Earthquake: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ದೆಹಲಿಯಲ್ಲೂ ಕಂಪನದ ಅನುಭವ
ಅಫ್ಘಾನಿಸ್ತಾನದಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದೆ. ಬಲವಾಗಿ ಭೂಮಿ ಕಂಪಿಸಿದ್ದರಿಂದ ಉತ್ತರ ಭಾರತದಲ್ಲಿ ಕಂಪನದ ಅನುಭವವಾಗಿದೆ. ವಿಶೇಷವಾಗಿ ದೆಹಲಿಯಲ್ಲಿ ಜನರಿಗೆ ಭೂಕಂಪನದ ಅನುಭವವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.6 ರಷ್ಟು ದಾಖಲಾಗಿದ್ದು ಅದರ ಆಳ 121 ಕಿ.ಮೀ ಇದೆ. ಕೇಂದ್ರಬಿಂದು ಅಫ್ಘಾನಿಸ್ತಾನ ಎಂದು ಹೇಳಲಾಗುತ್ತಿದೆ.
ಕಳೆದ ಎರಡು ದಿನಗಳಲ್ಲಿ ತಜಕಿಸ್ತಾನದಲ್ಲಿ ಮೂರು ಭೂಕಂಪಗಳು ಸಂಭವಿಸಿವೆ. ಅಲ್ಲದೆ ವರ್ಷದ ಆರಂಭದಲ್ಲಿ ಭೂಕಂಪದಿಂದಾಗಿ ಟಿಬೆಟ್‌ನಲ್ಲಿ ವಿನಾಶಕಾರಿ ಪರಿಸ್ಥಿತಿ ಉದ್ಭವಿಸಿತ್ತು. ಇದರಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ನಂತರ ಮಾರ್ಚ್‌ನಲ್ಲಿ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಭೂಕಂಪಗಳು ವಿನಾಶವನ್ನುಂಟುಮಾಡಿದವು.

ಅಫ್ಘಾನಿಸ್ತಾನ ಭೂಕಂಪನ:
ಅಫ್ಘಾನಿಸ್ತಾನದಲ್ಲಿ ಇಂದು ಸಂಭವಿಸಿದ ಭೂಕಂಪದ ಕೇಂದ್ರಬಿಂದು ಮತ್ತು ತೀವ್ರತೆ ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ಪ್ರಕಾರ, ಭೂಕಂಪದ ತೀವ್ರತೆ: 5.6, ಆಳ: 121 ಕಿ.ಮೀ, ಸ್ಥಳ: ಸುಮಾರು 1,80,000 ಜನಸಂಖ್ಯೆಯನ್ನು ಹೊಂದಿರುವ ಬಾಗ್ಲಾನ್ ನಗರದ ಪೂರ್ವಕ್ಕೆ 164 ಕಿ.ಮೀ.ದೂರದಲ್ಲಿ ಇದೆ.
ದೆಹಲಿಯಲ್ಲೂ ಕಂಪಿಸಿದ ಭೂಮಿ:
ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ದೆಹಲಿ ಕೂಡ ಶೇಕ್ ಆಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ದೆಹಲಿ, ನೋಯ್ಡಾ, ಗಾಜಿಯಾಬಾದ್‌ನ ಜನರು ಭೂಕಂಪನದ ಬಗ್ಗೆ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಕ್ಸ್ ಖಾತೆಯಲ್ಲಿ ಒಬ್ಬ ವ್ಯಕ್ತಿ - 'ದೆಹಲಿಯಲ್ಲಿ ಯಾರಾದರೂ ಭೂಕಂಪನವನ್ನು ಅನುಭವಿಸಿದ್ದೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಅದಕ್ಕೆ ಪ್ರತಿಕ್ರಿಯಿಸಿ - 'ಅದು ಭೂಕಂಪವಾಗಿತ್ತೇ?' ಎಂದು ಚರ್ಚಿಸಿದ್ದಾರೆ. ದೆಹಲಿಯಲ್ಲಿ ಯಾವುದೇ ದೊಡ್ಡ ಹಾನಿ ವರದಿಯಾಗಿಲ್ಲವಾದರೂ, ಜನರು ಸಾಕಷ್ಟು ಭಯಭೀತರಾಗಿದ್ದಾರೆ.
ಇನ್ನೂ ಫಿಲಿಪೈನ್ಸ್‌ನಲ್ಲಿ 5.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸುವ ಕೆಲವು ಗಂಟೆಗಳ ಮೊದಲು, ದಕ್ಷಿಣ ಫಿಲಿಪೈನ್ಸ್‌ನ ಮಿಂಡಾನಾವೊ ದ್ವೀಪದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಳ: 30 ಕಿ.ಮೀ. ಸ್ಥಳ: ಮೈತುಮ್ ಪಟ್ಟಣದ ನೈಋತ್ಯಕ್ಕೆ 43 ಕಿ.ಮೀ. ದೂರದಲ್ಲಿ ಭೂಕಂಪನವಾಗಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಯಾವುದೇ ದೊಡ್ಡ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ.
ತಜಕಿಸ್ತಾನದಲ್ಲಿ ಸರಣಿ ಭೂಕಂಪಗಳು ಕಳೆದ ಎರಡು ದಿನಗಳಲ್ಲಿ ತಜಕಿಸ್ತಾನದಲ್ಲಿ ಮೂರು ಭೂಕಂಪಗಳು ಸಂಭವಿಸಿವೆ. ಏಪ್ರಿಲ್ 13 ರಂದು ಭೂಕಂಪನ ಸಂಭವಿಸಿತ್ತು. ಅದರ ತೀವ್ರತೆ 6.1, ಆಳ 10 ಕಿ.ಮೀ ಇದೆ. ಇದಕ್ಕೂ ಮೊದಲು 3.9 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿತ್ತು.
ಏಷ್ಯಾದಲ್ಲಿ ಪದೇ ಪದೇ ಸಂಭವಿಸುವ ಭೂಕಂಪಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ತಜಿಕಿಸ್ತಾನ್ ಮತ್ತು ಫಿಲಿಪೈನ್ಸ್‌ನಂತಹ ಏಷ್ಯಾದ ದೇಶಗಳಲ್ಲಿ ಆಗಾಗ್ಗೆ ಸಂಭವಿಸುವ ಭೂಕಂಪಗಳು ಮತ್ತೊಮ್ಮೆ ಭೂಕಂಪನ ಚಟುವಟಿಕೆಗಳ ಗಂಭೀರತೆಯನ್ನು ಎತ್ತಿ ತೋರಿಸಿವೆ. ಇದರಿಂದಾಗಿ ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳು ಸಹ ಎಚ್ಚರಕೆಯಿಂದರಬೇಕಿದೆ.












Click it and Unblock the Notifications