Get Updates
Get notified of breaking news, exclusive insights, and must-see stories!

Breaking; ತಾಂತ್ರಿಕ ತೊಂದರೆ ಕರಾಚಿಯಲ್ಲಿ ಇಂಡಿಗೋ ವಿಮಾನ ಲ್ಯಾಂಡ್

ಇಸ್ಲಾಮಾಬಾದ್, ಜುಲೈ 17; ಪೈಲೆಟ್ ತಾಂತ್ರಿಕ ತೊಂದರೆ ಪತ್ತೆ ಹಚ್ಚಿದ ಹಿನ್ನಲೆಯಲ್ಲಿ ಶಾರ್ಜಾ- ಹೈದರಾಬಾದ್ ನಡುವಿನ ಇಂಡಿಗೋ ವಿಮಾನ ಕರಾಚಿಯಲ್ಲಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಭಾನುವಾರ ಈ ಕುರಿತು ಪ್ರಕಟಣೆ ಮೂಲಕ ಇಂಡಿಗೋ ಮಾಹಿತಿ ನೀಡಿದೆ. ಪೈಲೆಟ್ ತಾಂತ್ರಿಕ ತೊಂದರೆ ಪತ್ತೆ ಹಚ್ಚಿದ ಬಳಿಕ ವಿಮಾನವನ್ನು ಪಾಕಿಸ್ತಾನ ಕಡೆಗೆ ಕಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕರಾಚಿಯಲ್ಲಿ ಇಳಿಸಲಾಗಿದೆ ಎಂದು ಹೇಳಿದೆ.

ಭಾರತದ ಕಡಿಮೆ ಪ್ರಯಾಣದರದ ವಿಮಾನವಾದ ಇಂಡಿಗೋ ಕರಾಚಿಯಿಂದ ಹೈದರಾಬಾದ್‌ಗೆ ಆಗಮಿಸುತ್ತಿತ್ತು. ಸದ್ಯ ಕರಾಚಿಯಲ್ಲಿರುವ ಪ್ರಯಾಣಿಕರನ್ನು ಕರೆತರಲು ಮತ್ತೊಂದು ವಿಮಾನವನ್ನು ಕಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Sharjah Hyderabad Indigo Flight Precautionary Landing In Karachi

ಇಂಡಿಗೋ 6ಇ-406 ವಿಮಾನ ಶಾರ್ಜಾದಿಂದ ಹೈದರಾಬಾದ್‌ಗೆ ಆಗಮಿಸುತ್ತಿತ್ತು. ಈ ವೇಳೆ ಪೈಲೆಟ್ ತಾಂತ್ರಿಕ ತೊಂದರೆ ಪತ್ತೆ ಹಚ್ಚಿದ್ದಾನೆ. ತಕ್ಷಣ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸ ಕರಾಚಿಗೆ ವಿಮಾನ ಕಳಿಸಲಾಗಿದೆ. ಯಶಸ್ವಿಯಾಗಿ ಲ್ಯಾಂಡ್ ಮಾಡಲಾಗಿದೆ.

ಇಂಜಿನ್ ನಂಬರ್ 2 ಅಥವ ಬಲಭಾಗದ ಇಂಜಿನ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಎರಡು ವಾರದಲ್ಲಿ ಕರಾಚಿಯಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾದ 2ನೇ ವಿಮಾನ ಇದಾಗಿದೆ. ಈ ತಿಂಗಳ ಆರಂಭದಲ್ಲಿ ದೆಹಲಿ-ದುಬೈ ಮಾರ್ಗದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ತೊಂದರೆ ಕಾರಣ ಕರಾಚಿಯಲ್ಲಿ ಲ್ಯಾಂಡ್ ಆಗಿತ್ತು.

138 ಪ್ರಯಾಣಿಕರಿದ್ದ ವಿಮಾನ ಕರಾಚಿಯಲ್ಲಿ ಲ್ಯಾಂಡ್ ಆದ ಬಳಿಕ ದೆಹಲಿಯಿಂದ ಬೇರೆ ವಿಮಾನ ಕಳಿಸಿ ಪ್ರಯಾಣಿಕರನ್ನು ದೆಹಲಿಗೆ ಕರೆತರಲಾಗಿತ್ತು. ಇದರಿಂದಾಗಿ 11 ಗಂಟೆಗಳ ಕಾಲ ಪ್ರಯಾಣಿಕರು ಕರಾಚಿಯಲ್ಲಿ ಉಳಿಯುವಂತಾಗಿತ್ತು. ಪಾಕಿಸ್ತಾನ ಸರ್ಕಾರ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+