ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಪ್ರವಾಸಿಗರನ್ನು ಕೊಂದಿರುವ ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ಗೂ ಸಿಕ್ತು ಬಿಡುಗಡೆ ಭಾಗ್ಯ

|
Google Oneindia Kannada News

ಕಠ್ಮಂಡು, ಡಿಸೆಂಬರ್ 23: 1970 ಮತ್ತು 1980 ರ ದಶಕಗಳಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭಯ ಹುಟ್ಟಿಸಿದ್ದ ಚಾಲ್ಸ್‌ ಶೋಭರಾಜ್‌ಗೆ ನೇಪಾಳ ಸುಪ್ರೀಂ ಕೋರ್ಟ್‌ ಬಿಡುಗಡೆ ಭಾಗ್ಯ ನೀಡಿದೆ.

ಕನಿಷ್ಠ 20 ಪ್ರವಾಸಿಗರನ್ನು ಹತ್ಯೆ ಮಾಡಿರುವ ಆರೋಪ ಚಾಲ್ಸ್‌ ಶೋಭರಾಜ್‌ ಮೇಲಿದೆ. ಕೊಲೆಗಳಷ್ಟೇ ಅಲ್ಲದೇ, ದರೋಡೆ, ಕಳ್ಳತನ, ಡಕಾಯತಿ ಪ್ರಕರಣಗಳೂ ಶೋಭರಾಜ್‌ ವಿರುದ್ಧ ದಾಖಲಾಗಿವೆ. ಈತ 20 ವರ್ಷಗಳ ಕಾಲ ನೇಪಾಳದ ಜೈಲಿ ಶಿಕ್ಷೆ ಅನುಭವಿಸಿದ್ದು, ಇಂದು ಬಿಡುಗಡೆಗೊಂಡಿದ್ದಾನೆ ಎಂದು ಸುದ್ದಿಸಂಸ್ಥೆ 'ರಾಯಟರ್ಸ್‌' ವರದಿ ಮಾಡಿದೆ.

ಶೋಭರಾಜ್‌ಗೆ ಈಗ 78 ವರ್ಷ ವಯಸ್ಸಾಗಿದೆ. ಆತ ಫ್ರೆಂಚ್ ಪ್ರಜೆಯಾಗಿದ್ದಾನೆ. ಏಷ್ಯಾದ ದೇಶಗಳಿಗೆ ಭೇಟಿ ನೀಡಿದ 20ಕ್ಕೂ ಹೆಚ್ಚು ಪಾಶ್ಚಿಮಾತ್ಯ ಪ್ರಜೆಗಳನ್ನು ಕೊಂದಿದ್ದಾನೆ ಎಂದು ಶಂಕಿಸಲಾಗಿದೆ.

Serial killer Charles Sobhraj released from Nepal jail

ಈ ಕೊಲೆಗಳೆಲ್ಲವೂ ದರೋಡೆ ಮಾಡಲು ನಡೆಸಿದ್ದಾಗಿ ಶೋಭರಾಜ್‌ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡುವ ಸಂದರ್ಭದಲ್ಲಿ ಮತ್ತು ಬರುವ ಆಹಾರ ಅಥವಾ ಪಾನೀಯವನ್ನು ನೀಡುತ್ತಿದ್ದನೆಂದು ತಿಳಿದುಬಂದಿದೆ.

ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆತನನ್ನು ಜೈಲಿನಿಂದ ಬಿಡುಗಡೆ ಮಾಡವಂತೆ ಆದೇಶಿಸಿದೆ. ಅಲ್ಲಿ ಆತ 20 ವರ್ಷಗಳ ಶಿಕ್ಷೆಯಲ್ಲಿ ಅನುಭವಿಸಿದ್ದಾನೆ. ಆತನ ವಯಸ್ಸನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌, ಬಿಡುಗಡೆಗೆ ಅವಕಾಶ ನೀಡಿದೆ.

Serial killer Charles Sobhraj released from Nepal jail

ಬಿಕಿನಿ ಕಿಲ್ಲರ್

ಸೈಗಾನ್‌ನಲ್ಲಿ ಭಾರತೀಯ ತಂದೆ ಮತ್ತು ವಿಯೆಟ್ನಾಂನ ತಾಯಿಗೆ ಜನಿಸಿದ ಶೋಭರಾಜ್, ಬಿಕಿನಿ ಕಿಲ್ಲರ್‌ ಎಂದೇ ಕುಖ್ಯಾತಿ ಪಡೆದಿದ್ದಾರೆ. ಈತ ಫ್ರೆಂಚ್ ಮಹಿಳೆಯನ್ನು ವಿವಾಹವಾಗಿದ್ದಾನೆ.

ರತ್ನದ ವ್ಯಾಪಾರಿಯಂತೆ ನಟಿಸುತ್ತಾ, ಆತ ಪ್ರವಾಸಿಗರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಅವರಲ್ಲಿ ಅನೇಕರು 1970ರ ಹಿಪ್ಪಿ ಚಳುವಳಿಯಿಂದ ಆಕರ್ಷಿತರಾದವರು ಎಂದು ತಿಳಿದುಬಂದಿದೆ.

1975 ರಲ್ಲಿ ಬಿಕಿನಿಯನ್ನು ಧರಿಸಿ ಸಮುದ್ರತೀರದಲ್ಲಿ ಪತ್ತೆಯಾದ ಅಮೆರಿಕನ್ ಮಹಿಳೆಯನ್ನು ಶೋಭರಾಜ್‌ ಕೊಲೆ ಮಾಡಿದ್ದನು. ಹೀಗಾಗಿ ಈತನಿಗೆ 'ಬಿಕಿನಿ ಕಿಲ್ಲರ್‌' ಎಂಬ ಅಡ್ಡಹೆಸರು ಬಂದಿತು.

Serial killer Charles Sobhraj released from Nepal jail

ಶೋಭರಾಜ್‌ಗೆ ಸಂಬಂಧಿಸಿದ ನಾಲ್ಕು ಜೀವನ ಚರಿತ್ರೆಗಳು, ಮೂರು ಸಾಕ್ಷ್ಯಚಿತ್ರಗಳು, 'ಮೇನ್ ಔರ್ ಚಾರ್ಲ್ಸ್' ಎಂಬ ಬಾಲಿವುಡ್‌ ಚಿತ್ರ, 2021 ರ ಎಂಟು ಭಾಗಗಳ ಬಿಬಿಸಿ ಹಾಗೂ ನೆಟ್‌ಫ್ಲಿಕ್ಸ್‌ ವೆಬ್‌ ಸರಣಿ 'ದಿ ಸರ್ಪೆಂಟ್‌' ಬಿಡುಗಡೆಯಾಗಿವೆ.

2010 ರಲ್ಲಿ, ನಿಹಿತಾ ಬಿಸ್ವಾಸ್ ಎನ್ನುವ ನೇಪಾಳಿ ಯುವತಿಯನ್ನು ಮದುವೆಯಾಗಿರುವುದಾಗಿ ತಿಳಿದುಬಂದಿದೆ. ಆತ ಜೈಲಿನಲ್ಲಿದ್ದಾಗಲೇ ಈ ವಿವಾಹವಾಗಿದ್ದಾನೆ. ನಿಹಿತಾ ಬಿಸ್ವಾಸ್‌ ಎಂಬ ಯುವತಿಯು ಶೋಭರಾಜ್‌ ಪರ ವಕೀಲರ ಮಗಳೆಂದು ಗೊತ್ತಾಗಿದೆ. ಮದುವೆಯಾದಾಗ ಆಕೆಗೆ 20 ವರ್ಷ. ಶೋಭರಾಜ್‌ಗಿಂತ 44 ವರ್ಷ ಕಿರಿಯವಳು. 2017 ರಲ್ಲಿ, ಹೃದಯದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆತನನ್ನು ಉಳಿಸಲು ಆಕೆ ರಕ್ತದಾನ ಮಾಡಿದ್ದಳೆಂದು ವರದಿಯಾಗಿದೆ.

English summary
Notorious serial killer Charles Sobhraj, a Frenchman of Indian and Vietnamese parentage, was released from Nepal jail following Supreme Court’s order on Friday after 20 years, according to media reports,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X