Russia & Ukraine: ಉಕ್ರೇನ್ ಕೈಯಲ್ಲಿ ಲಾಕ್ ಆದ ಉತ್ತರ ಕೊರಿಯಾ ಸೈನಿಕರು!
ರಷ್ಯಾ ಪರವಾಗಿ ಹೋರಾಟಕ್ಕೆ ಹೋಗಿರುವ ಉತ್ತರ ಕೊರಿಯಾ ಸೈನಿಕರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಒಂದು ಕಡೆ ರಷ್ಯಾ ದೇಶದ ಚಳಿ ತಡೆಯಲು ಆಗದೆ ಒದ್ದಾಟ, ಇನ್ನೊಂದು ಕಡೆ ಉಕ್ರೇನ್ ಸೇನೆಯ ಏಟು ತಡೆಯಲು ಆಗದೆ ಪರದಾಟ. ಹೀಗೆ ಉತ್ತರ ಕೊರಿಯಾದಿಂದ ರಷ್ಯಾ ಪರವಾಗಿ ಹೋರಾಡಲು ಹೋಗಿದ್ದ ಸಾವಿರಾರು ಸೈನಿಕರು ನರಳುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಸುದ್ದಿ ಇದೀಗ ಹೊರ ಬಿದ್ದಿದೆ.
ರಷ್ಯಾ ಬಳಿ ಸೈನಿಕರ ಕೊರತೆ ಎದುರಾಗಿದ್ದು, 2022 ರಲ್ಲಿ ಶುರುವಾಗಿದ್ದ ಯುದ್ಧ ಈಗಾಗಲೇ 3 ವರ್ಷ ಮುಗಿಸುವ ಹಂತಕ್ಕೆ ಬಂದು ತಲುಪಿದೆ. ಮುಂದಿನ ತಿಂಗಳಿಗೆ ರಷ್ಯಾ & ಉಕ್ರೇನ್‌ನ ನಡುವಿನ ಈ ಯುದ್ಧ ಶುರುವಾಗಿ 3 ವರ್ಷ ಕಂಪ್ಲೀಟ್ ಆಗಲಿದೆ. ಈ ಸಮಯದಲ್ಲೇ ಉಕ್ರೇನ್ ಸೇನೆ ಮುಂದೆ ನುಗ್ಗಿ ರಷ್ಯಾ ಒಳಗೆ ಘೋರ ಕಾರ್ಯಾಚರಣೆ ನಡೆಸಲು ಪ್ರಯತ್ನ ಮಾಡುತ್ತಿದೆ. ಆದರೆ ರಷ್ಯಾ ಮಿಲಿಟರಿ ಕೊಡುತ್ತಿರುವ ಏಟಿಗೆ ಉಕ್ರೇನ್ ಕಕ್ಕಾಬಿಕ್ಕಿ ಆಗಿದೆ. ಇಂತಹ ವೇಳೆ, ಬಡಪಾಯಿ ಉತ್ತರ ಕೊರಿಯಾ ಸೈನಿಕರು ಉಕ್ರೇನ್ ಕೈಯಲ್ಲಿ ಲಾಕ್ ಆಗಿದ್ದಾರಂತೆ!

ಕಿಮ್ ಗ್ಯಾಂಗ್ ಉಕ್ರೇನ್ ಕೈಯಲ್ಲಿ ಲಾಕ್?
ರಷ್ಯಾ ಪರವಾಗಿ ನಿಂತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸ್ನೇಹದ ನೆನಪಿಗೆ ಅಂತಾ ಹತ್ತಾರು ಸಾವಿರ ಸೈನಿಕರನ್ನು ರಷ್ಯಾ ಪರ ಹೋರಾಡಲು ಕಳುಹಿಸಿದ್ದಾನೆ. ಆದರೆ ಈ ರೀತಿ ರಷ್ಯಾ ಪರವಾಗಿ ಹೋರಾಡಲು ಹೋಗಿರುವ ಉತ್ತರ ಕೊರಿಯಾ ಸೈನಿಕರಿಗೆ ಸರಿಯಾದ ಟ್ರೈನಿಂಗ್ ಇಲ್ಲದ ಕಾರಣ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿವೆ.
ಇದೆಲ್ಲದರ ಪರಿಣಾಮವಾಗಿ ಪದೇ ಪದೇ ಉತ್ತರ ಕೊರಿಯಾ ಸೈನಿಕರು ಹೆಣವಾಗಿ ಸಿಗುತ್ತಿದ್ದಾರೆ ಅಥವಾ ಇದೇ ಉತ್ತರ ಕೊರಿಯಾ ಸೈನಿಕರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ ಕೂಡ ಅದೇ ರೀತಿ, ಉತ್ತರ ಕೊರಿಯಾ ಸೈನಿಕರನ್ನು ಲಾಕ್ ಮಾಡಿರುವುದಾಗಿ ದಕ್ಷಿಣ ಕೊರಿಯಾದ ಮಿಲಿಟರಿ ಮಾಹಿತಿ ನೀಡಿದೆ. ಈ ಮೂಲಕ ರಷ್ಯಾ ನೆಲದಲ್ಲಿ ಉತ್ತರ ಕೊರಿಯಾ ಸೈನಿಕರಿಗೆ ಸಂಕಷ್ಟ ಮುಂದುವರಿದಿದೆ.
ವಿನಾಶಕಾರಿ ಅಸ್ತ್ರಗಳ ಬಳಕೆ ಗ್ಯಾರಂಟಿ?
ರಷ್ಯಾ ಮಿಲಿಟರಿ ಬಳಿ ಇರುವ ಅಸ್ತ್ರ ಒಂದೊಂದಲ್ಲ ರಷ್ಯಾ ತನ್ನಲ್ಲಿ ಇರುವ ಭಯಾನಕ ವೆಪನ್ಸ್ ಹೊರ ತೆಗೆದರೆ ಆಗುವುದೇ ಬೇರೆ. ಯಾಕಂದ್ರೆ ರಷ್ಯಾ ಬಳಿ ಆ ರೀತಿಯ ಅಸ್ತ್ರಗಳು ಕೊಳೆಯುತ್ತಿವೆ ಎಂಬ ಮಾತಿದೆ. ಹೀಗಿದ್ರೂ ಇಷ್ಟು ದಿನ ಸಾಮಾನ್ಯ ಅಸ್ತ್ರವನ್ನೇ ಬಳಸಿ ದಾಳಿ ಮಾಡ್ತಾ ಇರುವ ರಷ್ಯಾ ಸೇನೆ ಸಮಯಕ್ಕಾಗಿ ಕಾಯುತ್ತಿದೆ. ಹೀಗಾಗಿಯೇ ಉತ್ತರ ಕೊರಿಯಾ ಸೈನಿಕರ ಬಲವನ್ನು ಪಡೆದು ಮುಂದೆ ನುಗ್ಗುತ್ತಿದ್ದು, ಇದು ಉಲ್ಟಾ ಆಗುತ್ತಿದೆ ಎಂಬ ಆರೋಪ ಕೇಳಿ ಬರ್ತಿದೆ.












Click it and Unblock the Notifications