Myanmar Earthquake: ಥಾಯ್‌ಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಮನುಷ್ಯರು ಇಂದು ಮತ್ತೊಂದು ಭೀಕರ ಭೂಕಂಪನಕ್ಕೆ ಸಾಕ್ಷಿಯಾಗಿದ್ದಾರೆ ಮ್ಯಾನ್ಮಾರ್ ಹಾಗು ಥಾಯ್ಲೆಂಡ್ ದೇಶಗಳು ಭೀಕರ ಭೂಕಂಪನ ಕಂಡು ನಲುಗಿ ಹೋಗಿದ್ದು, ಭಾರಿ ದೊಡ್ಡದಾಗಿ ಅನಾಹುತ ಸಂಭವಿಸಿದೆ. ಲೆಕ್ಕಕ್ಕೆ ಸಿಗದಷ್ಟು ಕಟ್ಟಡಗಳು ಹಾನಿಗೀಡಾಗಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ. ಹಾಗೇ ಸಾವಿನ ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ. ಇದೇ ಸಮಯದಲ್ಲಿ ದಿಢೀರ್ ಥಾಯ್ಲೆಂಡ್ ರಾಜಧಾನಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಮ್ಯಾನ್ಮಾರ್ & ಥಾಯ್ಲೆಂಡ್ ದೇಶಗಳ ಪರಿಸ್ಥಿತಿ ಇಂದು ಬೆಳಗ್ಗೆ ಚನ್ನಾಗಿಯೇ ಇತ್ತು. ಜನರು ಕೂಡ ಸಾಮಾನ್ಯ ದಿನದಂತೆ ತಮ್ಮ ಚಟುವಟಿಕೆ ನಡೆಸುತ್ತಿದ್ದರು. ಆದರೆ ದಿಢೀರ್ ಏನಾಯ್ತೋ ಅಂತಾ ತಿಳಿಯದೆ ಜನರು ಕಟ್ಟಡಗಳನ್ನು ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ಹಾಗೇ ಇನ್ನೂ ಕೆಲವರು ರಸ್ತೆಯಲ್ಲಿ ತೆರಳುವ ಸಮಯದಲ್ಲಿ ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ. ಹೀಗೆ ನೋಡ ನೋಡುತ್ತಲೇ ಭೀಕರ ಭೂಕಂಪನ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿ ಹಾಕಿದೆ. ಇಂದು ಮಧ್ಯಾಹ್ನ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆ ಪ್ರಬಲ ಭೂಕಂಪನ ಸಂಭವಿಸಿದೆ ಎಂಬ ಸತ್ಯ ಆ ನಂತರ ಜನರಿಗೆ ಗೊತ್ತಾಗಿದೆ.

ದಿಢೀರ್ ತುರ್ತು ಪರಿಸ್ಥಿತಿ ಘೋಷಣೆ
ಭೂಮಿ ಕಂಪಿಸಿದ ರೀತಿ ನೋಡಿ ಇಡೀ ಜಗತ್ತೇ ಬೆಚ್ಚಿಬಿದ್ದಿದ್ದು, ಮ್ಯಾನ್ಮಾರ್ & ಥಾಯ್ಲೆಂಡ್ ದೇಶಗಳ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಈಗ ಸಮಯ ಕಳೆಯುತ್ತಿದ್ದಾರೆ. ಸಾವಿನ ಸಂಖ್ಯೆ ಈಗಾಗಲೇ 100 ದಾಟಿದ್ದು, 350 ಜನರು ಮ್ಯಾನ್ಮಾರ್ ದೇಶ ಒಂದರಲ್ಲೇ ಜೀವವನ್ನು ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ಬ್ಯಾಂಕಾಕ್ ಕೂಡ ಭೀಕರ ಭೂಕಂಪನ ಹಿನ್ನೆಲೆಯಲ್ಲಿ ನಲುಗಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಥಾಯ್ಲೆಂಡ್ ಸರ್ಕಾರ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ.
ಜೀವ ಉಳಿಸಿಕೊಳ್ಳಲು ಗಾಯಾಳುಗಳ ಪರದಾಟ
ಬ್ಯಾಂಕಾಕ್ ನಗರದಲ್ಲಿ ಕೂಡ ಭಾರಿ ದೊಡ್ಡ ಹಾನಿ ಭೂಕಂಪನ ಪರಿಣಾಮ ಉಂಟಾಗಿದೆ. ಹೀಗಿದ್ದಾಗ ಸಾಕಷ್ಟು ಗಾಯಾಳುಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದು, ಅವರಿಗೆ ಟ್ರೀಟ್‌ಮೆಂಟ್ ಕೊಡುವ ಕೆಲಸ ಸಾಗಿದೆ. ಮತ್ತೊಂದು ಕಡೆ ಕುಸಿದು ಬಿದ್ದಿರುವ ಕಟ್ಟಡಗಳ ಕೆಳಗೆ ನೂರಾರು ಜನರು ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭಯ ಕಾಡುತ್ತಿದೆ. ಆಸ್ಪತ್ರೆಗಳಲ್ಲಿ ಇದೀಗ ಗಾಯಾಳುಗಳ ನರಳಾಟ ಕರುಳು ಹಿಂಡುವಂತಿದೆ.
ಈ ಎಲ್ಲಾ ಕಾರಣಕ್ಕೆ ಇದೀಗ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಕೈಮೀರಿದ ಪರಿಸ್ಥಿತಿ ನಿಯಂತ್ರಣಕ್ಕೆ ಬ್ಯಾಂಕಾಕ್ ಆಡಳಿತವು ಒದ್ದಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಸುದ್ದಿ ತಲ್ಲಣ ಎಬ್ಬಿಸಿದ್ದು, ಹಲವು ದೇಶಗಳು ಈಗಾಗಲೇ ತಮ್ಮ ತಮ್ಮ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ. ಸುರಕ್ಷಿತವಾಗಿ ಇರುವಂತೆ ಸೂಚಿಸಲಾಗಿದ್ದು, ಲಕ್ಷಾಂತರ ಪ್ರವಾಸಿಗರು ಪರದಾಡುತ್ತಿದ್ದಾರೆ.












Click it and Unblock the Notifications