ಪಾಕ್ ನಲ್ಲಿ ಉಗ್ರಗಾಮಿಗಳ ಬ್ಯಾಂಕ್ ಖಾತೆ ಮುಟ್ಟುಗೋಲು

By: ಪಿಟಿಐ
Subscribe to Oneindia Kannada

ಇಸ್ಲಾಮಾಬಾದ್, ಅಕ್ಟೋಬರ್ 25: ಪಾಕಿಸ್ತಾನದಲ್ಲಿ 5,100 ಶಂಕಿತ ಉಗ್ರರ ಬ್ಯಾಂಕ್ ಖಾತೆಗಳಲ್ಲಿದ್ದ 40 ಕೋಟಿ ರುಪಾಯಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿಯಾದ ನಂತರ ರಕ್ಷಣೆ ನೀಡುವ ಕಾರಣಕ್ಕೆ ಬಂಧನದಲ್ಲಿ ಇರಿಸಿರುವ ಜೈಶ್ ಇ ಮೊಹಮದ್ ನ ಮುಖ್ಯಸ್ಥ ಮಸೂದ್ ಅಜರ್ ನ ಖಾತೆ ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಕ್ವೆಟ್ಟಾದಲ್ಲಿ ಭೀಕರ ಹತ್ಯಾಕಾಂಡ : 57 ಕೆಡೆಟ್‌ಗಳ ಮಾರಣಹೋಮ]

State Bank Of Pakistan Freezes Accounts Of 5,100 Terror Suspects

ಆಂತರಿಕ ಸಚಿವಾಲಯದ ಮನವಿ ಮೇರೆಗೆ ಎಲ್ಲ ಮುಖ್ಯ ಉಗ್ರಗಾಮಿಗಳ ಖಾತೆ ಸ್ಥಗಿತ ಮಾಡಿದ್ದೇವೆ. ಅದರಲ್ಲಿ ಮಸೂದ್ ಅಹರ್ ನ ಖಾತೆ ಕೂಡ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.[ಭಾರತದ ನೀರಿನ ಯೋಜನೆಗಳ ಮೇಲೆ ಆತ್ಮಾಹುತಿ ದಾಳಿಗೆ ಉಗ್ರ ಅಜರ್ ಕರೆ]

ಸಚಿವಾಲಯವು ಸಾವಿರಾರು ಶಂಕಿತರ ಹೆಸರಿದ್ದ ಮೂರು ಪಟ್ಟಿಯನ್ನು ಕಳಿಸಿತ್ತು. ಅದರಲ್ಲಿ ಕೆಲವು ಉಗ್ರಸಂಘಟನೆಗಳ ಮುಖ್ಯ ಉಗ್ರಗಾಮಿಗಳ ಹೆಸರಿತ್ತು. ಸಾವಿರದ ಇನ್ನೂರು ಶಂಕಿತ ಉಗ್ರರ ಹೆಸರನ್ನು 'ಎ' ಪಟ್ಟಿಯಲ್ಲಿ ಸೇರಿಸಿ, ಭಯೋತ್ಪಾದನಾ ನಿಗ್ರಹ ಕಾಯ್ದೆ-1997ರ ಅಡಿಯಲ್ಲಿ ಖಾತೆ ಸ್ಥಗಿತಗೊಳಿಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan have frozen bank accounts of over 5,100 terror suspects, including JeM chief Masood Azhar who is under 'protective custody' after the terror attack on the Pathankot air base, officials said.
Please Wait while comments are loading...