• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ಪೂಟ್ಯಾನ್‌ನಲ್ಲಿ ಡೆಲ್ಟಾ ಸೋಂಕು ದಾಳಿ, 59 ಪ್ರಕರಣಗಳು ಪತ್ತೆ

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 14: ಚೀನಾದ ಮತ್ತೊಂದು ನಗರದಲ್ಲಿ ಇದೀಗ ಡೆಲ್ಟಾ ವೈರಸ್ ಪ್ರಬಲವಾಗಿದೆ. ಪೂಟ್ಯಾನ್‌ನಲ್ಲಿ 59 ಪ್ರಕರಣಗಳು ಪತ್ತೆಯಾಗಿವೆ.

ಭಾರತದಲ್ಲಿ ಮೊದಲು ಕಂಡುಬಂದಿದ್ದ ಡೆಲ್ಟಾ ವೈರಾಣು ಚೀನಾದ ಶಿಯಾಮೆನ್ ನಗರದಲ್ಲಿ ಹಾವಳಿ ಎಬ್ಬಿಸಿದೆ. ಮಂಗಳವಾರ ಒಂದೇ ದಿನ 59 ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಡೆಲ್ಟಾ ವೈರಾಣು ವ್ಯಾಪಕವಾಗಿ ಹರಡಿರುವ ಆತಂಕ ಎದುರಾಗಿದೆ.

5 ದೇಶಗಳಲ್ಲಿ ತೀವ್ರಗೊಳ್ಳುತ್ತಿದೆ ಡೆಲ್ಟಾ ಪ್ಲಸ್ ವೈರಸ್5 ದೇಶಗಳಲ್ಲಿ ತೀವ್ರಗೊಳ್ಳುತ್ತಿದೆ ಡೆಲ್ಟಾ ಪ್ಲಸ್ ವೈರಸ್

ಇದರೊಂದಿಗೆ ಚೀನಾದ 2 ನಗರಗಳಲ್ಲಿ ಡೆಲ್ಟಾ ವೈರಾಣು ಹಾವಳಿ ಕಂಡುಬಂದಂತಾಗಿದೆ. ಈ ಹಿಂದೆ ಫ್ಯುಜಿಯಾನ್ ಪ್ರಾಂತ್ಯದಲ್ಲಿ 33 ಡೆಲ್ಟಾ ಪ್ರಕರಣಗಳು ವರದಿಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು.

ಕಳೆದ ಎರಡು ವಾರಗಳಲ್ಲಿ ಪತ್ತೆಯಾಗಿದ್ದ ಡೆಲ್ಟಾ ಪ್ರಕರಣಗಳ ಸಂಖ್ಯೆ 43. ಇದೀಗ ಒಂದೇ ದಿನ 59 ಪ್ರಕರಣಗಳು ಪತ್ತೆಯಾಗಿರುವುದರಿಂದ ಆರೋಗ್ಯಾಧಿಕಾರಿಗಳು ಆತಂಕಗೊಂಡಿದ್ದಾರೆ.

ಚೀನಾವು ಕೊರೊನಾ ವೈರಸ್‌ ಸೋಂಕು ಪರೀಕ್ಷೆ ನಡೆಸುವಲ್ಲಿ ಸೂಕ್ಷ್ಮವಾಗಿ ನಡೆದಿದೆ. ಒಂದು ಪ್ರದೇಶದಲ್ಲಿ ಒಬ್ಬರಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟರೂ ಇಡೀ ಪ್ರದೇಶದ ಜನರಿಗೆ ಸಾಮೂಹಿಕ ಕೋವಿಡ್‌ ಪರೀಕ್ಷೆಯನ್ನು ಚೀನಾ ನಡೆಸಿದೆ. ಆ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯ ಕೋವಿಡ್‌ ಪರೀಕ್ಷೆ ನಡೆಸಲಾಗಿದೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳುವ ಕಾರ್ಯವನ್ನು ಕೂಡಾ ಚೀನಾ ಮಾಡಿದೆ.

ಹಾಗೆಯೇ ಸ್ಥಳೀಯ ಆಡಳಿತವು ಆ ಪ್ರದೇಶದ ಜನಸಂಖ್ಯೆ ಎಷ್ಟಿದೆ ಹಾಗೂ ಎಷ್ಟು ಜನರ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ ಎಂಬ ಬಗ್ಗೆ ಸರಿಯಾಗಿ ಲೆಕ್ಕಾಚಾರ ಮಾಡಿಕೊಂಡಿದೆ. ಆ ಸಮತೋಲನವನ್ನು ಚೀನಾ ಕಾಪಾಡಿಕೊಂಡಿದೆ.

ಹಾಗೆಯೇ ಯಾರಿಗಾದರೂ ಕೊರೊನಾ ವೈರಸ್‌ ಸೋಂಕು ಇದೆಯೇ ಎಂದು ತಿಳಿದುಕೊಳ್ಳಲು ಈ ಕಾರ್ಯವನ್ನು ಪ್ರತಿ ಪ್ರದೇಶದಲ್ಲಿ ಸುಮಾರು ಡಜನ್‌ಗಟ್ಟಲೆ ಬಾರಿ ನಡೆಸಿದೆ. ಒಟ್ಟಾಗಿ ಸುಮಾರು 100 ಮಿಲಿಯನ್‌ ಬಾರಿ ಕೋವಿಡ್‌ ಪರೀಕ್ಷೆಯನ್ನು ನಡೆಸಲಾಗಿದೆ.

ಆದರೆ ಯುಗ್‌ಝುವೋ ನಗರದಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾಗಲು ಸಾಲಿನಲ್ಲಿ ನಿಂತ ಸಂದರ್ಭದಲ್ಲಿ ಕೋವಿಡ್‌ ಸೋಂಕಿಗೆ ಒಳಗಾದ ಘಟನೆಗಳು ಕೂಡಾ ನಡೆದಿದೆ.

ಚೀನಾದಲ್ಲಿ ಕ್ವಾರಂಟೈನ್‌ ಕೂಡಾ ಪ್ರಮುಖ ಪಾತ್ರವನ್ನು ವಹಿಸಿದೆ. ಒಂದು ಕೋವಿಡ್‌ ಪ್ರಕರಣ ದಾಖಲಾಗುತ್ತಿದ್ದಂತೆ ಚೀನಾದ ರಾಜಧಾನಿ ಬೇಜಿಂಗ್‌ ಅನ್ನು ಸಂಪೂರ್ಣವಾಗಿ ಸೀಲ್‌ ಡೌನ್‌ ಮಾಡಲಾಗಿತ್ತು. ಇಲ್ಲಿಗೆ ಯಾವುದೇ ಪ್ರಾಂತ್ಯದಿಂದ ಯಾರೂ ಕೂಡಾ ಬರುವಂತಿರಲಿಲ್ಲ, ಹೋಗುವಂತಿರಲಿಲ್ಲ. ಕೋವಿಡ್‌ ಹಾಟ್‌ಸ್ಪಾಟ್‌ ಪ್ರದೇಶದಿಂದ ಎಲ್ಲಾ ರೈಲು ಸಂಚಾರವನ್ನು ಕೂಡಾ ಸ್ಥಗಿತಗೊಳಿಸಲಾಗಿತ್ತು.

ಈ ಎಲ್ಲಾ ಕಾರ್ಯವನ್ನು ಚೀನಾದಲ್ಲಿ ಹತ್ತು ಕೋವಿಡ್‌ನ ಡೆಲ್ಟಾ ರೂಪಾಂತರ ಪ್ರಕರಣಗಳು ದಾಖಲಾಗುತ್ತಿದ್ದಂತೆ ಮಾಡಲಾಗಿದೆ. ಇನ್ನು ಇತರೆ ಪ್ರದೇಶಗಳಲ್ಲೂ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ. ಜನರಿಗೆ ರಜೆ ನೀಡಿ ಮನೆಯಲ್ಲೇ ಕೂರಿಸಲಾಗಿದೆ. ಹಾಗೆಯೇ ಶಾಲೆ ಹಾಗೂ ಕಚೇರಿಗಳಿಗೆ ಮತ್ತೆ ಆಗಮಿಸುವ ಮುನ್ನ ಹಲವಾರು ಮಂದಿಯನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡಿ ಕೂರಿಸಲಾಗಿದೆ.

ಕೊರೊನಾ ವೈರಸ್‌ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವಕ್ಕೆ ಈಗ ಚೀನಾ ಮಾದರಿ ತೋರಿಸುತ್ತಿದೆ. ಹಾಗೆಯೇ ವಿಶ್ವದ ಇತರೆ ದೇಶಗಳು ಚೀನಾದಂತೆಯೇ ಕೊರೊನಾ ಸೋಂಕು ವೈರಸ್‌ ಅನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಬಹುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಸಾಮಾನ್ಯವಾಗಿ ಒರಿಜಿನಲ್ ಕೊರೊನಾ ಸೋಂಕು ತಗುಲಿ ಅದರ ಲಕ್ಷಣಗಳು ಕಾಣಿಸಿಕೊಳ್ಳಲು ಕನಿಷ್ಠ ಒಂದು ವಾರ ಬೇಕು ಆದರೆ ಡೆಲ್ಟಾ ಪ್ಲಸ್ ತಗುಲಿ ಒಂದೆರೆಡು ದಿನಗಳಲ್ಲೇ ಸೋಂಕಿನ ತೀವ್ರತೆ, ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾಹಿತಿ ಲಭ್ಯವಾಗಿದೆ.

ಡೆಲ್ಟಾ ಪ್ಲಸ್ 35 ದೇಶಗಳಿಗೆ ದಾಳಿ ಇಟ್ಟಿದ್ದು, ಅದರ ಪೈಕಿ 5 ದೇಶಗಳಲ್ಲಿ ಅತಿಯಾಗಿ ಹರಡುತ್ತಿದೆ. ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ.35ರಷ್ಟು ಏರಿಕೆಯಾಗಿದೆ.

ಲೂಯಿಸಿಯಾನ, ಫ್ಲೋರಿಡಾ, ಅರ್ಕಾನ್ಸಾಸ್‌ಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕೊರೊನಾ ವೈರಾಣುವಿನ ಹೊಸ ರೂಪಾಂತರದ ವಿರುದ್ಧ ಹೋರಾಟಕ್ಕೆ ಭಾರತ ಸಜ್ಜಾಗುತ್ತಿದೆ. ಯಾವುದೇ ಕಾರಣಕ್ಕೂ ಜನರು ಇನ್ನಷ್ಟು ದಿನ ಗುಂಪುಗೂಡದೆ ಕಾರ್ಯನಿರ್ವಹಿಸಬೇಕು. ಕೊರೊನಾ ವೈರಸ್‌ನ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕು.

English summary
A second city in southeastern China has seen a jump in COVID-19 cases in a delta variant outbreak that started late last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X