Get Updates
Get notified of breaking news, exclusive insights, and must-see stories!

STOP ADANI: ಗಣಿಧಣಿ ವಿರುದ್ಧ ಆಸ್ಟ್ರೇಲಿಯಾದಲ್ಲಿ ಭಾರೀ ಪ್ರತಿಭಟನೆ

ಸಿಡ್ನಿ, ಅಕ್ಟೋಬರ್ 8: ಆಸ್ಟ್ರೇಲಿಯಾದಲ್ಲಿ ಅತೀ ದೊಡ್ಡ ಕಾರ್ಮೈಕಲ್ ಕಲ್ಲಿದ್ದಲು ಗಣಿ ಆರಂಭಿಸಲು ಹೊರಟ ಭಾರತದ ಉದ್ಯಮಿ ಗೌತಮ್ ಅದಾನಿಗೆ ಭಾರೀ ಹಿನ್ನಡೆಯಾಗಿದೆ.

ಗಣಿಗಾರಿಕೆ ಆರಂಭಿಸುವುದರಿಂದ ಪರಿಸರದ ಮೇಲೆ ತೀವ್ರತರದ ಪರಿಣಾಮ ಉಂಟಾಗಲಿದೆ ಎಂದು ಅಪಸ್ವರ ಎತ್ತಿರುವ ಆಸ್ಟ್ರೇಲಿಯಾದ ಪರಿಸರವಾದಿಗಳು ಮತ್ತು ಜನರು ಶನಿವಾರ 'STOP ADANI' (ಸ್ಟಾಪ್ ಅದಾನಿ) ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಪಾರ್ಕ್, ಬೀಚ್ ಗಳಲ್ಲಿ 'STOP ADANI' ಎಂಬ ಪ್ಲೇಕಾರ್ಡ್ ಗಳು, ಮಾನವ ಸರಪಳಿಗಳನ್ನು ರಚಿಸಿ ಆಸ್ಟ್ರೇಲಿಯಾದ ಜನರು ವಿನೂತನ ಪ್ರತಿಭಟನೆಗೆ ಇಳಿದಿದ್ದು ಜಗತ್ತಿನ ಗಮನ ಸೆಳೆದಿದೆ.

STOP ADANI: Huge protest across Australia against Adani's coal mine project

ಕ್ವೀನ್ಸ್ ಲ್ಯಾಂಡ್ ನಲ್ಲಿ ಗಣಿಗಾರಿಕೆ ಆರಂಭಿಸುವುದರಿಂದ ಜಾಗತಿಕ ತಾಪಮಾನ ಏರಿಕೆಯಾಗುವುದಲ್ಲದೆ ಗ್ರೇಟ್ ಬ್ಯಾರಿಯರ್ ರೀಫ್ (ಹವಳದ ದಿಬ್ಬಗಳು)ಗೆ ಹಾನಿಯಾಗಲಿದೆ ಎಂದು ಪರಿಸರವಾದಿಗಳು ಪ್ರತಿಭಟನೆಗೆ ಇಳಿದಿದ್ದಾರೆ.

ಒಟ್ಟು ಶನಿವಾರ 45 ಪ್ರತಿಭನೆಗಳನ್ನು ನಡೆಸಲಾಗಿದ್ದು ಸಿಡ್ನಿಯ ಬಿಂದಿ ಬೀಚ್ ನಲ್ಲಿ ಜನರು 'STOP ADANI' ಆಕಾರದಲ್ಲಿ ನಿಂತು ಪ್ರತಿಭಟನೆಯ ಬಸಿ ಮುಟ್ಟಿಸಿದ್ದಾರೆ. ಅದಾನಿ ಗಣಿಯನ್ನು ಅರ್ಧಕರ್ಧ ಆಸ್ಟ್ರೇಲಿಯಾದ ಜನರು ವಿರೋಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

STOP ADANI: Huge protest across Australia against Adani's coal mine project

ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ ಇನ್ನೊಂದೆಡೆ ಅದಾನಿ 26,000 ಕೋಟಿ ರೂ.ಗಳ ಯೋಜನೆಯಿಂದ ಉದ್ಯೋಗ ಸೃಷ್ಠಿಯಾಗುತ್ತದೆ. ಟ್ಯಾಕ್ಸ್ ರೂಪದಲ್ಲಿ ಸರಕಾರದ ಬೊಕ್ಕಸಕ್ಕೆ ಹಣ ಬಂದು ಬೀಳುತ್ತದೆ. ಭಾರತದ ಗ್ರಾಮೀಣ ಭಾಗಕ್ಕೆ ವಿದ್ಯುತ್ ದೊರೆಯುತ್ತದೆ ಎಂದು ಭರಪೂರ ಭರವಸೆಗಳನ್ನು ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+