್ತಾ ಹಾಯಾಗಿ ಇದ್ದಾರೆ ಎನ್ನುವ ಆರೋಪಗಳ ನಡುವೆ ದೊಡ್ಡ ಕಿಚ್ಚು ಹೊತ್ತಿಕೊಂಡಿತ್ತು.
ಸುಡಾನ್ ಸೇನೆ & ಸುಡಾನ್ ಪ್ಯಾರಾಮಿಲಿಟರಿ ನಡುವೆ ಕಳೆದ 2 ವರ್ಷಗಳಿಂದ ಭರ್ಜರಿಯಾಗಿ ವಾರ್ ನಡೆಯುತ್ತಿತ್ತು. ಒಂದು ಕಡೆ ಸುಡಾನ್ ಸರ್ಕಾರ ಪ್ಯಾರಾಮಿಲಿಟರಿ ಸೈನಿಕರ ಅಟ್ಟಹಾಸ ಕಂಡು ಹೆದರಿ ಕೂತಿತ್ತು. ಹೀಗಿದ್ದಾಗಲೇ ಪ್ರಮುಖ ಪ್ರದೇಶಗಳನ್ನು ಸುಡಾನ್ ಪ್ಯಾರಾಮಿಲಿಟರಿ ಅಂದ್ರೆ ಸುಡಾನ್ ಅರೆಸೈನಿಕ ಪಡೆ ತನ್ನ ವಶಕ್ಕೆ ಪಡೆದಿತ್ತು. ಪ್ರಮುಖವಾಗಿ ಸುಡಾನ್ ದೇಶದ ರಾಜಧಾನಿ ಕೂಡ ಸುಡಾನ್ ಪ್ಯಾರಾಮಿಲಿಟರಿ ಕೈಗೆ ಸಿಕ್ಕಿತ್ತು. ಇಂತಹ ಪರಿಸ್ಥಿತಿ ಎದುರಾದ ಬೆನ್ನಲ್ಲೇ ಅಲರ್ಟ್ ಆಗಿದ್ದ ಸುಡಾನ್ ಸೇನೆ, ಹೇಗೋ ಒದ್ದಾಡಿ ಗುದ್ದಾಡಿ ಇದೀಗ ಅರೆಸೈನಿಕ ಪಡೆಯನ್ನು ಓಡಿಸುತ್ತಿದೆ.

ಸುಡಾನ್ ಅಧ್ಯಕ್ಷರ ಭವನದ ಮೇಲೆ ಹಿಡಿತ!
ಆಫ್ರಿಕಾ ಖಂಡದ ಬಡ ದೇಶ ಸುಡಾನ್ ಯಾವಾಗ ಪ್ಯಾರಾಮಿಲಿಟರಿ ಹಿಡಿತಕ್ಕೆ ಸಿಲುಕಿಬಿಟ್ಟು ನರಳಾಡಲು ಶುರು ಮಾಡಿತ್ತೋ, ಆಗಲೇ ನೋಡಿ ಇಡೀ ಜಗತ್ತು ಅಲರ್ಟ್ ಆಗಿತ್ತು. ಅಲ್ಲದೆ ಸುಡಾನ್ ದೇಶದ ಬಿಕ್ಕಟ್ಟು ಬಗೆಹರಿಸಬೇಕು ಎಂಬ ಒತ್ತಾಯ ಕೂಡ ಕೇಳಿ ಬಂದಿತ್ತು. ಹೀಗೆ ಇದ್ದಾಗ ಭಾರತ ಸೇರಿದಂತೆ ಜಗತ್ತಿನ ಶಾಂತಿಪಾಲನಾ ಪಡೆಗಳು ಸುಡಾನ್ ನೆಮ್ಮದಿಗಾಗಿ ಭಾರಿ ದೊಡ್ಡ ಕೊಡುಗೆ ನೀಡಿದ್ದವು.
ಇದೆಲ್ಲದರ ಪರಿಣಾಮ ಇದೀಗ ಸುಡಾನ್ ಪ್ಯಾರಾಮಿಲಿಟರಿಯ ಯೋಧರು ಓಡಿ ಹೋಗಿದ್ದಾರೆ. ಹಾಗೇ ಸುಡಾನ್‌ನ ರಾಜಧಾನಿ ಖಾರ್ಟೂಮ್ ಮೇಲೆ ಕೂಡ ಇದೀಗ ಸುಡಾನ್ ಸೇನೆ ಹಿಡಿತ ಸಾಧಿಸಲು ಯಶಸ್ವಿಯಾಗಿದೆ. ಸುಡಾನ್ ಅಧ್ಯಕ್ಷರ ಭವನ ಮತ್ತೆ ಸೇನೆಯ ಹಿಡಿತಕ್ಕೆ ಸಿಕ್ಕಿದ್ದು, ಈ ಮೂಲಕ ಸುಡಾನ್ ನೆಲದಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆ ಮಾಡುವ ಕನಸು ನನಸಾಗ್ತಿದೆ.
ಭಾರತೀಯರು ಸುಡಾನ್ ದೇಶದಲ್ಲಿ ಸಿಲುಕಿದ್ದರು
2023ರ ಏಪ್ರಿಲ್ 15 ರಂದು ಸುಡಾನ್‌ನಲ್ಲಿ ಮೊದಲಿಗೆ ಹಿಂಸಾಚಾರವು ಭುಗಿಲೆದ್ದಿತ್ತು. ಬಳಿಕ ಸಾವಿರಾರು ಜನ ಬಲಿಯಾದರು. ಇಂತಹ ಸ್ಥಿತಿಯ ಮಧ್ಯೆ ಭಾರತೀಯರು ಸೇರಿದಂತೆ ಬೇರೆ ಬೇರೆ ದೇಶಗಳ ಲಕ್ಷಾಂತರ ಜನರು ತಾಯ್ನಾಡಿಗೆ ಬರಲು ಪರದಾಡಿದ್ದರು. ಜಾಗತಿಕ ಮಟ್ಟದಲ್ಲಿ ಈ ವಿಚಾರ ದೊಡ್ಡ ತಿರುವು ಪಡೆಯುತ್ತಿರುವುದನ್ನು ಕಂಡು ಕೊನೆಗೆ ಕದನ ವಿರಾಮ ಘೋಷಣೆ ಮಾಡಿ ಸುಡಾನ್ ದೇಶದಿಂದ ಸಂತ್ರಸ್ತರನ್ನು ವಾಪಸ್ ಕರೆತರುವ ಕೆಲಸ ಯಶಸ್ವಿಯಾಗಿತ್ತು. ಇದೀಗ ಮತ್ತೆ ಸುಡಾನ್ ದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ.











Click it and Unblock the Notifications