ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1.6 ಮಿಲಿಯನ್ ಕಿಮೀ ದೂರ ನಿಂತು ಭೂಮಿ ನೋಡಿದ್ದೀರಾ?

|
Google Oneindia Kannada News

ವಾಷಿಂಗ್ಟನ್, ಜು. 22: ಅಂತರಿಕ್ಷದಲ್ಲಿ ನಿಂತು ನಮ್ಮನ್ನು ಹೊತ್ತಿರುವ ಭೂಮಿ ಹೇಗೆ ಕಾಣುತ್ತದೆ ಎಂಬುದನ್ನು ಕಣ್ಣು ತುಂಬಿಕೊಳ್ಳಬೇಕು ಎಂಬ ಆಸೆ ಮಾನವನಿಗೆ ಒಂದಲ್ಲಾ ಒಂದು ಸಾರಿ ಬಂದಿರುತ್ತದೆ. ಇದನ್ನು ನಾಸಾ(ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶ‍ನ್)ಸಾಧ್ಯ ಮಾಡಿದೆ. ಅಂದರೆ ನಿಮ್ಮನ್ನು ಅಂತರಿಕ್ಷಕ್ಕೆ ಕರೆದುಕೊಂಡು ಹೋಗುವುದಿಲ್ಲ. ಬದಲಾಗಿ ಭೂಮಿಯ ಚಿತ್ರಗಳನ್ನು ಕಳುಹಿಸಿಕೊಟ್ಟಿದ್ದು ವೀಕ್ಷಣೆ ಮಾಡಬಹುದು.

1.6 ಮಿಲಿಯನ್ ಕಿಲೋ ಮೀಟರ್ ದೂರದಿಂದ ತೆಗೆದ ಭೂಮಿಯ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ನಾಸಾದ ಡೀಪ್ ಸ್ಪೇಸ್ ಕ್ಲೈಮ್ಯಾಟ್ ಒಬ್ಸರ್ವೇಟರಿ (DSCOVR) ಉಪಗ್ರಹದಲ್ಲಿರುವ ಎಪಿಕ್ ಕ್ಯಾಮರಾ ತೆಗೆದ ಚಿತ್ರಗಳ ಸೌಂದರ್ಯವನ್ನು ನೋಡಿಯೇ ಸವಿಯಬೇಕು.

ಚಿತ್ರಗಳನ್ನು ಜುಲೈ 6 ರಂದು ತೆಗೆಯಲಾಗಿತ್ತು ಎಂದು ನಾಸಾ ತಿಳಿಸಿದೆ. ಭೂಮಿಯ ಸೌಂದರ್ಯವನ್ನು ನಾವು ಮತ್ತೊಮ್ಮೆ ಕಣ್ಣು ತುಂಬಿಕೊಳ್ಳೋಣ ಬನ್ನಿ...

ಭೂಮಿಯ ವಾತಾವರಣದ ಕನ್ನಡಿ

ಭೂಮಿಯ ವಾತಾವರಣದ ಕನ್ನಡಿ

ನೇರಳಾತೀತದಿಂದ ಹಿಡಿದು ಅತಿಗೆಂಪು ಫಿಲ್ಟರ್ ಬಳಸಿ ಭೂಮಿಯ ನಾನಾ ಕೋನಗಳನ್ನು ಎಪಿಕ್ ಸೆರೆಹಿಡಿದಿದೆ. ಡಿಎಸ್‌ಸಿಒವಿಆರ್ ತೆಗೆದಿರುವ ಮೊದಲ ಸರಣಿ ಚಿತ್ರಗಳು ಇವಾಗಿದ್ದು, ಭೂಮಿಯ ಸಹಜ ವಾತಾವರಣ ಹೇಗೆಲ್ಲ ಕಾಲ ಕಾಲಕ್ಕೆ ಬದಲಾಗುತ್ತಿದೆ, ಹೇಗೆಲ್ಲ ಹಾಳಾಗುತ್ತಿದೆ ಎಂಬುದನ್ನು ಚಿತ್ರಗಳು ತೋರಿಸುತ್ತಿವೆ.

10 ಫೋಟೋ ತೆಗೆದ ಎಪಿಕ್

10 ಫೋಟೋ ತೆಗೆದ ಎಪಿಕ್

ದೂರದಲ್ಲಿ ನಿಂತ ಎಪಿಕ್ ಭೂಮಿಯ 10 ಚಿತ್ರಗಳನ್ನು ಸೆರೆಹಿಡಿದಿದೆ. ಒಂದು ಪಾರ್ಶ್ವದಲ್ಲಿ ಕಾಣುವ ಎಲ್ಲ ಭಾಗಗಳನ್ನು ಒಂದೇ ಚಿತ್ರದಲ್ಲಿ ಬರುವಂತೆ ಸೆರೆಹಿಡಿಯಲಾಗಿದೆ.

ಅಧ್ಯಯನ ಆರಂಭ

ಅಧ್ಯಯನ ಆರಂಭ

ನಾಸಾ ತೆಗೆದಿರುವ ಚಿತ್ರಗಳನ್ನು ಆಧರಿಸಿ ಭೂಮಿಯ ಮೇಲಿನ ವಾತಾವರಣವನ್ನು ಮತ್ತೆ ಅಭ್ಯಾಸ ಮಾಡಲು ವಿಜ್ಞಾನಿಗಳು ಶುರುವಿಟ್ಟುಕೊಂಡಿದ್ದಾರೆ. ಹೆಚ್ಚುತ್ತಿರುವ ಮಾಲಿನ್ಯ ಯಾವ ಬಗೆಯಲ್ಲಿ ಕೆಟ್ಟ ಪರಿಣಾಮ ಬೀರುತ್ತಿದೆ. ವಾತಾವರಣದ ಬದಲಾವಣೆಗಳಿಗೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ.

ಬರಾಕ್ ಒಬಾಮಾ ಮನ್ನಣೆ

ನಾಸಾ ತೆಗೆದಿರುವ ಚಿತ್ರಗಳಲ್ಲಿ ಒಂದನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಹಲವು ಗಣ್ಯರು ಟ್ವಿಟ್ಟರ್ ನಲ್ಲಿ ಷೇರ್ ಮಾಡಿದ್ದಾರೆ. ಭೂಮಿ ಮೇಲಿನ ಜಲರಾಶಿ ಸಸ್ಯಸಂಕುಲ ಎಲ್ಲವನ್ನು ತೋರಿಸುವ ಫೋಟೋ ಜಗತ್ತಿನಾದ್ಯಂತ ಮನ್ನಣೆಗೆ ಪಾತ್ರವಾಗಿದೆ.

English summary
A NASA camera on the Deep Space Climate Observatory (DSCOVR) satellite has returned its first stunning view of the entire sun-lit side of Earth. The images clearly show desert sand structures, river systems and complex cloud patterns on planet Earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X