ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿನ್ಸ್ ಎಂಬಿಎಸ್ ಅನ್ನು ಸೌದಿ ಪ್ರಧಾನಿ ಮಾಡಿದ ಕಿಂಗ್ ಸಲ್ಮಾನ್

|
Google Oneindia Kannada News

ರಿಯಾಧ್, ಸೆ. 28: ಸೌದಿ ಅರೇಬಿಯಾದ ಮಹಾರಾಜ ಸಲ್ಮಾನ್ ಅವರು ತಮ್ಮ ಪ್ರಧಾನಿಯಾಗಿ ರಾಜಕುಮಾರ್ ಮೊಹಮ್ಮದ್ ಬಿನ್ ಸಲ್ಮಾನ್‌ರನ್ನು ನೇಮಿಸಿಕೊಂಡಿದ್ದಾರೆ. ನಿನ್ನೆ ಮಂಗಳವಾರ ರಾತ್ರಿ ಈ ಬದಲಾವಣೆ ಆಗಿದೆ.

ಮೊಹಮ್ಮದ್ ಬಿನ್ ಸಲ್ಮಾನ್ ಅಕಾ ಎಂಬಿಎಸ್ ಸದ್ಯ ಸೌದಿ ಅರೇಬಿಯಾ ರಾಜಕೀಯದಲ್ಲಿ ಬಹಳ ಪ್ರಭಾವಿ ವ್ಯಕ್ತಿ ಎನಿಸಿದ್ದವರು. ಹಲವು ವರ್ಷಗಳ ಕಾಲ ಆಡಳಿತ ವ್ಯವಹಾರದಲ್ಲಿ ಅವರೇ ಅಂತಿಮ ಎನ್ನುವಷ್ಟು ಪ್ರಭಾವಿಯಾಗಿದ್ದರು.

ಸೌದಿ ಅರೇಬಿಯಾದಲ್ಲಿ ಬೃಹತ್ ಚಿನ್ನ ಮತ್ತು ತಾಮ್ರದ ನಿಕ್ಷೇಪ ಪತ್ತೆಸೌದಿ ಅರೇಬಿಯಾದಲ್ಲಿ ಬೃಹತ್ ಚಿನ್ನ ಮತ್ತು ತಾಮ್ರದ ನಿಕ್ಷೇಪ ಪತ್ತೆ

ಸೌದಿ ಅರೇಬಿಯಾದಲ್ಲಿ ದೊರೆಯಾದವರೇ ಸಾಮಾನ್ಯವಾಗಿ ಪ್ರಧಾನಿ ಸ್ಥಾನ ನಿರ್ವಹಿಸುವುದುಂಟು. ಈವರೆಗೂ ಸಲ್ಮಾನ್ ಅವರೇ ಪ್ರಧಾನಿಯಾಗಿದ್ದರು. ಈಗ ತಮ್ಮ ಏಳನೇ ಮಗನಾದ ಮೊಹಮ್ಮದ್ ಬಿನ್ ಸಲ್ಮಾನ್‌ರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿರುವುದು ಕುತೂಹಲ ಮೂಡಿಸಿದೆ. ಎಂಬಿಎಸ್ ಅವರು ಸೌದಿ ಅರೇಬಿಯಾ ಮಹಾರಾಜ ಸಲ್ಮಾನ್‌ನ ಉತ್ತರಾಧಿಕಾರಿಯೂ ಹೌದು. ಸದ್ಯದಲ್ಲೇ ದೊರೆ ಪಟ್ಟವನ್ನೂ ಎಂಬಿಎಸ್‌ಗೆ ಬಿಟ್ಟುಕೊಡಬಹುದಾ ಎಂಬ ಅನುಮಾನ ಇದೆ.

Saudi King Salman Names Mohammed Bin As Prime Minister

37 ವರ್ಷದ ಎಂಬಿಎಸ್ ಸೌದಿ ಅರೇಬಿಯಾ ರಾಜಕೀಯದಲ್ಲಿ ಬಹಳ ಅನುಭವಿಯಾಗಿದ್ಧಾರೆ. ರಕ್ಷಣಾ ಸಚಿವ ಸ್ಥಾನ ಮತ್ತು ಉಪಪ್ರಧಾನಿ ಸ್ಥಾನವನ್ನು ಹಿಂದೆ ಇವರು ನಿರ್ವಹಿಸಿದ್ದರು.

ದೊರೆ ಸಲ್ಮಾನ್‌ರ ಇನ್ನೊಬ್ಬ ಮಗ ಖಾಲಿದ್ ಬಿನ್ ಸಲ್ಮಾನ್ ಅವರು ರಕ್ಷಣಾ ಸಚಿವರಾಗಿದ್ದಾರೆ. ಈ ಮೊದಲು ಇವರು ಉಪ ರಕ್ಷಣಾ ಮಂತ್ರಿಯಾಗಿದ್ದರು.

ಮೊಹಮ್ಮದ್ ಬಿನ್ ಸಲ್ಮಾನ್‌ ಭೇಟಿ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ಮೊಹಮ್ಮದ್ ಬಿನ್ ಸಲ್ಮಾನ್‌ ಭೇಟಿ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್

ಮಹಾರಾಜ ಸಲ್ಮಾನ್‌ಗೆ ಈಗ 87 ವರ್ಷ ವಯಸ್ಸು. 2015ರಲ್ಲಷ್ಟೇ ಅವರು ದೊರೆ ಪಟ್ಟ ಅಲಂಕರಿಸಿದ್ದು. ಆದರೆ, ಆರೋಗ್ಯ ಅವರಿಗೆ ಕೈಕೊಡುತ್ತಿದೆ. ಈ ವರ್ಷ ಅವರು ಎರಡು ಬಾರಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೇ ತಿಂಗಳಲ್ಲಿ ಒಂದು ವಾರ ಕಾಲ ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು.

Saudi King Salman Names Mohammed Bin As Prime Minister

ಸಲ್ಮಾನ್ ದೊರೆಯಾದ ಎರಡು ವರ್ಷದಲ್ಲೇ, ಅಂದರೆ 2017ರಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್‌ಗೆ ಪಟ್ಟ ಕಟ್ಟಬಹುದು ಎಂಬಂತಹ ಸುದ್ದಿಗಳು ಹರಿದಾಡಿದ್ದವು. ಈಗ ಎಂಬಿಎಸ್‌ಗೆ ಪ್ರಧಾನಿ ಪಟ್ಟ ಸಿಕ್ಕ ಬಳಿಕ ಈ ಸುದ್ದಿಗೆ ಇನ್ನಷ್ಟು ಇಂಬು ಸಿಕ್ಕಂತಾಗಿದೆ.

ಎಂಬಿಎಸ್ ಬಗ್ಗೆ

ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ 1985 ಆಗಸ್ಟ್ 31ರಂದು ಜನಿಸಿದರು. ಇವರ ತಾಯಿ ಫಾಹ್ದಾ ಬಿಂಟ್ ಫಾಲಾ ಅಲ್ ಹಿದ್ಲೇನ್ ಅವರು ದೊರೆ ಸಲ್ಮಾನ್‌ರ ಮೂರನೇ ಪತ್ನಿ. ಕುತೂಹಲವೆಂದರೆ ಸೌದಿ ಅರೇಬಿಯಾ ದೊರೆಯ ವಿರುದ್ಧ 20ನೇ ಶತಮಾನದಲ್ಲಿ ಹೋರಾಡಿದ್ದ ಅಲ್ ಅಜ್ಮನ್ ಬುಡಕಟ್ಟು ಸಮುದಾಯದ ಮುಖ್ಯಸ್ಥ ಧಾಯ್ದನ್ ಬಿನ್ ಹಿದ್ಲೇನ್ ಎಂಬುವರ ಮರಿಮೊಮ್ಮಗಳು ಈ ಫಾಹದಾ.

ಕಿಂಗ್ ಸಲ್ಮಾನ್‌ಗೆ ಮೂವರು ಪತ್ನಿಯರು. ಮೊದಲ ಪತ್ನಿ 2011ರಲ್ಲಿ ಅಸುನೀಗಿದರೆ, ಎರಡನೇ ಪತ್ನಿಗೆ ಡಿವೋರ್ಸ್ ಕೊಡಲಾಗಿದೆ. ಈಗ ಫಾಹ್ದಾ ಮೂರನೇ ಪತ್ನಿ. ಸಲ್ಮಾನ್‌ಗೆ ಒಟ್ಟು ಎಂಟು ಮಕ್ಕಳು. ಇವರಲ್ಲಿ ಫಾಹದಾ ಅವರಿಂದಲೇ ಆರು ಮಕ್ಕಳು ಜನಿಸಿದ್ಧಾರೆ. ಮೊಹಮ್ಮದ್ ಬಿನ್ ಸಲ್ಮಾನ್ ಈ ಆರು ಮಕ್ಕಳಲ್ಲಿ ಹಿರಿಯ ಮಗ.

ಮೊಹಮ್ಮದ್ ಬಿನ್ ಸಲ್ಮಾನ್ ರಾಜಕುಟುಂಬದಲ್ಲಿ ಜನಿಸಿದ್ದರಿಂದ ಬಹಳ ಬೇಗ ಅಧಿಕಾರ ಪ್ರಾಪ್ತಿಯಾಯಿತು. ಪದವಿ ಓದಿದ ಕೂಡಲೇ ಆಡಳಿತಾತ್ಮಕ ವಿಚಾರಗಳಲ್ಲಿ ಅವಕಾಶ ಪಡೆದರು. 24ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಅಡಿ ಇಟ್ಟರು. ಇವರ ತಂದೆ ಸಲ್ಮಾನ್ ಆಗ ರಿಯಾಧ್ ಪ್ರಾಂತ್ಯದ ಗವರ್ನರ್ ಆಗಿದ್ದರು. ಆಗ ರಿಯಾಧ್‌ನ ಆಡಳಿತ ವ್ಯವಹಾರದ ಆಯಕಟ್ಟಿನ ಜಾಗದಲ್ಲಿ ಎಂಬಿಎಸ್ ಇದ್ದರು.

2015ರಲ್ಲಿ ಅಂದಿನ ದೊರೆ ಅಬ್ದುಲ್ಲಾ ಸಾವನ್ನಪ್ಪಿದ ಬಳಿಕ ಸಲ್ಮಾನ್ ಮಹಾರಾಜರಾದರು. ಆಗಲೇ ಮೊಹಮ್ಮದ್ ಬಿನ್ ಸಲ್ಮಾನ್ ರಕ್ಷಣಾ ಸಚಿವ ಸ್ಥಾನ ಪಡೆದರು.

ಆಡಳಿತ ವಿಚಾರದಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. ಆರ್ಥಿಕವಾಗಿ ಅವರದ್ದು ಉದಾರ ನೀತಿ ಎನಿಸಿದೆ. ಆದರೆ ರಾಜಕೀಯವಾಗಿ ಎಂಬಿಎಸ್ ಬಹಳ ನಿರ್ದಯಿ ಎಂದೂ ಬಣ್ಣಿಸಲಾಗುತ್ತದೆ. ಭಾರತದ ಬಗ್ಗೆ ಎಂಬಿಎಸ್ ತುಸು ಮೃದುಧೋರಣೆ ಹೊಂದಿದ್ದಾರೆ ಎಂಬ ಮಾತೂ ಇದೆ.

(ಒನ್ಇಂಡಿಯಾ ಸುದ್ದಿ)

English summary
Saudi Arabia's King Salman has made the crown prince Mohammed bin Salman as new Prime Minister, the post usually will be with King himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X