ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1978ರಲ್ಲೇ ಕೊರೊನಾ ವೈರಸ್ ಬಗ್ಗೆ ಸುಳಿವು ನೀಡಿದ್ದ ಕಿಂಗ್

|
Google Oneindia Kannada News

ಬೆಂಗಳೂರು, ಮಾರ್ಚ್ 6: ಚೀನಾದಿಂದ ವಿಶ್ವದೆಲ್ಲೆಡೆ ಹರಡಿರುವ ಕೊರೊನಾ ವೈರಸ್ ಮಹಾಮಾರಿ ಬಗ್ಗೆ ಈ ಹಿಂದೆಯೇ ಹಲವು ಕೃತಿಗಳಲ್ಲಿ ಉಲ್ಲೇಖವಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಈ ಮಾರಕ ಕಾಯಿಲೆಗೆ 3 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಹಲವು ದೇಶಗಳಿಗೆ ಹರಡಿದ್ದು, ಎಲ್ಲೆಡೆ ಭೀತಿ ಆವರಿಸಿದೆ.

ಇಂಥದ್ದೊಂದು ಮಹಾಮಾರಿ ವಿಶ್ವದೆಲ್ಲೆಡೆ ಆವರಿಸಲಿದೆ ಎಂದು 12 ವರ್ಷಗಳ ಹಿಂದೆಯೇ ಲೇಖಕಿಯೊಬ್ಬರು ಹೇಳಿದ್ದರು. 2008ರಲ್ಲಿ ಪ್ರಕಟವಾಗಿದ್ದ ಪುಸ್ತಕದಲ್ಲಿ ಈ ಬಗ್ಗೆ ಬರೆಯಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಯಲ್ಲಿದೆ.

ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?

ಅಮೆರಿಕ ಮೂಲದ ಬರಹಗಾರ್ತಿ ಸಿಲ್ವಿಯಾ ಬ್ರೌನ್ ಅವರು 2008ರಲ್ಲಿ 'ಎಂಡ್ ಆಫ್ ಡೇಸ್' ಪುಸ್ತಕದಲ್ಲಿ ಕೊರೊನಾ ವೈರಸ್ ಅಂತಹ ಭಯಾನಕ ಕಾಯಿಲೆ ಬಗ್ಗೆ ಚರ್ಚಿಸಿದ್ದರು ಎಂಬ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಕೊರೊನಾ ವೈರಸ್ ರೋಗದ ಲಕ್ಷಣಗಳ ಬಗ್ಗೆ ಆಗಲೇ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಪುಸ್ತಕದ ಅಂಶಗಳು ಸ್ಕ್ರೀನ್ ಶಾಟ್ ಈಗ ಟ್ರೆಂಡ್ ಆಗುತ್ತಿದೆ. ಆದರೆ, ಇದಕ್ಕೂ ತುಂಬಾ ಮೊದಲೇ 1978ರಲ್ಲಿ ಖ್ಯಾತ ಕಾದಂಬರಿಕಾರ ಬರೆದ ಕೃತಿಯಲ್ಲಿ ಕೊರೊನಾ ಮಾದರಿ ಕಾಯಿಲೆ ವಿಶ್ವವನ್ನು ಆವರಿಸುವ ಬಗ್ಗೆ ಬರೆಯಲಾಗಿದೆ....

 ಸ್ಟೀಫನ್ ಕಿಂಗ್ ಹಾರರ್ ಫ್ಯಾಂಟಸಿ ಕಥೆ

ಸ್ಟೀಫನ್ ಕಿಂಗ್ ಹಾರರ್ ಫ್ಯಾಂಟಸಿ ಕಥೆ

ಸ್ಟೀಫನ್ ಕಿಂಗ್ ಬರೆದಿರುವ ಹಾರರ್ ಫ್ಯಾಂಟಸಿ ಕಾದಂಬರಿ ದಿ ಸ್ಟ್ಯಾಂಡ್ ಕೃತಿಯಲ್ಲಿ ಒಂದು ರೀತಿಯ ವೈರಸ್ ಆಕಸ್ಮಿಕವಾಗಿ ಸಾರ್ವಜನಿಕವಾಗಿ ರಿಲೀಸ್ ಆಗುತ್ತದೆ. ಇದರಿಂದ ಸಾವು ನೋವು, ಗೊಂದಲ ಹೆಚ್ಚಾಗುತ್ತದೆ. ಜ್ವರದ ಮೂಲಕ ಕಾಣಿಸಿಕೊಳ್ಳುವ ಕಾಯಿಲೆ ನಿಜವಾಗಿಯೂ ಬಯೋಲಾಜಿಕಲ್ ಯುದ್ಧವಾಗಿ ಪರಿಣಮಿಸಿರುತ್ತದೆ. ವಿಶ್ವದ ಜನಸಂಖ್ಯೆಯನ್ನು ಅರ್ಧಕ್ಕೆ ಇಳಿಸಿಬಿಡುತ್ತದೆ. 1978ರಲ್ಲಿ ಈ ಕಾದಂಬರಿಯಲ್ಲಿರುವ ಸನ್ನಿವೇಶವನ್ನು ಈಗ ನಾವು ನೋಡುತ್ತಿದ್ದೇವೆ ಎಂದು ನೆಟ್ಟಿಗರು ಎಚ್ಚರಿಸಿದ್ದಾರೆ.

 ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತಿಲ್ಲ

ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತಿಲ್ಲ

ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತಿಲ್ಲ. ಈಗ ಶ್ವಾಸಕೋಶ ಮತ್ತು ಶ್ವಾಸನಾಳದ ಮೂಲಕವೇ ಹರಡುತ್ತಿದೆ. ಸದ್ಯಕ್ಕೆ ಯಾವ ಚಿಕಿತ್ಸೆ, ಚುಚ್ಚುಮದ್ದಿ ಕಂಡು ಹಿಡಿದಿಲ್ಲ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪುಸ್ತಕದಲ್ಲಿ ವೈರಾಣು ನಾಶದ ಬಗ್ಗೆ ಸರಿಯಾದ ಉಲ್ಲೇಖವಿಲ್ಲ. ಆದರೆ, ಕಥೆಯ ಅಂತ್ಯಕ್ಕೆ ವೈರಸ್ ಇದ್ದಕ್ಕಿದ್ದಂತೆ ಮಾಯಾಗಲಿದೆ. ಜ್ವರ ಎಲ್ಲೆಡೆ ತಗ್ಗುತ್ತಿದ್ದಂತೆ ವೈರಾಣು ಜನರ ಮನಸ್ಸಿನಿಂದ ದೂರಾಗುತ್ತದೆ ಎನ್ನಲಾಗಿದೆ.

 ಸಿಲ್ವಿಯಾ ಬ್ರೌನ್ 2020ರ ಕಾದಂಬರಿಯಲ್ಲಿ ಉಲ್ಲೇಖ

ಸಿಲ್ವಿಯಾ ಬ್ರೌನ್ 2020ರ ಕಾದಂಬರಿಯಲ್ಲಿ ಉಲ್ಲೇಖ

ಸಿಲ್ವಿಯಾ ಬ್ರೌನ್ ಬರೆದಿರುವ ದಿ ಎಂಡ್ ಆಫ್ ಡೇಸ್ ನಲ್ಲಿ ವೈರಾಣು ಬಗ್ಗೆ ಉಲ್ಲೇಖವಿದ್ದು, ''ಈ ವೈರಸ್ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ, 10 ವರ್ಷಗಳ ನಂತರ ಮತ್ತೆ ದಾಳಿ ಮಾಡುತ್ತದೆ ಮತ್ತು ನಂತರ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ'' ಎಂದು ಮಾರಕ ಕಾಯಿಲೆ ಬಗ್ಗೆ ಹೇಳಲಾಗಿದೆ. ಸಿಲ್ವಿಯಾ ಬ್ರೌನ್ ಅವರು ಚರ್ಚಿಸಿರುವ ಈ ಕಾಯಿಲೆಯೇ ಕೊರೊನಾ ವೈರಸ್ ಇರಬಹುದು ಎಂಬ ಚರ್ಚೆ ನಡೆಯುತ್ತಿದೆ.

 ಅನೇಕ ಕೃತಿಗಳ ಬಗ್ಗೆ ಉಲ್ಲೇಖ

ಅನೇಕ ಕೃತಿಗಳ ಬಗ್ಗೆ ಉಲ್ಲೇಖ

ಕೊರೊನಾ ವೈರಸ್ ಲಕ್ಷಣಗಳನ್ನು ಗಮನಿಸಿದರೆ ಸಿಲ್ವಿಯಾ ಬ್ರೌನ್ ಅವರು 12 ವರ್ಷದ ಹಿಂದೆ ಹೇಳಿರುವ ಅಂಶಗಳಿಗೂ ಹೋಲಿಕೆಯಾಗುತ್ತಿದೆ. ಹಾಗಾಗಿ, ನೆಟ್ಟಿಗರು ಇದನ್ನು ಕಂಡು ಅಚ್ಚರಿಯಾಗಿದ್ದಾರೆ. ಈ ಪುಸ್ತಕದಲ್ಲಿರುವುದು ಇದು ನಿಜನಾ? ಮತ್ತೆ 10 ವರ್ಷದ ನಂತರ ಬರುತ್ತಾ? ಹೀಗೆ ಬಗೆ ಬಗೆ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಇದಲ್ಲದೆ ರಾಬಿನ್ ಕುಕ್ ಔಟ್ ಬ್ರೇಕ್, ಸೈಂಟ್ ಜಾನ್ ಮಾಂಡೆಲ್ಸ್ ಸ್ಟೇಷನ್ ಎಲೆವನ್, ಮ್ಯಾಕ್ಸ್ ಬ್ರೂಕ್ಸ್ ವರ್ಲ್ಡ್ ವಾರ್ ಜಡ್ ಹಾಗೂ ಮೈಕಲ್ ಕ್ರಿಚ್ಟನ್ ದಿ ಆಂಡ್ರ್ಯೋಮಿಡಾ ಸ್ಟ್ರೇನ್ ಬಗ್ಗೆ ಕೂಡಾ ಚರ್ಚೆ ನಡೆದಿದೆ.

 ನೂರಾರು ದೇಶಗಳಲ್ಲಿ ಕೊರೊನಾ ವೈರಸ್

ನೂರಾರು ದೇಶಗಳಲ್ಲಿ ಕೊರೊನಾ ವೈರಸ್

ಇದುವರೆಗೂ ನೂರಾರು ದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಮಾರ್ಚ್ 6ರ ಈ ಸಮಯಕ್ಕೆ 98, 439ಕ್ಕೂ ಅಧಿಕ ಪ್ರಕರಣಗಳು ಜಗತ್ತಿನಾದ್ಯಂತ ದಾಖಲಾಗಿದೆ. ಅದರಲ್ಲಿ 3,387 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 27 ಕೊರೊನಾ ವೈರಸ್ ಪತ್ತೆಯಾಗಿದ್ದು, 3 ಮಂದಿ ಗುಣಮುಖವಾಗಿದೆ.

English summary
Social media suggests that the Stephen King novel titled The Stand(1978) cited an incident which is similar to the outbreak of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X