ಬಾಂಗ್ಲಾ ಚುನಾವಣೆ: ಮತ್ತೆ ಗೆಲುವು ಸಾಧಿಸಿದ ಶೇಖ್ ಹಸೀನಾ
ಢಾಕಾ, ಡಿಸೆಂಬರ್ 31: ಭಾನುವಾರ ನಡೆದ ಚುನಾವಣೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಮೈತ್ರಿಕೂಟ ಮತ್ತೊಮ್ಮೆ ಜಯಗಳಿಸಿದ್ದಾರೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ಜಯಸಾಧಿಸಿ ಪ್ರಧಾನಿ ಹುದ್ದೆಗೇರಿದ್ದಾರೆ.
ಒಟ್ಟು 300 ಸದಸ್ಯರಲ್ಲಿ ನವಾಮಿ ಲೀಗ್ ಮತ್ತು ಮೈತ್ರಿಪಕ್ಷಗಳ 266 ಮಂದಿ ಜಯಸಾಧಿಸಿದ್ದಾರೆ.
ಚುನಾವಣೆಯ ಸಮಯದಲ್ಲಿ ಸಾಕಷ್ಟು ಹಿಂಸಾಚಾರಗಳು ನಡೆದಿದ್ದವು. ಸುಮಾರು 17 ಜನರನ್ನು ಹತ್ಯೆಗೈಯ್ಯಲಾಗಿತ್ತು.

ಇಲ್ಲಿನ ಗೋಪಾಲ್ ಗಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಧಾನಿ ಶೇಖ್ ಹಸೀನಾ 2,29,539 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಎದುರಾಳಿಯಾಗಿ ಸ್ಪರ್ಧಿಸಿದ್ದ ಅಭ್ಯರ್ಥಿ ಕೇವಲ 123 ಮತಗಳನ್ನಷ್ಟೇ ಪಡೆಯಲು ಸಮರ್ಥರಾದರು!
71 ವರ್ಷ ವಯಸ್ಸಿನ ಹಸೀನಾ, ದೇಶದ ಆರ್ಥಿಕ ಪ್ರಗತಿ ಮತ್ತು ಬಡವರ ಉದ್ಧಾರಕ್ಕಾಗಿ ಜಾರಿಗೆ ತಂದ ಯೋಜನೆಗಳು ಜನರಲ್ಲಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸಿವೆ. ನಿರಾಶ್ರಿತ ರೊಹಿಂಗ್ಯಾ ಜನರಿಗೆ ಆಶ್ರಯ ನೀಡಿದ ಮಾನವೀಯ ನಡೆ ಸಹ ಹಸೀನಾ ಅವರ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಸೃಷ್ಟಿಸಿತ್ತು.
ಹಸೀನಾ ಗೆಲುವಿಗೆ ಚುನಾವಣಾ ಅಕ್ರಮವೇ ಕಾರಣ ಎಂದು ವಿಪಕ್ಷ ಬಿಎನ್ ಪಿ(ಬಾಂಗ್ಲಾದೇಶ್ ನ್ಯಾಶ್ನಲಿಸ್ಟ್ ಪಕ್ಷ) ಮೈತ್ರಿಕೂಟ ದೂರಿದೆ.












Click it and Unblock the Notifications