Get Updates
Get notified of breaking news, exclusive insights, and must-see stories!

‘ಮಾಲ್ಡೀವ್ಸ್ ಮುಖ ಮುಚ್ಚಾ’ ಅಂತಿದ್ದಾರೆ ಮಂದಿ!

ಅನ್ನ ತಿಂದ ಮನೆಗೆ ಹೆಂಗೆ ದ್ರೋಹ ಮಾಡಬೇಕು? ಅನ್ನೋದನ್ನ ಈ ಮಾಲ್ಡೀವ್ಸ್ ನೋಡಿ ಕಲಿಯಬೇಕು ಕಣ್ರೀ. ಯಾಕಂದ್ರೆ ಕಷ್ಟದಲ್ಲಿ ಇದ್ದಾಗ, ಭಾರತದ ನೆರವನ್ನೇ ಪಡೆದಿದ್ದ ಈ ದೇಶ ಈಗ ಭಾರತದ ವಿರುದ್ಧವೇ ವಿಷ ಕಾರುತ್ತಿದೆ. ಇದರ ಪರಿಣಾಮ ಭಾರತ & ಮಾಲ್ಡೀವ್ಸ್ ಸಂಬಂಧ ಹಾಳಾಗಿ ಹಳಸಿ ಹೋಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜನ 'ಮಾಲ್ಡೀವ್ಸ್ ಮುಖ ಮುಚ್ಚಾ' ಅಂತಾ ಶಾಪ ಹಾಕುತ್ತಿದ್ದಾರೆ. ಹಂಗಾದ್ರೆ ಜನ ಶಾಪ ಹಾಕಿದ್ದು ಯಾಕೆ?

ಮಾಲ್ಡೀವ್ಸ್ ಭಾರತದ ವಿರೋಧ ಕಟ್ಟಿಕೊಂಡು, ಹಲವು ಸಮಸ್ಯೆ ಎದುರಿಸುತ್ತಿದೆ. ಇಷ್ಟಾದರೂ ದ್ವೀಪರಾಷ್ಟ್ರಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝ, ಮಾಲ್ದೀವ್ಸ್‌ ನೆಲದಿಂದ ಮಾರ್ಚ್‌ 15ರ ಒಳಗೆ, ಸೇನೆಯ ವಾಪಸ್ ಕರೆಸಿಕೊಳ್ಳಿ ಎಂದು ಭಾರತಕ್ಕೆ ಆಗ್ರಹ ಮಾಡಿದ್ದ. 3-4 ತಿಂಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ, ಮುಯಿಝು ಈ ಪ್ರಸ್ತಾಪವನ್ನ ಇಟ್ಟಿದ್ದರು. ಮತ್ತೊಂದು ಕಡೆ ಭಾರತ ಕೂಡ ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಮಾಲ್ಡೀವ್ಸ್ ನೆಲದಿಂದ ಭಾರತೀಯ ಸೇನೆ ವಾಪಸ್ ಆಗುತ್ತಿದೆ!

Some Reports Are Saying That India Is Begins To Withdraw The Military From Maldives

ಭಾರತದ ಎಷ್ಟು ಸೈನಿಕರು ಇದ್ದಾರೆ?

ಮಾಲ್ಡೀವ್ಸ್ ಜನ ಕೆಲ ತಿಂಗಳ ಹಿಂದೆ ಹೊಸ ಅಧ್ಯಕ್ಷನ ಆಯ್ಕೆ ಮಾಡಿದ್ದು, ನೂತನವಾಗಿ ಆಯ್ಕೆ ಆದ ಮಾಲ್ಡೀವ್ಸ್ ಅಧ್ಯಕ್ಷ ಭಾರತ ವಿರುದ್ಧ ವಿಷ ಕಾರುತ್ತಿದ್ದು ತಾನು ಅಧ್ಯಕ್ಷನಾಗಿ ಆಯ್ಕೆಯಾದ ಆರಂಭದಲ್ಲೇ, ಮಾಲ್ಡೀವ್ಸ್ ಪೂರ್ಣ ಸ್ವಾತಂತ್ರ್ಯ ಹೊಂದಲು ಉದ್ದೇಶಿಸಿದೆ ಎಂದಿದ್ದರು. ಹಾಗೇ ಭಾರತವನ್ನು ಪದೇ ಪದೇ ಟಾರ್ಗೆಟ್ ಮಾಡಿ, ಭಾರತದ ಸೇನೆಯನ್ನು ಮಾಲ್ಡೀವ್ಸ್ ನೆಲದಿಂದ ಸಂಪೂರ್ಣ ಹೊರಗೆ ಕರೆಸಿಕೊಳ್ಳಿ ಎಂದು ಆಗ್ರಹ ಮಾಡಿದ್ದ. ಹಾಗಾದರೆ ಎಷ್ಟು ಭಾರತದ ಸೈನಿಕರು ಮಾಲ್ಡೀವ್ಸ್‌ನಲ್ಲಿ ಈಗ ಇದ್ದಾರೆ ಗೊತ್ತೆ? ಮುಂದೆ ಓದಿ.

ಇಷ್ಟು ಜನ ಭಾರತೀಯ ಸೈನಿಕರು...

ಈಗ ಮಾಲ್ಡೀವ್ಸ್ ಸೊಕ್ಕನ್ನು ಮುರಿಯಲು ಭಾರತ ನಮ್ಮ ಸೈನಿಕರನ್ನು ವಾಪಸ್ ಭಾರತಕ್ಕೆ ಕರೆಸಿಕೊಳ್ಳುತ್ತಿದೆ. ಸುಮಾರು 70 ಭಾರತೀಯ ಸೈನಿಕರು ಸದ್ಯಕ್ಕೆ ಮಾಲ್ಡೀವ್ಸ್‌ನಲ್ಲಿ ಇದ್ದಾರೆ. ಇನ್ನು ಮಾಲ್ಡೀವ್ಸ್ ದಕ್ಷಿಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 20ಕ್ಕೂ ಹೆಚ್ಚು ಭಾರತೀಯ ಸೈನಿಕರನ್ನ ಈಗ ಭಾರತ ವಾಪಸ್ ಕರೆಸಿಕೊಳ್ಳಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮತ್ತೊಂದು ಕಡೆ ಮಾಲ್ಡೀವ್ಸ್ ಹಿಂಗೆ ಆಡುತ್ತಿರುವ ಕಾರಣ ಹಲವು ಸಮಸ್ಯೆ ಎದುರಿಸುತ್ತಿದ್ದು, ಮಾಲ್ಡೀವ್ಸ್ ಜನರು ಕೂಡ ಶಾಪ ಹಾಕುತ್ತಿದ್ದಾರೆ.

Some Reports Are Saying That India Is Begins To Withdraw The Military From Maldives

ಸಾಕಷ್ಟು ಸಹಾಯ ಮಾಡಿದೆ ಭಾರತ

ಮಾಲ್ಡೀವ್ಸ್ ಹಲವು ಬಾರಿ ಸಂಕಷ್ಟದ ಸುಳಿಗೆ ಸಿಲುಕಿದ್ದಾಗ ಭಾರತವೆ ಸಹಾಯ ಮಾಡಿದೆ ಮತ್ತು ಈಗಲೂ ಮಾಡುತ್ತಿದೆ. ಆದ್ರೂ ಸುಖಾಸುಮ್ಮನೆ ಮಾಲ್ಡೀವ್ಸ್ ಕಿರಿಕ್ ಜೋರು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಷ್ಟೆಲ್ಲದರ ನಡುವೆ ಮಾಲ್ಡೀವ್ಸ್ ಅಧ್ಯಕ್ಷರ ಹೇಳಿಕೆ ಕೂಡ ಭಾರತ & ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧ ಹಾಳು ಮಾಡಿದೆ. ಹೀಗಿದ್ದಾಗ ಕೂತು ಮಾತುಕತೆ ಮೂಲಕ ಈ ಸಮಸ್ಯೆಯನ್ನ ಬಗೆಹರಿಸಿಕೊಳ್ಳುವ ಬದಲು, ಕಿರಿಕ್ ಜೋರಾಗುತ್ತಿದೆ ಎನ್ನುವ ಬೇಸರ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬಂದಿದೆ.

ಭಾರತೀಯರಿಂದ ಭರ್ಜರಿ ಶಾಕ್!

2024ರ ಜನವರಿ 1ರಿಂದ 28ರವರೆಗೆ, ಒಟ್ಟಾರೆ 1.74 ಲಕ್ಷ ಪ್ರವಾಸಿಗರು ಮಾಲ್ದೀವ್ಸ್‌ಗೆ ಪ್ರವಾಸಕ್ಕೆ ಬಂದಿದ್ದರು. ಈ ಪೈಕಿ ಭಾರತೀಯರ ಸಂಖ್ಯೆ 13,989 ಎನ್ನಲಾಗಿದೆ. ಈ ಮೂಲಕ ಮಾಲ್ಡೀವ್ಸ್‌ಗೆ ಆಘಾತ ಎದುರಾಗಿದೆ. ಮಾಲ್ದೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ, ರಷ್ಯಾ ಮೂಲದ ಪ್ರಜೆಗಳು 18,561 ಆಗಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಇಟಲಿ ಮೂಲದ 18,111 ಪ್ರವಾಸಿಗರು ಮತ್ತು ಚೀನಾ ಮೂಲದವರು 16,529, ಬ್ರಿಟನ್‌ ಮೂಲದ ಒಟ್ಟು 14,588 ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಎಷ್ಟಿತ್ತು ಸಂಖ್ಯೆ?

2023ರಲ್ಲಿ 17 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದು, ಈ ಪೈಕಿ ಭಾರತ ಮೂಲದ ಸುಮಾರು 2,09,198 ಪ್ರವಾಸಿಗರು ಮಾಲ್ಡೀವ್ಸ್ ದೇಶಕ್ಕೆ ಭೇಟಿ ನೀಡಿದ್ದರು. ರಷ್ಯಾದ 2,09,146 & ಚೀನಾದಿಂದ 1,87,118 ಪ್ರವಾಸಿಗರು ತೆರಳಿದ್ದರು. ಆದರೆ ಈ ಬಾರಿ ಸರಿಯಾದ ಪೆಟ್ಟು ಬೀಳುತ್ತಿದೆ. ಇನ್ನು 2021 & 2022 ರಲ್ಲಿ ಭಾರತದ 2.11 ಲಕ್ಷ & 2.40 ಲಕ್ಷ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕಾಗಿ ಭೇಟಿ ನೀಡಿದ್ದರು. ಆದರೆ ಯಾವಾಗ ಮಾಲ್ಡೀವ್ಸ್ ಭಾರತದ ಜೊತೆ ಕಿರಿಕ್ ಶುರು ಮಾಡಿತ್ತೋ ಆ ಕ್ಷಣದಿಂದಲೇ ಭಾರತೀಯರು ಮಾಲ್ಡೀವ್ಸ್‌ಗೆ ಆಘಾತ ನೀಡ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+