Get Updates
Get notified of breaking news, exclusive insights, and must-see stories!

ದಕ್ಷಿಣ ಆಫ್ರಿಕಾ ರಾಷ್ಟ್ರಪತಿ ಪತ್ನಿಯ ಮೇಲೆ ಅತ್ಯಾಚಾರ

ಜೊಹಾನ್ಸ್ ಬರ್ಗ್, ಮೇ 6: ಅತ್ಯಾಚಾರ ಎಂಬ ಸಾಮಾಜಿಕ ಪಿಡುಗು ದೇಶವೊಂದರ ರಾಷ್ಟ್ರಪತಿಯ ಬೆಡ್ ರೂಮ್ ಅನ್ನೂ ಪ್ರವೇಶಿಸಿದೆ. ಹೌದು, ದಕ್ಷಿಣ ಆಫ್ರಿಕಾದ ಜಾಕೊಬ್ ಜುಮಾ ಅವರು ರಾಷ್ಟ್ರಪತಿ ಆಗುವುದಕ್ಕೂ ಮುನ್ನ 1998ರಲ್ಲಿ ಅವರ ಪತ್ನಿಯ ಮೇಲೆ ಅತ್ಯಾಚಾರ ನಡೆದಿತ್ತು. ಮತ್ತು ತದನಂತರ ಕೃಕೃತ್ಯವೆಸಗಿದವರನ್ನು ಬಂಧಿಸಿ, ಶಿಕ್ಷಿಸಲಾಯಿತು ಎಂದು ಸ್ವತಃ ಜಾಕೊಬ್ ಜುಮಾ ಅವರೇ ಹೇಳಿಕೊಂಡೊದ್ದಾರೆ.

ಏನಾಯಿತೆಂದರೆ ಜಾಕೊಬ್ ಜುಮಾ ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ ಆದ ಮೇಲೆ ಐಷಾರಾಮಿ ಜೀವನಕ್ಕೆ ಮಾರುಹೋಗಿದ್ದಾರೆ. ಹಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನವೀಕರಣಕ್ಕೆಂದು ಬರೋಬ್ಬರಿ 23 ದಶಲಕ್ಷ ಡಾಲರ್ ಹಣ ಸುರಿದಿದ್ದಾರೆ.

ಅಂದಹಾಗೆ ಮೇ7 ರಂದು ದಕ್ಷಿಣ ಆಫ್ರಿಕಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. 72 ವರ್ಷ ವಯಸ್ಸಿನ ಜಾಕೊಬ್ ಜುಮಾ ಮತ್ತೊಂದು ಬಾರಿಗೆ ರಾಷ್ಟ್ರಪತಿ ಆಗುವ ಆಸೆ ಹೊತ್ತಿದ್ದಾರೆ. ಈ ಮಧ್ಯೆ, ಬಡ ರಾಷ್ಟ್ರವೊಂದರ ರಾಷ್ಟ್ರಪತಿ ಈ ರೀತಿ ದುಂದುವೆಚ್ಚ ಮಾಡಿದ್ದು ಸರೀನಾ ಎಂದು ದೇಶವಾಸಿಗಳು ತಮ್ಮ ರಾಷ್ಟ್ರಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಯಾರಪ್ಪಾ ಈ ಮಹಾಶಯ, ಆತನ ಫೋಟೋ ಸ್ವಲ್ಪ ತೋರಿಸಿ ಎಂದು ಕೇಳುವವರಿಗಾಗಿ... ಕೆಳಗಿನ ಚಿತ್ರದಲ್ಲಿ ಮೈಕ್ ಹಿಡಿದುಕೊಂಡು ಫುಲ್ ಜೋಷ್ ನಲ್ಲಿರುವವರೇ ಜಾಕೊಬ್ ಜುಮಾ!)

south-african-president-jacob-zuma-says-his-wife-was-raped-by-a-gang

ಅದಕ್ಕೆ ಉತ್ತರವಾಗಿ 2009ರಿಂದ ಆಫ್ರಿಕಾದ ರಾಷ್ಟ್ರಪತಿಯಾಗಿರುವ ಜಾಕೊಬ್ ಜುಮಾ ಅವರು 'ನೀವು ಮಾಡಿದ್ದು ಸರೀನಾ? ನಾನಿನ್ನೂ ಆಗ ರಾಷ್ಟ್ರಪತಿ ಆಗಿರಲಿಲ್ಲ. ಆಗ ನನ್ನ ಮನೆಗೆ ನುಗ್ಗಿದ ಆಗುಂತಕರು ನನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದರು. ನನಗಿನ್ನೂ ಅಭದ್ರತೆ ಕಾಡುತ್ತಿದೆ. ಹಾಗಾಗಿ ನನ್ನ ಮನೆಯನ್ನು ನಾನು ಭದ್ರಪಡಿಸಿಕೊಂಡಿದ್ದೇನೆ. ಅದರಲ್ಲಿ ತಪ್ಪೇನು?' ಎಂದು ಜನರ ಬಾಯಿಮುಚ್ಚಿಸಲು ಯತ್ನಿಸಿದ್ದಾರೆ.

ಆದರೆ ರಾಷ್ಟ್ರಪತಿ ಜಾಕೊಬ್ ಜುಮಾ ಅವರು ತಮ್ಮ ನಾಲ್ವರು ಪತ್ನಿಯರ ಪೈಕಿ ಯಾರ ಮೇಲೆ ರೇಪ್ ಆಯಿತು? ಎಂಬುದನ್ನು ಬಹಿರಂಗಪಡಿಸಿಲ್ಲ. ಕಾನೂನಿನ ಪ್ರಕಾರ ಅತ್ಯಾಚಾರ ಬಾಧಿತರ ಹೆಸರನ್ನು ಬಹಿರಂಗಪಡಿಸಿವುದು ಔಚಿತ್ಯವೂ ಅಲ್ಲ.

ಅಂದಹಾಗೆ ರಾಷ್ಟ್ರಪತಿ ಜಾಕೊಬ್ ಜುಮಾ ಅವರ ಫಾರ್ಮ್ ಹೌಸ್ ನಲ್ಲಿ ಈಗ ಒಂದು ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್, ಖಾಸಗಿ ಕ್ಲಿನಿಕ್, ಆಂಫಿಥಿಯೇಟರ್ ಇದೆ. ಇದರಲ್ಲಿ ಅಂತಹ ವಿಶೇಷತೆಯೇನೂ ಇಲ್ಲ ಎಂದೂ ಜಾಕೊಬ್ ಜುಮಾ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಇದು ಅತಿಯಾಯ್ತು. ಜಾಕೊಬ್ ಜುಮಾ ದುಂದುವೆಚ್ಚ ಮಾಡಿರುವುದನ್ನೆಲ್ಲಾ ಖಜಾನೆಗೆ ವಾಪಸ್ ಮಾಡಬೇಕು ಎಂದು ಕಳೆದ ತಿಂಗಳು ಸರಕಾರಿ ವಕೀಲರು ತಮ್ಮ ರಾಷ್ಟ್ರಪತಿಗೆ ಸಲಹೆ ನೀಡಿದ್ದರು.

ಜಾಕೊಬ್ ಜುಮಾ ಅವರು ಆಗಿನ್ನೂ KwaZulu-Natal ಭಾಗದ ಪ್ರಾಂತೀಯ ಸಚಿವರಾಗಿದ್ದರು. ಆ ವೇಳೆ ದುಷ್ಕರ್ಮಿಗಳ ಗುಂಪೊಂದು ಮನೆಗೆ ನುಗ್ಗಿ ತಮ್ಮ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಸ್ವತಃ ಜಾಕೊಬ್ ಜುಮಾ ಹೇಳಿದ್ದಾರೆ. ಸಚಿವರಾಗಿದ್ದ ಜಾಕೊಬ್ ಜುಮಾ ಮುಂದೆ ಉಪ ರಾಷ್ಟ್ರಪತಿ ಆದರು. ಆಗ ರಾಷ್ಟ್ರಪತಿ ಆಗಿದ್ದವರು ಥಾಬೊ ಮೆಕಿ.

ಅಂದಹಾಗೆ ಥಾಬೊ ಮೆಕಿಗೆ ಮುನ್ನ ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ ಆಗಿದ್ದವರು ಶಾಂತಿದೂತ ನೆಲ್ಸನ್ ಮಂಡೇಲಾ ಅವರು. ಜಾಕೊಬ್ ಜುಮಾ, ಆಡಳಿತಾರೂಢ African National Congress ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+