ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೂ ಒಂದು ಬಲಿಷ್ಠ ಕೊರೊನಾ ವೈರಸ್ ಪತ್ತೆ; ದಕ್ಷಿಣ ಆಫ್ರಿಕಾ ಮೂಲ?

|
Google Oneindia Kannada News

ದಕ್ಷಿಣ ಆಫ್ರಿಕಾ, ಡಿಸೆಂಬರ್ 23: ಬ್ರಿಟನ್ ನಲ್ಲಿ ಎರಡು ದಿನಗಳ ಹಿಂದಷ್ಟೇ ಹೊಸ ರೂಪಾಂತರದ ಕೊರೊನಾ ಸೋಂಕು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿರುವ ಬೆನ್ನಲ್ಲೇ ಆ ವೈರಸ್ ಗಿಂತಲೂ ಬಲಿಷ್ಠವಾದ ಕೊರೊನಾ ವೈರಸ್ ಬುಧವಾರ ಪತ್ತೆಯಾಗಿದ್ದು, ಇದರ ಮೂಲ ದಕ್ಷಿಣ ಆಫ್ರಿಕಾ ಎನ್ನಲಾಗಿದೆ.

ದಕ್ಷಿಣ ಆಫ್ರಿಕಾದಿಂದ ಬ್ರಿಟನ್ ಗೆ ಬಂದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಬ್ರಿಟನ್ ಆರೋಗ್ಯ ಇಲಾಖೆ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಪತ್ತೆಯಾದ ಸೋಂಕಿಗಿಂತಲೂ ಈ 501Y.V2 ವೈರಸ್ ಬಲಿಷ್ಠ ಎನ್ನಲಾಗಿದೆ. ಮುಂದೆ ಓದಿ...

ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಕೊರೊನಾವೈರಸ್ ಪತ್ತೆ!ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಕೊರೊನಾವೈರಸ್ ಪತ್ತೆ!

 ದಕ್ಷಿಣ ಆಫ್ರಿಕಾಗೆ ಪಯಣಿಸಿದವರಲ್ಲಿ ಸೋಂಕು

ದಕ್ಷಿಣ ಆಫ್ರಿಕಾಗೆ ಪಯಣಿಸಿದವರಲ್ಲಿ ಸೋಂಕು

ಹೊಸದಾಗಿ ಪತ್ತೆಯಾಗಿರುವ ಈ ಬಲಿಷ್ಠ ಸೋಂಕಿನ ಮೂಲ ದಕ್ಷಿಣ ಆಫ್ರಿಕಾ ಎನ್ನಲಾಗಿದ್ದು, ಈ ಸೋಂಕು ಅತಿ ವೇಗಿ ಎಂದೂ ಹೇಳಲಾಗುತ್ತಿದೆ. ರೂಪಾಂತರ ವೈರಸ್ ಸಾಮಾನ್ಯ ವೈರಸ್ ಗಿಂತ ಶೇ.70ರಷ್ಟು ಹೆಚ್ಚು ವೇಗವಾಗಿ ಹರಡಬಲ್ಲದು ಎನ್ನಲಾಗಿತ್ತು. ಈಗ ಪತ್ತೆಯಾಗಿರುವ ಸೋಂಕು ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಹರಡುತ್ತದೆ ಎಂದು ದಕ್ಷಿಣ ಆಫ್ರಿಕಾ ವಿಜ್ಞಾನಿಗಳು ತಿಳಿಸಿದ್ದಾರೆ.

ಬ್ರಿಟನ್ ನಂತರ ದಕ್ಷಿಣ ಆಫ್ರಿಕಾ ಸರದಿ; ಐದು ದೇಶಗಳ ವಿಮಾನ ರದ್ದುಬ್ರಿಟನ್ ನಂತರ ದಕ್ಷಿಣ ಆಫ್ರಿಕಾ ಸರದಿ; ಐದು ದೇಶಗಳ ವಿಮಾನ ರದ್ದು

 ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ

ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ

ಈ ಸೋಂಕಿನ ರೂಪಾಂತರ ಯುವಜನತೆಯಲ್ಲೇ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕ ಮೂಡಿಸಿದೆ. ಯಾವುದೇ ಲಕ್ಷಣಗಳನ್ನು ನೀಡದೆಯೇ ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ.

 ಲಸಿಕೆಗೂ ಬೇಗ ಜಗ್ಗುವುದು ಅನುಮಾನ

ಲಸಿಕೆಗೂ ಬೇಗ ಜಗ್ಗುವುದು ಅನುಮಾನ

ಅತಿ ಬಲಿಷ್ಠವಾಗಿರುವ ಈ ಹೊಸ ರೂಪಾಂತರದ ಸೋಂಕು ಲಸಿಕೆಗೂ ಜಗ್ಗುವುದು ಅನುಮಾನ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹೊಸ ರೂಪಾಂತರ ವೈರಸ್ ಪರಿಣಾಮಗಳ ಕುರಿತು ತುರ್ತು ಅಧ್ಯಯನ ನಡೆಸಲಾಗುತ್ತಿದೆ. ಈ ಸೋಂಕಿಗೆ ಬೇರೆಯದೇ ರೀತಿ ಚಿಕಿತ್ಸೆಯ ಅಗತ್ಯವಿದೆಯೇ ಎಂಬ ಅಂಶವನ್ನು ಮೊದಲು ಕಂಡುಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

 ಗುಣಮುಖರಾದವರಿಗೂ ಮತ್ತೆ ಸೋಂಕು ತಗುಲುವ ಭೀತಿ

ಗುಣಮುಖರಾದವರಿಗೂ ಮತ್ತೆ ಸೋಂಕು ತಗುಲುವ ಭೀತಿ

ಈಚೆಗೆ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೂ ಮತ್ತೆ ಈ ರೂಪಾಂತರದ ಸೋಂಕು ತಗಲುವ ಆತಂಕ ಉಂಟಾಗಿದೆ. 501Y.V2 ಸೋಂಕಿನ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳಲು ದಕ್ಷಿಣ ಆಫ್ರಿಕಾ ವಿಜ್ಞಾನಿಗಳು ಪ್ರಯತ್ನ ಪಡುತ್ತಿದ್ದು, ಎರಡು ದಿನಗಳ ಹಿಂದೆ ಬ್ರಿಟನ್ ನಲ್ಲಿ ಪತ್ತೆಯಾದ ಸೋಂಕಿನೊಂದಿಗೆ ಈ ಸೋಂಕನ್ನೂ ತಾಳೆ ಹಾಕಲಾಗಿದೆ. ಬ್ರಿಟನ್ ನಲ್ಲಿ ಕಂಡುಬಂದ ಸೋಂಕಿಗಿಂತಲೂ ಹೆಚ್ಚಿನ ವೇಗವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ದಕ್ಷಿಣ ಆಫ್ರಿಕಾ ಸಂಶೋಧಕ ಡಾ. ರಿಚರ್ಡ್ ಲೆಸೆಲ್ಸ್ ತಿಳಿಸಿದ್ದಾರೆ.

 ದಕ್ಷಿಣ ಆಫ್ರಿಕಾದಿಂದ ಬಂದವರ ಮೇಲೆ ನಿಗಾ

ದಕ್ಷಿಣ ಆಫ್ರಿಕಾದಿಂದ ಬಂದವರ ಮೇಲೆ ನಿಗಾ

ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ್ದ ಇಬ್ಬರು ವ್ಯಕ್ತಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದರಿಂದ ಬ್ರಿಟನ್‌ ಪ್ರಯಾಣಿಕರು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಕಳೆದ 15 ದಿನಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಮಾಡಿದ ಬ್ರಿಟನ್ ಜನರ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಕ್ವಾರಂಟೈನ್ ಆಗಲು ತಿಳಿಸಿದೆ.

English summary
The South African variant of Covid-19, two cases of which have now been detected in the UK, is likely to be more transmissible said scientists,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X