ಅರಬ್ ಬಿಕ್ಕಟ್ಟು, ಕತಾರ್ ಜತೆಗಿನ ರಾಜತಾಂತ್ರಿಕ ಸಂಬಂಧಕ್ಕೆ ಬ್ರೇಕ್

ದೋಹಾ, ಜೂನ್ 5: ಮಧ್ಯಪೂರ್ವ ದೇಶಗಳಲ್ಲಿ ಮತ್ತೊಮ್ಮೆ ಬಿಕ್ಕಟ್ಟು ಉಲ್ಬಣಿಸಿದೆ. ಭಯೋತ್ಪಾದನೆಗೆ ಕತಾರ್ ಬೆಂಬಲ ನೀಡುತ್ತಿದೆ ಎಂಬ ಕಾರಣವನ್ನು ಮುಂದೊಡ್ಡಿ ಇತರ ಅರಬ್ ದೇಶಗಳಾದ ಸೌದಿ ಅರೇಬಿಯಾ, ಈಜಿಪ್ಟ್, ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಜತಾಂತ್ರಿಕ ಸಂಬಂಧವನ್ನು ಕೊನೆಗೊಳಿಸಿವೆ.

ಕತಾರ್ ದೇಶ ಮುಸ್ಲಿಂ ಬ್ರದರ್ ಹುಡ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ. ಜತೆಗೆ ಅರಬ್ ಪ್ರಾಂತ್ಯದಲ್ಲಿ ಅಸ್ಥಿರತೆ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಈ ದೇಶಗಳು ಕತಾರ್ ಜತೆಗಿನ ಸಂಬಂಧ ಮುರಿದುಕೊಳ್ಳಲು ನಿರ್ಧರಿಸಿವೆ.

Saudi Arabia, Egypt, Bahrain and the UAE cut diplomatic ties with Qatar

ಸೌದಿ ಅರೇಬಿಯಾ ತನ್ನ ಗಡಿ, ವಾಯು ಮಾರ್ಗ ಮತ್ತು ಜಲ ಮಾರ್ಗಗಳನ್ನು ಕತಾರ್ ಪಾಲಿಗೆ ಮುಚ್ಚಿದೆ. ದೇಶವನ್ನು ಭಯೋತ್ಪಾದನೆಯಿಂದ ರಕ್ಷಿಸುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಸೌದಿ ಹೇಳಿದೆ.

ಇನ್ನು ಈಜಿಪ್ಟ್ ಕೂಡಾ ತನ್ನ ವಾಯುಮಾರ್ಗ ಹಾಗೂ ಬಂದರುಗಳನ್ನು ಕತಾರ್ ಪಾಲಿಗೆ ಮುಚ್ಚಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕತಾರ್ ರಾಜತಾಂತ್ರಿಕ ಸಿಬ್ಬಂದಿಗಳಿಗೆ ದೇಶ ಬಿಡಲು 48 ಗಂಟೆಗಳ ಗಡುವು ನೀಡಿದೆ. ಬಹ್ರೇನ್ ಕೂಡಾ ರಾಯತಾಂತ್ರಿಕ ಸಿಬ್ಬಂದಿಗಳನ್ನು ಜಾಗ ಖಾಲಿ ಮಾಡಲು 48 ಗಂಟೆಗಳ ಸಮಯ ನೀಡಿದ್ದು ಕತಾರ್ ನಾಗರಿಕರು 14 ದಿನದೊಳಗೆ ದೇಶ ಬಿಟ್ಟು ಹೋಗುವಂತೆ ಸೂಚಿಸಿದೆ.

ಇನ್ನು ಯೆಮೆನಿನಲ್ಲಿ ಹೌತಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ಅರೇಬಿಯಾ ನೇತೃತ್ವದ ಗುಂಪಿನಿಂದಲೂ ಕತಾರ್ ದೇಶವನ್ನು ಹೊರ ಹಾಕಲಾಗಿದೆ.

ದೋಹಾ (ಕತಾರ್ ರಾಜಧಾನಿ) ನಡೆಗಳು 'ಭಯೋತ್ಪಾದನಗೆ ಶಕ್ತಿ' ನೀಡುತ್ತಿವೆ. 'ಅಲ್ ಖೈದಾ ಮತ್ತು ಡಾಯಿಷ್ (ಇಸ್ಲಾಮಿಕ್ ಸ್ಟೇಟ್ -ಐಸಿಸ್)' ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಈ ನಾಲ್ಕು ದೇಶಗಳು ದೂರಿವೆ.

ವಿಮಾನಯಾನ ರದ್ದು

ಅರಬ್ ಬಿಕ್ಕಟ್ಟಿನ ಬೆನ್ನಿಗೆ ಮಂಗಳವಾರದಿಂದ ಕತಾರಿಗೆ ಎಲ್ಲಾ ವಿಮಾನಯಾನಗಳನ್ನು ರದ್ದುಪಡಿಸುವುದಾಗಿ ಎಮಿರೇಟ್ಸ್ ಏರ್ಲೈನ್ಸ್ ಹೇಳಿದೆ.

ಇದೇ ವೇಳೆ ಅಬುದಾಭಿ ಮೂಲದ ವಿಮಾನಯಾನ ಸಂಸ್ಥೆ ಎತಿಹಾದ್ ಕೂಡ ಕತಾರಿಗೆ ವಿಮಾನಯಾನ ನಿಲ್ಲಿಸುವುದಾಗಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+