ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತಾರ್ ಗೆ ವಿಮಾನ ಯಾನ ಸೇವೆಯೂ ನೀಡದಿರಲು ನಿರ್ಧಾರ

|
Google Oneindia Kannada News

ಬೆಂಗಳೂರು, ಜೂನ್ 5: ಕಡಿಮೆ ವೆಚ್ಚದ-ಯುಎಇ ಮೂಲದ ಏರ್ ಅರೇಬಿಯಾ ಕೂಡ ಕತಾರ್ ಗೆ ಎಲ್ಲ ವಿಮಾನ ಯಾನ ಸೇವೆಯನ್ನು ರದ್ದುಗೊಳಿಸಿದೆ. ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣಕ್ಕೆ ಈ ರೀತಿ ವಿಮಾನ ಯಾನ ಸೇವೆ ನಿಲ್ಲಿಸುತ್ತಿರುವ ಮತ್ತೊಂದು ಸಂಸ್ಥೆ ಏರ್ ಅರೇಬಿಯಾ.

ಮಂಗಳವಾರದಿಂದ ಕತಾರ್ ಗೆ ಎಲ್ಲ ವಿಮಾನ ಹಾರಾಟವನ್ನು ನಿಲ್ಲಿಸಲಾಗಿದೆ. ಮುಂದಿನ ನಿರ್ಧಾರ ತೆಗೆದುಕೊಳ್ಳುವವರೆಗೆ ಇದು ಜಾರಿಯಲ್ಲಿರುತ್ತದೆ ಇದು ತಿಳಿಸಲಾಗಿದೆ. ಕತಾರ್ ಜತೆಗೆ ಬಹರೇನ್, ಈಜಿಪ್ಟ್, ಸೌದಿ ಅರೇಬಿಯಾ ಮತ್ತು ಯುಎಇ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿವೆ.[ಅರಬ್ ಬಿಕ್ಕಟ್ಟು, ಕತಾರ್ ಜತೆಗಿನ ರಾಜತಾಂತ್ರಿಕ ಸಂಬಂಧಕ್ಕೆ ಬ್ರೇಕ್]

Saudi-Qatar tussle: major airlines suspend services to Qatar

ಆದ್ದರಿಂದ ಕತಾರ್ ನ ದೋಹಾಗೆ ಇರುವ ಎಲ್ಲ ವಿಮಾನ ಯಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಕಾರಣ ಏನು ಗೊತ್ತಾ? ಇಸ್ಲಾಂ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ಸೂಚಿಸುತ್ತಿದೆ ಹಾಗೂ ಇರಾನ್ ಜತೆಗೆ ಬಾಂಧವ್ಯ ಹೊಂದಿರುವ ಕಾರಣಕ್ಕೆ ಕತಾರ್ ನ ಜತೆಗೆ ಎಲ್ಲ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿವೆ.[ಅರಬ್ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲೇ ತೈಲ ಬೆಲೆ ಏರಿಕೆ]

ಸೌದಿ ಅರೇಬಿಯನ್ ಏರ್ ಲೈನ್ಸ್ ಜತೆಗೆ ಫ್ಲೈ ದುಬೈ, ಎಮಿರೇಟ್ಸ್ ಮತ್ತು ಎತಿಹಾದ್ ವಿಮಾನ ಯಾನ ಸಂಸ್ಥೆಗಳು ಕೂಡ ಹಾರಾಟವನ್ನು ರದ್ದು ಮಾಡಿವೆ. ಮುಂದಿನ ಆದೇಶದವರೆಗೆ ವಿಮಾನ ಯಾನ ನಿಲ್ಲಿಸಿರುವುದಾಗಿ ಹೇಳಲಾಗಿದೆಯೇ ವಿನಾ ಈ ನಿರ್ಧಾರದ ಹಿಂದಿನ ಕಾರಣವನ್ನು ಬಯಲು ಮಾಡಿಲ್ಲ.

English summary
Air Arabia, a low-cost airline based in the United Arab Emirates, says it is suspending flights to Qatar along with other Emirati airlines over the growing diplomatic crisis. It said that its flights will be suspended from Tuesday “until further notice.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X