ಇನ್ಫೋಸಿಸ್ ಅಮೆರಿಕಾ ಮುಖ್ಯಸ್ಥ ರಾಜೀನಾಮೆ, ವಿಶಾಲ್ ಸಿಕ್ಕಾಗೆ ಹಿನ್ನಡೆ

Subscribe to Oneindia Kannada

ಬೆಂಗಳೂರು, ಜೂನ್ 16: ಇನ್ಫೋಸಿಸ್ ನ ಅಮೆರಿಕಾ ಮತ್ತು ಜಾಗತಿಕ ಮಾರುಕಟ್ಟೆಯ ವ್ಯಾಪಾರ ಮತ್ತು ಉತ್ಪಾದನಾ ವಿಭಾಗದ ಮುಖ್ಯಸ್ಥ ಸಂದೀಪ್ ದದ್ಲಾನಿ ರಾಜೀನಾಮೆ ಸಲ್ಲಿಸಿದ್ದಾರೆ. ಸಂದೀಪ್ ರಾಜೀನಾಮೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಶಾಲ್ ಸಿಕ್ಕಾಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ಬೆಳವಣಿಗೆ ಬೆನ್ನಲ್ಲೇ ದದ್ಲಾನಿಯ ಜಾಗಕ್ಕೆ ಇಬ್ಬರು ನೂತನ ಅಧಿಕಾರಿಗಳನ್ನು ನೇಮಿಸಲಾಗಿದೆ. ಉತ್ಪಾದನಾ ವಿಭಾಗಕ್ಕೆ ನಿತೇಶ್ ಬಂಗಾ, ಹಾಗೂ ರಿಟೇಲ್ ವಿಭಾಗಕ್ಕೆ ಕರ್ಮೇಶ್ ವಾಸ್ವಾನಿಯನ್ನು ಕರೆತರಲಾಗಿದೆ.

 Setback for Infosys CEO Sikka as Americas head Sandeep Dadlani quits

2001ರಲ್ಲಿ ಇನ್ಫೋಸಿಸ್ ಸೇರಿದ್ದ ಸಂದೀಪ್ ಕಂಪನಿಯ ಮೂರನೇ ಒಂದು ಭಾಗವನ್ನು ಮುನ್ನಡೆಸುತ್ತಿದ್ದರು. ಇನ್ಫೋಸಿಸ್ ಗೆ ಅಮೆರಿಕಾದಿಂದಲೇ ಶೇಕಡಾ 65 ಆದಾಯ ಬರುತ್ತಿತ್ತು. ಇದರ ಮುಖ್ಯಸ್ಥರೇ ರಾಜೀನಾಮೆ ನೀಡಿರುವುದು ಇನ್ಫೋಸಿಸ್ ಸಿಇಒ ಸಿಕ್ಕಾಗೆ ಆದ ದೊಡ್ಡ ಹೊಡೆತವಾಗಿದೆ.

2014ರಲ್ಲಿ ವಿಶಾಲ ಸಿಕ್ಕಾ ಹುದ್ದೆ ವಹಿಸಿಕೊಂಡ ಬಳಿಕ ಒಟ್ಟು 10 ಹಿರಿಯ ಅಧಿಕಾರಿಗಳು ಕಂಪನಿ ತೊರೆದಿದ್ದು ಅವರ ಸಾಲಿಗೆ ಸಂದೀಪ್ ಕೂಡಾ ಸೇರ್ಪಡೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sandeep Dadlani, the head of Americas and global head of manufacturing and retail for Infosys, has resigned. It is a setback for chief executive officer Vishal Sikka.
Please Wait while comments are loading...