ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಅಧ್ಯಕ್ಷ ಸ್ಥಾನ ತೊರೆಯಲು ಗೋಟಬಯ ರಾಜಪಕ್ಸೆ ಷರತ್ತು!

|
Google Oneindia Kannada News

ಕೊಲಂಬೋ, ಜು.13: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯಿಸಿ ಶ್ರೀಲಂಕಾ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ತಮ್ಮ ರಾಜೀನಾಮೆಗೆ ಷರತ್ತು ವಿಧಿಸಿದ್ದಾರೆ.

ಉಗ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ತಮ್ಮ ಕುಟುಂಬವು ದೇಶದಿಂದ ಸುರಕ್ಷಿತವಾಗಿ ಹೊರ ಹೋಗುವವರೆಗೂ ರಾಜೀನಾಮೆ ನೀಡುವುದಿಲ್ಲ ಎಂದು ಸುಳಿವು ನೀಡಿದ್ದಾರೆ. ಮೂಲಗಳ ಪ್ರಕಾರ, ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ, ಆದರೆ ಯಾವುದೇ ಪಕ್ಷವು ಈ ಸಲಹೆಯನ್ನು ಸ್ವೀಕರಿಸಲು ಸಿದ್ಧವಾಗಿಲ್ಲ ಎನ್ನಲಾಗಿದೆ.

ಮೂರು ದಿನಗಳ ಹಿಂದೆ ಅಧ್ಯಕ್ಷರು ಸ್ಪೀಕರ್ ಜತೆ ಮಾತನಾಡಿ ಬುಧವಾರ (ಜು.13)ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಆದರೆ, ಕಳೆದ 40 ಗಂಟೆಗಳಲ್ಲಿ ಅವರು ಬುಧವಾರ ರಾಜೀನಾಮೆ ನೀಡುವ ಬಗ್ಗೆ ಏನನ್ನೂ ಹೇಳಿಲ್ಲ. ರಾಜಪಕ್ಸೆ ಅವರು ತಮ್ಮ ರಾಜೀನಾಮೆಯನ್ನು ಕಳುಹಿಸುವ ಮೊದಲು ದೇಶವನ್ನು ತೊರೆಯಲು ಮತ್ತು ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಹೊರ ಹೋಗುವುದನ್ನು ಬಯಸಿದ್ದಾರೆ.

ದೇಶ ತೊರೆಯಲು ಯತ್ನಿಸಿದ ಶ್ರೀಲಂಕಾ ಮಾಜಿ ಹಣಕಾಸು ಸಚಿವನಿಗೆ ಚಳಿ ಬಿಡಿಸಿದ ಜನತೆದೇಶ ತೊರೆಯಲು ಯತ್ನಿಸಿದ ಶ್ರೀಲಂಕಾ ಮಾಜಿ ಹಣಕಾಸು ಸಚಿವನಿಗೆ ಚಳಿ ಬಿಡಿಸಿದ ಜನತೆ

ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಸಹೋದರ ಬೆಸಿಲ್ ರಾಜಪಕ್ಸೆ ಅವರನ್ನು ವಿಮಾನ ನಿಲ್ದಾಣದ ಅಂತರಾಷ್ಟ್ರೀಯ ವಿಐಪಿ ನಿರ್ಗಮನದಲ್ಲಿ ವಲಸೆ ಇಲಾಖೆ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ತಡೆದರು. ವಿಐಪಿ ಕಾರಿಡಾರ್‌ನಲ್ಲಿರುವ ಎಲ್ಲಾ ಸಿಬ್ಬಂದಿ ರಾಜಪಕ್ಸೆ ನಿರ್ಗಮನವನ್ನು ತಡೆಯಲು ಸೇವೆಗಳನ್ನು ರದ್ದುಗೊಳಿಸಿದ್ದಾರೆ.

 ರಾಜೀನಾಮೆ ನೀಡುವಂತೆ ಒತ್ತಾಯ

ರಾಜೀನಾಮೆ ನೀಡುವಂತೆ ಒತ್ತಾಯ

ಅಧ್ಯಕ್ಷರು ರಾಜೀನಾಮೆ ನೀಡದಿದ್ದರೆ, ಕೊಲಂಬೊದಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಶನಿವಾರದಂದು ಕೊಲಂಬೊದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನಗೈದರು. ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಕಾಂಪೌಂಡ್‌ಗೆ ನುಗ್ಗಿ ದೇಶದ ಆರ್ಥಿಕತೆಯನ್ನು ಉಳಿಸುವಲ್ಲಿ ಸರ್ಕಾರದ ವಿಫಲತೆಗೆ ರಾಜೀನಾಮೆ ನೀಡುವಂತೆ ಕೋರಿದರು.

ಶ್ರೀಲಂಕಾ ಅಧ್ಯಕ್ಷ, ಪ್ರಧಾನಿ ಮನೆಯಲ್ಲಿ ಕೂತ ಜನರು; ರಾಜೀನಾಮೆ ನೀಡುವವರೆಗೂ ಕದಲರುಶ್ರೀಲಂಕಾ ಅಧ್ಯಕ್ಷ, ಪ್ರಧಾನಿ ಮನೆಯಲ್ಲಿ ಕೂತ ಜನರು; ರಾಜೀನಾಮೆ ನೀಡುವವರೆಗೂ ಕದಲರು

 ಪ್ರಧಾನಿ ಹುದ್ದೆಗೆ ರಾಜೀನಾಮೆ

ಪ್ರಧಾನಿ ಹುದ್ದೆಗೆ ರಾಜೀನಾಮೆ

ಶ್ರೀಲಂಕಾದ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ದನಾ ಅವರು ಸರ್ವಪಕ್ಷ ಸಭೆಯನ್ನು ನಡೆಸಿದರು. ನಂತರ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ತಮ್ಮ ಸಂಪುಟದ ಸಚಿವರನ್ನು ಭೇಟಿಯಾದರು. ಇದರ ಬೆನ್ನಲ್ಲೇ ರನಿಲ್ ವಿಕ್ರಮಸಿಂಘೆ ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಮಧ್ಯೆ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಬುಧವಾರ ಶ್ರೀಲಂಕಾದಿಂದ ಹಾರಿಹೋಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ತಿಳಿಸಿದೆ. ರಾಜಪಕ್ಸೆ ಸೋಮವಾರ ತಮ್ಮ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದು, ಇಂದು ಸಾರ್ವಜನಿಕ ಘೋಷಣೆ ಮಾಡಲು ಸಂಸತ್ತಿನ ಸ್ಪೀಕರ್‌ಗೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ.

 ಶ್ರೀಲಂಕಾದಿಂದ ಮಾಲ್ಡೀವ್ಸ್‌ಗೆ ಪಲಾಯನ

ಶ್ರೀಲಂಕಾದಿಂದ ಮಾಲ್ಡೀವ್ಸ್‌ಗೆ ಪಲಾಯನ

ಜುಲೈ 20ರಂದು ಸಂಸತ್ತಿನಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ತಾತ್ಕಾಲಿಕ ಅವಧಿಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಬುಧವಾರ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜುಲೈ 19ರಂದು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗಳನ್ನು ಕರೆಯಲಾಗುವುದು. ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ತಮ್ಮ ಪತ್ನಿ ಮತ್ತು ಅಂಗರಕ್ಷಕರೊಂದಿಗೆ ಆಂಟೊನೊವ್-32 ಮಿಲಿಟರಿ ವಿಮಾನದಲ್ಲಿ ದೇಶದಿಂದ ಮಾಲ್ಡೀವ್ಸ್‌ಗೆ ಹೊರಟರು. ಅವರು ವಿಮಾನದಲ್ಲಿ ನಾಲ್ವರು ಪ್ರಯಾಣಿಕರು ಇದ್ದಾರೆ ಎಂದು ವಲಸೆ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.

 ಗೋಟಬಯ ಅಧ್ಯಕ್ಷರ ಭವನದಿಂದ ಸ್ಥಳಾಂತರ

ಗೋಟಬಯ ಅಧ್ಯಕ್ಷರ ಭವನದಿಂದ ಸ್ಥಳಾಂತರ

ಜುಲೈ 9 ರಂದು ಪ್ರತಿಭಟನಾಕಾರರ ಸಮೂಹವು ಅಧ್ಯಕ್ಷರ ನಿವಾಸಕ್ಕೆ ನುಗ್ಗುವ ಕೆಲವೇ ಕ್ಷಣಗಳ ಮೊದಲು, ರಾಜಪಕ್ಸೆ ಅವರನ್ನು ಭದ್ರತಾ ಪಡೆಗಳು ಫೋರ್ಟ್‌ನಲ್ಲಿರುವ ಅಧ್ಯಕ್ಷರ ಭವನದಿಂದ ಸ್ಥಳಾಂತರಿಸಲಾಯಿತು. ಭದ್ರತಾ ಕಾರಣಗಳಿಗಾಗಿ ದೇಶದ ಪ್ರಾದೇಶಿಕ ನೀರಿನೊಳಗೆ ನೌಕಾಪಡೆಯ ಹಡಗಿನಲ್ಲಿ ರಕ್ಷಿಸಲಾಯಿತು. ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ತಮ್ಮ ಸ್ಥಾನದಿಂದ ಕೆಳಗಿಳಿದರು. ಸರ್ಕಾರದ ಮುಂದುವರಿಕೆ ಮತ್ತು ಎಲ್ಲಾ ನಾಗರಿಕರ ಸುರಕ್ಷತೆಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

 ಅಭಿವೃದ್ಧಿಗೆ ತಡೆ, ಹಿಮ್ಮುಖ ಚಲನೆ

ಅಭಿವೃದ್ಧಿಗೆ ತಡೆ, ಹಿಮ್ಮುಖ ಚಲನೆ

1948 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಕೋವಿಡ್‌ 19ರ ಸತತ ಅಲೆಗಳ ನಡುವೆ ಬಾಧಿಸಲ್ಪಟ್ಟಿದೆ. ಇಷ್ಟು ವರ್ಷಗಳ ಅಭಿವೃದ್ಧಿಯನ್ನು ತಡೆಗಟ್ಟಿ ಹಿಮ್ಮುಖ ಚಲನೆಯನ್ನು ತಡೆದಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ದೇಶದ ಸಾಮರ್ಥ್ಯವನ್ನು ತೀವ್ರವಾಗಿ ದುರ್ಬಲಗೊಳಿಸಿದೆ.

Recommended Video

Gujarat ನಲ್ಲಿ ಹಿಂದೆಂದೂ ಕೇಳರಿಯದ Cricket Scam | *Cricket | OneIndia Kannada

English summary
In the wake of ongoing protests in Sri Lanka demanding his resignation from the presidency, President Gotabaya Rajapakse has put conditions on his resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X