ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಬಿಕ್ಕಟ್ಟು: ಸರ್ಕಾರಿ ವಿರೋಧಿ ರ್‍ಯಾಲಿಗೂ ಮುನ್ನ ಕರ್ಫ್ಯೂ

|
Google Oneindia Kannada News

ಕೊಲಂಬೊ ಜುಲೈ 9: ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಯೋಜಿತ ರ್‍ಯಾಲಿಗೂ ಮುಂಚಿತವಾಗಿ ಮಿಲಿಟರಿ ಅಲರ್ಟ್ ಘೋಷಿಸಿದ್ದು ಶ್ರೀಲಂಕಾದ ರಾಜಧಾನಿಯಾದ್ಯಂತ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಗಿದೆ.

ಕೊಲಂಬೊ ಮತ್ತು ಅದರ ಉಪನಗರಗಳು ಮುಂದಿನ ಸೂಚನೆ ಬರುವವರೆಗೆ ಕರ್ಫ್ಯೂ ಅಡಿಯಲ್ಲಿ ಇರುತ್ತವೆ. ಹೀಗಾಗಿ ನಿವಾಸಿಗಳು ಮನೆಯೊಳಗೆ ಇರುವಂತೆ ಪೊಲೀಸ್ ಮುಖ್ಯಸ್ಥ ಚಂದನಾ ವಿಕ್ರಮರತ್ನೆ ತಿಳಿಸಿದ್ದಾರೆ. ದೇಶದ ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ರಾಜಪಕ್ಸೆ ಅವರನ್ನು ತೊರೆಯುವಂತೆ ಒತ್ತಡ ಹೇರಲು ಶನಿವಾರದ ರ್ಯಾಲಿಗೂ ಮುಂಚಿತವಾಗಿ ಸಾವಿರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಶುಕ್ರವಾರ ರಾಜಧಾನಿಗೆ ಸೇರಿದಿದ್ದರಿಂದ ಈ ಆದೇಶ ಬಂದಿದೆ.

ದ್ವೀಪ ರಾಷ್ಟ್ರ ಆರ್ಥಿಕ ಸಂಕಷ್ಟದಲ್ಲಿದ್ದು ಅಗತ್ಯ ವಸ್ತುಗಳ ಕೊರತೆಯಿಂದ ಬಳಲುತ್ತಿದೆ. 22 ಮಿಲಿಯನ್ ಜನರು ವರ್ಷದ ಆರಂಭದಿಂದಲೂ ಹಣದುಬ್ಬರವನ್ನು ಸಹಿಸಿಕೊಂಡಿದ್ದಾರೆ. ಆರ್ಥಿಕ ದುರುಪಯೋಗಕ್ಕಾಗಿ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಲು ಪ್ರತಿಭಟನಾಕಾರರು ತಿಂಗಳಿನಿಂದ ರಾಜಪಕ್ಸೆ ಅವರ ಕೊಲಂಬೊ ಕಚೇರಿಯ ಹೊರಗೆ ಬೀಡುಬಿಟ್ಟಿದ್ದಾರೆ.

ಭದ್ರತೆ ಪಡೆ ಹೆಚ್ಚಳ

ಭದ್ರತೆ ಪಡೆ ಹೆಚ್ಚಳ

ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಶನಿವಾರ ಪ್ರತಿಭಟನೆ ತೀವ್ರಗೊಳಿಸುವ ಪ್ರತಿಜ್ಞೆ ಮಾಡಿದ್ದಾರೆ. ಹೀಗಾಗಿ ಇಂದು ರಾಜಪಕ್ಸೆ ಅವರ ಅಧಿಕೃತ ನಿವಾಸವನ್ನು ಕಾವಲು ಕಾಯುತ್ತಿರುವ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆಕ್ರಮಣಕಾರಿ ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತ ಸಾವಿರಾರು ಸೈನಿಕರು ಕೊಲಂಬೊಕ್ಕೆ ಮುಂಜಾನೆ ಬಸ್‌ಗಳನ್ನು ಕಳುಹಿಸಲಾಗಿದೆ.

ಸುಮಾರು 20,000 ಸೈನಿಕರು ಮತ್ತು ಪೊಲೀಸರು ಹಾಗೂ ಮಹಿಳೆಯರನ್ನು ಒಳಗೊಂಡ ಸ್ಥಳದಲ್ಲಿ ಅಲರ್ಟ್ ಘೋಷಿಸಲಾಗಿದೆ. ಅದಾಗಿಯೂ ಇಂದು ಪ್ರತಿಭಟನೆ ಹಿಂಸಾತ್ಮಕವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಸ್ಥಳೀಯ ಉನ್ನತ ರಕ್ಷಣಾ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಿಂಸಾಚಾರ ತಡೆಯಲು ಸೂಚನೆ

ಹಿಂಸಾಚಾರ ತಡೆಯಲು ಸೂಚನೆ

ಶನಿವಾರದ ಪ್ರದರ್ಶನಗಳು ಶಾಂತಿಯುತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ವಿಶ್ವಸಂಸ್ಥೆಯು ಶ್ರೀಲಂಕಾದ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರನ್ನು ಒತ್ತಾಯಿಸಿದೆ. ಜೊತೆಗೆ ಅಸೆಂಬ್ಲಿಗಳ ಪೋಲೀಸಿಂಗ್‌ನಲ್ಲಿ ಸಂಯಮವನ್ನು ತೋರಿಸಲು ಮತ್ತು ಹಿಂಸಾಚಾರವನ್ನು ತಡೆಯಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಖಚಿತಪಡಿಸಿಕೊಳ್ಳಲು ನಾವು ಶ್ರೀಲಂಕಾದ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ಯುಎನ್ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ ಹೇಳಿದೆ.

ಮಹಿಂದ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ

ಮಹಿಂದ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವು ತಿಂಗಳಿನಿಂದ ಸರಣಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮೇ ತಿಂಗಳಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿತ್ತು. ಘಟನೆಯಲ್ಲಿ ಆಡಳಿತಾರೂಢ ಪಕ್ಷದ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಡಳಿತಾರೂಢ ಪಕ್ಷದ ಹಲವು ನಾಯಕರ ಮನೆ, ಕಚೇರಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ದೇಶಾದ್ಯಂತ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ದೇಶಾದ್ಯಂತ ಜಾರಿಯಲ್ಲಿರುವ ತುರ್ತುಪರಿಸ್ಥಿತಿ ಜೊತೆಗೆ ಕರ್ಫ್ಯೂ ಹೇರಲಾಗಿತ್ತು. ಇದೆಲ್ಲದರ ನಡುವೆಯೇ ದೇಶದ ಹಾಲಿ ಪರಿಸ್ಥಿತಿಗೆ ಕಾರಣಕರ್ತ ಎಂಬ ಟೀಕೆಗೆ ಗುರಿಯಾಗಿದ್ದ ಪ್ರಧಾನಿ ಮಹಿಂದ ರಾಜಪಕ್ಸೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

50ಕ್ಕೂ ಹೆಚ್ಚು ಜನರು ಗಾಯ

50ಕ್ಕೂ ಹೆಚ್ಚು ಜನರು ಗಾಯ

ಆರ್ಥಿಕ ಪರಿಸ್ಥಿತಿಯಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಮೇ ತಿಂಗಳಲ್ಲಿ ಕೊಲಂಬೋ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾರ್ವಜನಿಕರು ಶಾಂತಿಯುತ ಪ್ರತಿಭಟನೆ ತೀವ್ರಗೊಂಡಿತ್ತು. ಈ ವೇಳೆ ಪ್ರಧಾನಿ ಮಹಿಂದಾ ಅವರ ಬೆಂಬಲಿಗರ ಗುಂಪು ಕೊಲಂಬೋದಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಸುದ್ದಿ ಕೆಲವೇ ಹೊತ್ತಿನಲ್ಲಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ ಪರಿಣಾಮ ಎಲ್ಲೆಡೆ ಹಿಂಸಾಚಾರ ಭುಗಿಲೆದ್ದಿತು.

English summary
Sri Lanka crisis: An indefinite curfew has been imposed across the Sri Lankan capital since Friday, after the military alert was announced ahead of a planned rally demanding the ouster of Sri Lankan President Gotabaya Rajapaksa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X