ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಬಿಕ್ಕಟ್ಟಿಗೆ ನಮ್ಮ ತಪ್ಪುಗಳೇ ಕಾರಣ: ದಿವಾಳಿಯಾದ ಮೇಲೆ ಒಪ್ಪಿಕೊಂಡ ಶ್ರೀಲಂಕಾ ಅಧ್ಯಕ್ಷ

|
Google Oneindia Kannada News

ಕೊಲಂಬೊ, ಏಪ್ರಿಲ್ 19: ದಶಕಗಳಲ್ಲಿ ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪುಗಳನ್ನು ಶ್ರೀಲಂಕಾ ಅಧ್ಯಕ್ಷರು ಸೋಮವಾರ ಒಪ್ಪಿಕೊಂಡಿದ್ದಾರೆ ಮತ್ತು ಅವುಗಳನ್ನು ಸರಿಪಡಿಸಲು ವಾಗ್ದಾನ ಮಾಡಿದ್ದಾರೆ.

ದೇಶದ ಭೀಕರ ಆರ್ಥಿಕ ಸ್ಥಿತಿಯಿಂದ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಅಧ್ಯಕ್ಷರು ಮತ್ತು ಅವರ ಪ್ರಬಲ ಕುಟುಂಬ ಪ್ರಯತ್ನಿಸುತ್ತಿರುವಾಗ ಅಧ್ಯಕ್ಷ ಗೊಟಬಯ ರಾಜಪಕ್ಸೆ ಸೋಮವಾರ ನೇಮಿಸಿದ 17 ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಮಾತನಾಡುವಾಗ ಈ ತಪ್ಪನ್ನು ಒಪ್ಪಿಕೊಂಡರು.

Sri Lanka Crisis: ಶ್ರೀಲಂಕಾದಲ್ಲಿ ಕೆಜಿ ಅರಿಶಿಣಕ್ಕೆ 3853 ರೂ., ಬ್ರೆಡ್ 3,583 ರೂ!Sri Lanka Crisis: ಶ್ರೀಲಂಕಾದಲ್ಲಿ ಕೆಜಿ ಅರಿಶಿಣಕ್ಕೆ 3853 ರೂ., ಬ್ರೆಡ್ 3,583 ರೂ!

ಶ್ರೀಲಂಕಾ ದಿವಾಳಿಯ ಅಂಚಿನಲ್ಲಿದೆ, ಅದರ ಒಟ್ಟು ಯುಎಸ್‌ಡಿ 25 ಶತಕೋಟಿಯಲ್ಲಿ ಸುಮಾರು ಯುಎಸ್‌ಡಿ 7 ಬಿಲಿಯನ್ ಈ ವರ್ಷ ಮರುಪಾವತಿಗೆ ಬಾಕಿಯಿದೆ. ವಿದೇಶಿ ವಿನಿಮಯದ ತೀವ್ರ ಕೊರತೆ ಉಂಟಾಗಿದೆ. ಆಮದು ಮಾಡಿದ ವಸ್ತುಗಳನ್ನು ಖರೀದಿಸಲು ದೇಶಕ್ಕೆ ಹಣದ ಕೊರತೆ ಇದೆ.

Sri Lanka Crisis: Sri Lankan President admits mistakes led to economic crisis

ಜನರು ಆಹಾರ, ಅಡುಗೆ ಅನಿಲ, ಇಂಧನ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಕೊರತೆಯನ್ನು ತಿಂಗಳುಗಟ್ಟಲೆ ಸಹಿಸಿಕೊಂಡಿದ್ದಾರೆ. ಲಭ್ಯವಿರುವ ಅತ್ಯಂತ ಸೀಮಿತ ದಾಸ್ತಾನುಗಳನ್ನು ಖರೀದಿಸಲು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದಾರೆ.

Sri Lanka Crisis : ಶ್ರೀಲಂಕಾ ಬಿಕ್ಕಟ್ಟಿನಿಂದ ಕೋವಿಡ್‌ಗಿಂತ ಅಧಿಕ ಸಾವು: ವೈದ್ಯರ ಎಚ್ಚರಿಕೆsSri Lanka Crisis : ಶ್ರೀಲಂಕಾ ಬಿಕ್ಕಟ್ಟಿನಿಂದ ಕೋವಿಡ್‌ಗಿಂತ ಅಧಿಕ ಸಾವು: ವೈದ್ಯರ ಎಚ್ಚರಿಕೆs

ತಪ್ಪೊಪ್ಪಿಕೊಂಡ ಅಧ್ಯಕ್ಷ ಗೊಟಬಯ ರಾಜಪಕ್ಸೆ

"ಕಳೆದ ಎರಡೂವರೆ ವರ್ಷಗಳಲ್ಲಿ ನಾವು ದೊಡ್ಡ ಸವಾಲುಗಳನ್ನು ಎದುರಿಸಿದ್ದೇವೆ. ಕೊರೊನಾ ವೈರಸ್ ಸಾಂಕ್ರಾಮಿಕದ ಜೊತೆಗೆ ಸಾಲದ ಹೊರೆ ಇದೆ. ನಮ್ಮ ಕಡೆಯಿಂದ ಕೆಲವು ತಪ್ಪುಗಳು ಆಗಿದೆ," ಎಂದು ಅಧ್ಯಕ್ಷ ಗೊಟಬಯ ರಾಜಪಕ್ಸೆ ತಿಳಿಸಿದರು.

"ನಮ್ಮ ತಪ್ಪುಗಳನ್ನು ಸರಿಪಡಿಸಬೇಕು. ತಪ್ಪನ್ನು ತಿದ್ದಿಕೊಂಡು ಮುನ್ನಡೆಯಬೇಕು. ಜನರ ವಿಶ್ವಾಸವನ್ನು ಮರಳಿ ಗಳಿಸಬೇಕು. ಮುಂಬರುವ ಸಾಲದ ಬಿಕ್ಕಟ್ಟನ್ನು ಎದುರಿಸಲು ಸಹಾಯಕ್ಕಾಗಿ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯನ್ನು ಮೊದಲೇ ಸಂಪರ್ಕಿಸಬೇಕಿತ್ತು. ಶ್ರೀಲಂಕಾದ ಕೃಷಿಯನ್ನು ಸಂಪೂರ್ಣವಾಗಿ ಸಾವಯವ ಮಾಡುವ ಪ್ರಯತ್ನದಲ್ಲಿ ರಾಸಾಯನಿಕ ಗೊಬ್ಬರವನ್ನು ನಿಷೇಧಿಸಬಾರದು," ಎಂದು ಹೇಳಿದರು.

Sri Lanka Crisis: Sri Lankan President admits mistakes led to economic crisis

ರಸಗೊಬ್ಬರ ಆಮದು ನಿಷೇಧವೇಕೆ?

ಆಮದು ಮಾಡಿಕೊಳ್ಳುವ ರಸಗೊಬ್ಬರದ ಮೇಲಿನ ನಿಷೇಧವು ದೇಶದ ಕುಸಿಯುತ್ತಿರುವ ವಿದೇಶಿ ವಿನಿಮಯ ಸಂಗ್ರಹವನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಇದು ರೈತರಿಗೆ ಕೆಟ್ಟದಾಗಿ ಹಾನಿಯನ್ನುಂಟು ಮಾಡುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ.

ಯಾವುದೇ ಹಣ ಲಾಭವನ್ನು ನೀಡದ ಮೂಲಸೌಕರ್ಯ ಯೋಜನೆಗಳಿಗೆ ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಂಡಿದ್ದಕ್ಕಾಗಿ ಸರ್ಕಾರವನ್ನು ದೂಷಿಸಲಾಗುತ್ತಿದೆ. "ಇಂದು, ಈ ಆರ್ಥಿಕ ಬಿಕ್ಕಟ್ಟಿನಿಂದ ಜನರು ಅಪಾರ ಒತ್ತಡಕ್ಕೆ ಒಳಗಾಗಿದ್ದಾರೆ. ಈ ಪರಿಸ್ಥಿತಿಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ," ಎಂದು ರಾಜಪಕ್ಸೆ ಪುನರುಚ್ಛರಿಸಿದ್ದಾರೆ. ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳನ್ನು ಪಡೆಯಲು ಜನರು ಸಾಲಿನಲ್ಲಿ ಕಾಯಬೇಕಾದ ಸಂದರ್ಭದಲ್ಲಿ ಜನರ ಈ ನೋವು, ಆಕ್ರೋಶ ಸಾಮಾನ್ಯವಾಗಿದೆ ಎಂದು ಕೂಡಾ ಹೇಳಿದ್ದಾರೆ.

Recommended Video

ಫುಲ್ ಜೋಶ್‌ನಲ್ಲಿ KGF 2 ನೋಡಿದ RCB ಪ್ಲೇಯರ್ಸ್ ಏನ್‌ ಹೇಳ್ಬೋದು?ಗೆಸ್ ಮಾಡಿ | Oneindia Kannada

English summary
Sri Lanka Crisis: Sri Lankan President admits mistakes led to economic crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X