ತಾನು ಜಗಳವಾಡೋದಲ್ಲದೇ, ಜೇಡ ಜಗಳ ನೋಡಿ ಖುಷಿ ಪಡೋ ಮಾನವ, ಅದಕ್ಕೊಂದಿದೆ ಕ್ಲಬ್

Spider Fight Club : ಕೋಳಿ ಅಂಕ, ಗೂಳಿ ಕಾಳಗ ಇವೆಲ್ಲಾ ಕಾಮನ್. ಬಹುತೇಕ ಮಂದಿಗೆ ಇದರ ಬಗ್ಗೆ ಗೊತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಜಾತ್ರೆಗಳ ಸಂದರ್ಭಗಳಲ್ಲಿ ಕೋಳಿ ಅಂಕ ನಡೆಯುತ್ತದೆ. ಇಲ್ಲಿ ಯಾರ ಕೊಳಿ ಗೆಲ್ಲುವುದೋ ಅವರು ಬಾಜಿ ಗೆಲ್ಲುತ್ತಾರೆ. ಎದುರಿನವನ ಕೋಳಿಯೂ ಅವರದ್ದಾಗುತ್ತದೆ. ಇನ್ನು ಗೂಳಿ ಕಾಳಗ ಮನುಷ್ಯ ಮತ್ತು ಗೂಳಿಯ ನಡುವೆ ಸ್ಫರ್ಧೆ. ಇದು ಬಹಳ ರೋಮಾಂಚನಕಾರಿ ಮತ್ತು ಅಪಾಯಕಾರಿ ಕೂಡಾ. ಆದರೆ ಜೇಡರ ಕಾಳಗ ಅದೆಷ್ಟು ಜನರಿಗೆ ಗೊತ್ತು?

Spider Fight Club In Philippines Spider Fight Club With Betting Amazing Video Went Viral On Social Media

Spider Fight Club: ವಿಶೇಷವೇನು?

ಇತ್ತೀಚೆಗಷ್ಟೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಇದು ಜೇಡಗಳ ಕಾಳಗದ ವಿಡಿಯೋ. ಜೇಡಗಳ ಕಾಳಗ ಅಂದರೆ ಸುಮ್ಮನೆ ಯಾವುದೋ ಎರಡು ಜೇಡ ಜಗಳಕ್ಕೆ ನಿಂತಿರುವುದಲ್ಲ. ಈ ವಿಡಿಯೋ ಫೀಲಿಫೈನ್ಸಿನದ್ದು. ಸ್ಪೈಡರ್ ಫೈಟ್ ಕ್ಲಬ್ ಇಲ್ಲಿದೆ. ಈ ಕ್ಲಬ್ಬಿನಲ್ಲಿ ಎರಡು ಜೇಡವನ್ನು ಫೈಟಿಂಗ್ ಮಾಡುವುದಕ್ಕೆ ರಿಂಗಿನಲ್ಲಿ ಬಿಡಲಾಗುತ್ತದೆ. ಒಬ್ಬರನ್ನೊಬ್ಬರು ಹೊಡೆದು ಮಲಗಿಸುವುದೇ ಈ ಜೇಡಗಳ ಉದ್ದೇಶ. ಈ ಜೇಡ ಜಗಳ ನೋಡುವುದಕ್ಕೆ ಸುತ್ತಲೂ ಸಾವಿರಾರು ಜನ ಸೇರುತ್ತಾರೆ. ಎಲ್ಲರೂ ಒಲಿಂಪಿಕ್ ಫೈನಲ್ ಮ್ಯಾಚ್ ನೋಡುವ ಹಾಗೆ ಭಾರೀ ಕುತೂಹಲದಿಂದ ಮ್ಯಾಚ್ ನೋಡ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡ್ತಾ ಇದೆ.

ಈ ವಿಡಿಯೋದ ಸ್ಟಾಟಿಂಗ್ ಪಾಯಿಂಟೇ ಬಹಳ ರೋಮಾಂಚನಕಾರಿಯಾಗಿದೆ. ತೆಳುವಾದ ಬಿದಿರಿನ ಕೋಲಿನ ಮೇಲೆ ಎರಡು ಜೇಡಗಳನ್ನು ಮುಖಾಮುಖಿಯಾಗಿ ಬಿಟ್ಟಿದ್ದಾರೆ. ಎರಡು ಜೇಡಗಳು ಹತ್ತಿರ ಬಂದ ತಕ್ಷಣ, ಹೊಡೆದಾಟಕ್ಕೆ ಇಳಿದು ಬಿಡುತ್ತವೆ. ಈ ಜೇಡಗಳ ಫೈಟಿಂಗ್ (fight) ನೋಡುವಾಗ ಇವುಗಳಿಗೂ ಯಾರಾದರೂ ಟ್ರೈನಿಂಗ್ ಕೊಟ್ಟಿದ್ದಾರೆಯೋ ಏನೋ ಅನ್ನಿಸುತ್ತದೆ. ಫೈಟ್ ಮಾಡ್ತಾ ಮಾಡ್ತಾ ಕೋಲಿನಿಂದ ಜಾರಿ ನೆಲಕ್ಕೆ ಎರಡೂ ಜೇಡ ಬೀಳುತ್ತದೆ. ಅಲ್ಲಿಯೂ ಅವುಗಳ ಹೊಡೆದಾಟ ಮಾತ್ರ ನಿಲ್ಲುವುದಿಲ್ಲ. ಸುತ್ತಲೂ ನಿಂತಿರುವ ಜನ ಕಣ್ಣು ಮಿಟುಕಿಸದೆ ಮ್ಯಾಚ್ ನೋಡಿ ಆನಂದಿಸುತ್ತಿರುವುದನ್ನು ಕಾಣಬಹುದು.ಕೆಲವರು ತಮ್ಮ ಕೈಗಳಿಂದ ಸನ್ನೆ ಮಾಡುತ್ತಿದ್ದರೆ, ಇನ್ನು ಕೆಲವರು ಈ ಜೇಡಗಳ ರೆಸ್ಲಿಂಗಿಗೂ ಚಿಯರ್ಸ್ ಮಾಡುತ್ತಿದ್ದಾರೆ.

ಅಸಲಿಗೆ ಈ ಆಟ ಫಿಲಿಪೈನ್ಸಿನ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಸೆಬು ಪ್ರದೇಶದಿಂದ ಬಂದಿರುವಂಥದ್ದು. ಇಲ್ಲಿಯವರ ಭಾಷೆಯಲ್ಲಿ ಇದನ್ನು ಪಾಸಬೊಂಗ್ ಓಗ್ ದಮಾಂಗ್ ಅಥವಾ ಸಬೊಂಗ್ ಸಾ ಕಾಕಾ ಎಂದು ಕರೆಯಲಾಗುತ್ತದೆ.

ಜೇಡ ರೆಸ್ಲಿಂಗ್ :

ಇವರಿಗೆ ಈ ಆಟ ಹೊಸದೇನಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ (history). ಈ ಆಟವು ಮಕ್ಕಳು ಮತ್ತು ಗ್ರಾಮಸ್ಥರಿಗೆ ಟೈಂ ಪಾಸ್ ಮಾಡುವ ಒಂದು ಮಾರ್ಗ. ಆದರೆ ಕಾಲ ಬದಲಾದಂತೆ, ಈ ಸಿಂಪಲ್ ಟೈ ಪಾಸ್ ಗೇಮ್ ಬೆಟ್ಟಿಂಗ್ ರೂಪ ಪಡೆಯುತ್ತದೆ. ಫಿಲಿಪೈನ್ಸ್ ಕಾನೂನಿನಲ್ಲಿ, ಈ ಆಟದ ಬಗ್ಗೆ ಬಹಳ ಆಸಕ್ತಿದಾಯಕ ಮತ್ತು ಕಟ್ಟುನಿಟ್ಟಾದ ನಿಯಮವಿದೆ. ಜನ ವಿನೋದ ಅಥವಾ ಹವ್ಯಾಸಕ್ಕಾಗಿ ಜೇಡ ಫೈಟಿಂಗ್ ನಡೆಸಿದರೆ ಕಾನೂನು ಅವರನ್ನು ತಡೆಯುವುದಿಲ್ಲ. ಆದರೆ, ಹಣ ಅಥವಾ ಬೆಲೆಬಾಳುವ ವಸ್ತುಗಳ ಮೇಲೆ ಬೆಟ್ಟಿಂಗ್ ಕಟ್ಟಿ ಈ ಮ್ಯಾಚ್ ಶುರು ಮಾಡಿದರೆ ಅಕ್ರಮ ಜೂಜು ಎಂದು ಪರಿಗಣಿಸಿ ಜೈಲಿಗೆ ಹಾಕಲಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋ :

ಸದ್ಯಕ್ಕೆ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಡಾಮಿಡ್ಜೆಟ್ ಜಿಂಬೊ ಎಂಬ ಅಕೌಂಟಿನಿಂದ ಎಕ್ಸ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇದುವರೆಗೂ ಸಾವಿರಾರು ಜನರು ನೋಡಿದ್ದಾರೆ. ಮಾತ್ರವಲ್ಲ ಈ ವಿಡಿಯೋ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. ನಾನು ಪ್ರಪಂಚದ ಎಲ್ಲವನ್ನೂ ನೋಡಿದ್ದೇನೆ ಎಂದು ಇಲ್ಲಿಯವೆಗೂ ಅಂದುಕೊಂಡಿದ್ದೆ. ಆದರೆ ಈ ಸ್ಪೈಡರ್ ಫೈಟ್ ಕ್ಲಬ್ ವಿಶೇಷವಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಐಪಿಎಲ್ ಫ್ಯಾಂಟಸಿ ಟೀಂನ್ನು ಬಿಟ್ಟು ಬಿಟ್ಟು ಬಿಡಿ ನನ್ನ ಅದೃಷ್ಟ ಈಗ ಈ ಕಪ್ಪು ಜೇಡದ ಮೇಲೆ ನಿಂತಿದೆ ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+