Axiom-4 Mission: ಆಕಾಶದಲ್ಲಿ ಮಲಗಿ, ತೇಲಾಡುತ್ತಾ ಎಂಜಾಯ್ ಮಾಡಿದ ಶುಭಾಂಶು ಶುಕ್ಲಾ!
ಭಾರತೀಯ ಬಾಹ್ಯಾಕಾಶ ಲೋಕದಲ್ಲಿ ಹೊಸ ಅಧ್ಯಾಯ ಶುರು ಮಾಡಿರುವ ಶುಭಾಂಶು ಶುಕ್ಲಾ ಅವರು ಈಗ ಹೀರೋ. ಇಸ್ರೋ ಸಂಸ್ಥೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿ, ಭಾರತೀಯರ ಹೆಮ್ಮೆಯ ಪುತ್ರನಾಗಿರುವ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂದು ದಿನ ಕಳೆದಿದ್ದಾರೆ. ಈ ಮೂಲಕ ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸುತ್ತಲೇ, ಹೊಸ ಅನುಭವ ಕೂಡ ಪಡೆಯುತ್ತಿದ್ದಾರೆ ಗಗನಯಾತ್ರಿ ಶುಭಾಂಶು ಶುಕ್ಲಾ.
1985 ಅಕ್ಟೋಬರ್ 10 ಗುರುವಾರ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಜನಿಸಿದ್ದ ಗಗನಯಾತ್ರಿ ಶುಭಾಂಶು ಶುಕ್ಲಾ ಚಿಕ್ಕ ವಯಸ್ಸಿನಿಂದಲೇ ಜಾಣ ಹುಡುಗ. ಹೀಗೆ ತನ್ನ ಜಾಣ್ಮೆಯಿಂದಲೇ ಗಮನ ಸೆಳೆದಿದ್ದ ಶುಭಾಂಶು ಶುಕ್ಲಾ ಭವಿಷ್ಯದಲ್ಲಿ ಏನಾದರೂ ಸಾಧನೆ ಮಾಡುತ್ತಾನೆ ಅನ್ನೋ ನಂಬಿಕೆ ಆಗಲೇ ಮೂಡಿತ್ತು. ಶುಭಾಂಶು ಶುಕ್ಲಾ ಅವರಿಗೆ ಪೋಷಕರು ಕೂಡ ಬೆಂಬಲವಾಗಿ ನಿಂತಿದ್ದರು. ಯುದ್ಧ ವಿಮಾನದ ಪೈಲಟ್ ಆಗಿ ಇದೇ ಶುಭಾಂಶು ಶುಕ್ಲಾ ಅವರು ಸುಮಾರು 2,000 ಗಂಟೆಗಳಿಗೂ ಹೆಚ್ಚು ಸಮಯ ಆಕಾಶದಲ್ಲಿ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

2019ರ ಸಮಯದಲ್ಲಿ ಟ್ರೈನಿಂಗ್ ಶುರುವಾಗಿತ್ತು!
ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಪಡೆಗೆ 2006 ಸಮಯದಲ್ಲಿ ಸೇರ್ಪಡೆ ಆಗಿದ್ದರು. ಹೀಗೆ, ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸಾಧಕರಾಗಿ ಗಮನ ಸೆಳೆದರು. Su-30 MKI, MiG-21, ಜಾಗ್ವಾರ್ ರೀತಿ ಹಲವು ವಿಮಾನಗಳಲ್ಲಿ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ ಶುಭಾಂಶು ಶುಕ್ಲಾ. ಇನ್ನು ಶುಭಾಂಶು ಶುಕ್ಲಾ ಅವರ ಅನುಭವದ ಆಧಾರದಲ್ಲಿ 2019ರ ಸಮಯದಲ್ಲಿ ಗಗನಯಾತ್ರಿ ತರಬೇತಿಗೂ ಆಯ್ಕೆ ಮಾಡಿ ಕಳುಹಿಸಲಾಗಿತ್ತು.
ರಷ್ಯಾ ದೇಶದ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಕಠಿಣ ಟ್ರೈನಿಂಗ್ ಪಡೆದು ಬಂದಿದ್ದರು ಇದೇ ಶುಭಾಂಶು ಶುಕ್ಲಾ ಅವರು. ಹೀಗೆ ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಗಗನಯಾತ್ರಿ ತರಬೇತಿ ಪಡೆದು ಬಂದಿದ್ದ ಶುಭಾಂಶು ಶುಕ್ಲಾ ಮೊನ್ನೆ ಬಾಹ್ಯಾಕಾಶಕ್ಕೂ ಹಾರಿದ್ದರು. ಆ ನಂತರ, ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೂಡ ಎಂಟ್ರಿ ಪಡೆದಿದ್ದರು.
4 ಜನರಿದ್ದ ತಂಡದಿಂದ ಸಂಶೋಧನೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಶೋಧನೆ ನಡೆಸಲು ತೆರಳಿರುವ ಶುಭಾಂಶು ಶುಕ್ಲಾ ಮತ್ತು ತಂಡ ಯಶಸ್ವಿಯಾಗಿ ಒಂದು ದಿನ ಕಳೆದಿದೆ. ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿ ಮೂಲದ ವಿಜ್ಞಾನಿ ಟಿಬೊರ್ ಕಾಪು & ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ವಿಸ್ಕಿ ಸೇರಿದಂತೆ ಒಟ್ಟಾರೆ 4 ಜನರಿದ್ದ ತಂಡ ಬಾಹ್ಯಾಕಾಶಕ್ಕೆ ಹಾರಿದ್ದರು. ಇದೀಗ ಇವರೆಲ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹಲವು ರೀತಿಯ ಸಂಶೋಧನೆ ಆರಂಭಿಸಲಿದ್ದಾರೆ. 'ಆಕ್ಸಿಯಮ್-4' ಮಿಷನ್ ಮಹತ್ವದ ಸಂಶೋಧನೆಗಳು ಸೇರಿದಂತೆ ಮನುಷ್ಯರು ಭವಿಷ್ಯದಲ್ಲಿ ಬಾಹ್ಯಾಶದಲ್ಲಿ ಬದುಕುವಂತೆ ಮಾಡಲು ವೈಜ್ಞಾನಿಕ ತನಿಖೆ ನಡೆಸಲಿದೆ.












Click it and Unblock the Notifications