• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಾನ್ನಿನ ಸೇನಾಧಿಕಾರಿ ಹತ್ಯೆ, ಭಾರತದ ಮೇಲೇನು ಪರಿಣಾಮ?

By ವಿಕಾಸ್ ನಂಜಪ್ಪ
|

ಬಾಗ್ದಾದ್, ಜನವರಿ 03: ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ನಡೆದ ವಾಯುದಾಳಿಯಲ್ಲಿಇರಾನ್ನಿನ ಪ್ರಭಾವಿ ಸೇನಾಧಿಕಾರಿ, ಎಲೈಟ್ ಕ್ಯೂಡ್ಸ್ ಫೋರ್ಸ್ ಮುಖ್ಯಸ್ಥ ಜನರಲ್ ಖಾಸಿಂ ಸುಲೈಮಾನಿ ಮೃತರಾಗಿದ್ದಾರೆ ಎಂದು ಇರಾಕ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇರಾಕ್, ಸಿರಿಯಾ, ಯೆಮನ್ ಸೇರಿದಂತೆ ಹಲವು ದೇಶಗಳಲ್ಲಿಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ ಖಾಸಿಂ ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಇರಾನ್ ಸೇನೆ ವಿದೇಶಗಳಲ್ಲಿ ಗುಪ್ತಚರ ಚಟುವಟಿಕೆ, ಅಸಾಂಪ್ರದಾಯಿಕ ಸಶಸ್ತ್ರ ಸಂಘರ್ಷ ನಿರ್ವಹಿಸಲು ಅಲ್ ಖುದ್ ಪಡೆಯನ್ನು ಖಾಸಿಂ ನಿರ್ಮಿಸಿದ್ದರು. ಮೃತರ ಪೈಕಿ ಪಾಪ್ಯುಲರ್ ಮೊಬಿಲೈಸೇಷನ್ ಫೋರ್ಸಸ್ ಉಪ ಕಮಾಂಡರ್ ಅಬು ಮೆಹದಿ ಅಲ್ ಮುಹಂದಿಸ್ ಹತ್ಯೆಗಿರುವ ವರದಿ ಬಂದಿದೆ.

ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಇತ್ತೀಚಿಗೆ ಇರಾಕ್‌ನ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಿ ಇರಾನ್ ಬೆಂಬಲಿಗರು ಪ್ರತಿಭಟಿಸಿದ್ದರು. ಇದಾದ ಕೆಲ ದಿನಗಳಲ್ಲಿ ಈ ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ. ಈ ನಡುವೆ ಇದು ಅಮೆರಿಕ ಪಡೆಯಿಂದ ನಡೆದ ರಾಕೆಟ್ ದಾಳಿ ಎಂದು ಅಧಿಕೃತ ಪ್ರಕಟಣೆ ಹೊರಡದಿದ್ದರೂ, ಅಮೆರಿಕದ ಶತ್ರು ಎಂದು ಪರಿಗಣಿಸಿದ್ದ ಖಾಸಿಂ ಹತ್ಯೆ ಕುರಿತಂತೆ ಟ್ರಂಪ್ ಸರ್ಕಾರದ ನಿರ್ಧಾರವನ್ನು ಸೆನೆಟರ್ ಕ್ರಿಸ್ ಮರ್ಫಿ ಪ್ರಶ್ನಿಸಿದ್ದಾರೆ. ''ಕಾಂಗ್ರೆಸ್‌ನ (ಸಂಸತ್ತು) ಅಮೋದನೆಯೇ ಇಲ್ಲದೆ ಇರಾನ್‌ನ ಎರಡನೇ ಅತಿದೊಡ್ಡ ಪ್ರಭಾವಿಯನ್ನು ಕೊಂದಿದ್ದು ಸರಿಯೇ? ಮತ್ತೊಂದು ಜಿದ್ದಿನ ಪ್ರಾದೇಶಿಕ ಯುದ್ಧಕ್ಕೆ ಇದು ಮುನ್ನುಡಿಯಲ್ಲವೇ?" ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

2012ರಲ್ಲಿ ನವದೆಹಲಿಯಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಮೇಲೆ ದಾಳಿ ನಡೆದಿತ್ತು. ರಾಯಭಾರಿ ಕಚೇರಿಯ ಒಬ್ಬ ಸಿಬ್ಬಂದಿಗೆ ದಾಳಿಯಲ್ಲಿ ಗಾಯವಾಗಿತ್ತು. ನಂತರ ಜಾರ್ಜಿಯಾದಲ್ಲಿ ಇದೇ ರೀತಿಯಲ್ಲಿ ಘಟನೆ ನಡೆದರೂ ಯಾರಿಗೂ ಗಾಯವಾಗಿರಲಿಲ್ಲ. ದೆಹಲಿ ಘಟನೆಯಲ್ಲಿ ಇಸ್ರೇಲಿ ರಾಯಭಾರಿ ತಾಲ್ ಯೆಹೊಶಾ ಕೊರೆನ್ ಅವರಿಗೆ ಸಣ್ಣ ಪುಟ್ಟ ಗಾಯವಾಗಿತ್ತು.

ಇರಾಕ್‌ನಲ್ಲಿ ಇರಾನಿನ ಸೇನಾಧಿಕಾರಿಯನ್ನು ಹತ್ಯೆಗೈದ ಅಮೆರಿಕ

ಇರಾನ್ ನ್ಯೂಸ್ ಸಂಸ್ಥೆಯ ಪತ್ರಕರ್ತ ಮೊಹಮ್ಮದ್ ಅಹ್ಮದ್ ಖಾಜ್ಮಿಯನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. ಇದು ಇರಾನಿನ ಕ್ರಾಂತಿಕಾರ ಸಂಘಟನೆಯ ಕೃತ್ಯ ಎಂದು ಪೊಲೀಸರು ಆರೋಪಿಸಿದ್ದರು.

ಯುಎಸ್ -ಇರಾನ್ ಜೊತೆ ಭಾರತ ಸಂಬಂಧ

ಈಗ ಸುಲೈಮಾನಿ ಹತ್ಯೆ ಬಳಿಕ ಯುಎಸ್ ಹಾಗೂ ಇರಾನ್ ನಡುವೆ ಸಂಘರ್ಷ ಇನ್ನಷ್ಟು ಹೆಚ್ಚಾಗಿ ಯುದ್ಧ ಭೀತಿ ಆವರಿಸಿದೆ. ಭಾರತ ಈ ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಭಾರತದಲ್ಲಿ ಈ ಸಂಘರ್ಷ ಪರಿಸ್ಥಿತಿಯಿಂದ ತೈಲ ಆಮದಿನ ಮೇಲೆ ದೊಡ್ಡ ಬೀಳಲಿದೆ. ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ಭಾರತದಲ್ಲಿ ತೈಲ ಬೆಲೆ ಏರಿಕೆ ನಿರೀಕ್ಷಿಸಬಹುದು.

ಇರಾನ್ ಮೇಲೆ ಯುಎಸ್ ಪ್ರತಿಬಂಧ ವಿಧಿಸಿದ ಬಳಿಕ ಕಳೆದ ವರ್ಷ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. ಭಾರತ, ಚೀನಾ ಸೇರಿದಂತೆ ಪ್ರಮುಖ ಆಮದು ರಾಷ್ಟ್ರಗಳಿಗೆ ಇದರಿಂದ ಭಾರಿ ಹೊಡೆತ ಬಿದ್ದಿತ್ತು. ಇದಾದ ಬಳಿಕ ಪರ್ಷಿಯನ್ ಗಲ್ಫ್ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿಗೆ ಇರಾನ್ ಕಾರಣ ಎಂದು ಯುಎಸ್ ಆಪಾದನೆ ಮಾಡಿತ್ತು. ಇದರಿಂದಲೂ ಭಾರತದಲ್ಲಿ ಇಂಧನ ಬೆಲೆ ಏರಿಕೆ ಕಂಡಿತ್ತು.

ಮಧ್ಯಪ್ರಾಚ್ಯದಲ್ಲಿ ಸುಲೇಮಾನಿ ಸೇನೆಯ ಮೂಲಕ ಅಶಾಂತಿ, ಅರಾಜಕತೆ, ಶೀತಲ ಸಮರಕ್ಕೆ ಇರಾನ್ ಕಾರಣವಾಗಿದೆ ಎಂದು ಯುಎಸ್ ಆರೋಪಿಸುತ್ತಲೇ ಬಂದಿತ್ತು. ಈಗ ಸುಲೇಮಾನಿ ಹತ್ಯೆ ಬಳಿಕ ನಡೆಯುವ ಬೆಳವಣಿಗೆ ಮೇಲೆ ತೈಲ ಆಮದು ರಾಷ್ಟ್ರಗಳ ಗಮನ ನೆಟ್ಟಿವೆ.

ಇದಲ್ಲದೆ ಸುಮಾರು 80 ಲಕ್ಷಕ್ಕೂ ಅಧಿಕ ಮಂದಿ ಭಾರತ ಮೂಲದವರು ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿದ್ದಾರೆ. ನಾಗರಿಕರ ಸುರಕ್ಷತೆ ಬಗ್ಗೆ ಪೆಂಟಗಾನ್ ಕೂಡಾ ಹೇಳಿಕೆ ನೀಡಿದ್ದು, ಅಪ್ರಚೋದಿತ ದಾಳಿ ಬಗ್ಗೆ ಇರಾನ್ ಗೆ ಎಚ್ಚರಿಕೆಯನ್ನು ನೀಡಿದೆ.

READ IN ENGLISH

English summary
The killing of Commander Qasem Soleimani is hugely significant for the United States. The head of the Al Quds Force, the elite unit of the Iranian Revolutionary Guards Force, was visible in every Middle East operation that Iran was involved in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X