ಪಾಕ್ ಇತಿಹಾಸದಲ್ಲೇ ಅತಿ ದೊಡ್ಡ ವಿದೇಶಿ ಹೂಡಿಕೆ ಮಾಡಲಿದೆ ಸೌದಿ ಅರೇಬಿಯಾ

ಇಸ್ಲಾಮಾಬಾದ್, ಡಿಸೆಂಬರ್ 13 : ಪಾಕಿಸ್ತಾನದ ಇತಿಹಾಸದಲ್ಲೇ ಅತಿ ದೊಡ್ಡ ವಿದೇಶ ಹೂಡಿಕೆಯನ್ನು ಮಾಡುವುದಾಗಿ ಸೌದಿ ಅರೇಬಿಯಾ ಭರವಸೆ ನೀಡಿದೆ. ದೇಶಕ್ಕೆ ಬರಲಿರುವ ಆ ಹೂಡಿಕೆಯು ಅತಿ ದೊಡ್ಡ ಪ್ಯಾಕೇಜ್ ಆಗಿರಲಿದೆ ಎಂದು ಗುರುವಾರ ಪಾಕಿಸ್ತಾನದ ಸಚಿವರು ಮಾಹಿತಿ ನೀಡಿದ್ದಾರೆ.

ಇಸ್ಲಾಮಾಬಾದ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ಅಸದ್ ಉಮರ್ ಮಾತನಾಡಿ, ಸದ್ಯದಲ್ಲೇ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿರುವುದಾಗಿ ಡಾನ್ ನ್ಯೂಸ್ ವರದಿ ಮಾಡಿದೆ.

ಬಾಲ್ ನಮ್ಮ ಅಂಗಳದಲ್ಲಿದೆ. ಮುಂದಿನ ವಾರ ಸಂಪುಟದ ಒಪ್ಪಿಗೆ ಪಡೆಯಲು ಇದರ ಪ್ರಸ್ತಾವ ಮಾಡಲಾಗುವುದು. ಆ ನಂತರ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

Saudi Arabia to make biggest foreign investment in Pakistan history

ಶೀಘ್ರವಾಗಿ ನಿರ್ಧಾರ ಕೈಗೊಳ್ಳುವಂತೆ ಇತರರ ಮೂಲಕ ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಂದ ನಿರಂತರವಾಗಿ ಸಂದೇಶಗಳು ಬರುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.

ಪಾಕಿಸ್ತಾನದ ಆರ್ಥಿಕ ಸ್ಥಿತಿ ಬಹಳ ಹೀನಾಯವಾಗಿದ್ದು, ವಿವಿಧ ದೇಶಗಳ ಬಳಿ ನೆರವು ಕೋರಿ ಪ್ರಧಾನಿ ಇಮ್ರಾನ್ ಖಾನ್ ತೆರಳಿದ್ದಾರೆ. ಆ ಪೈಕಿ ಸೌದಿ ಅರೇಬಿಯಾ ಹಾಗೂ ಚೀನಾ ನೆರವಿನ ಭರವಸೆ ನೀಡಿದ್ದವು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಬಳಿ ಕೋರಿದ್ದ ನೆರವಿಗೆ ನಕಾರಾತ್ಮಕವಾದ ಉತ್ತರ ದೊರೆತಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+