ಸೌದಿ ಅರೇಬಿಯಾದಲ್ಲಿ 1,200 ವರ್ಷಗಳ ಹಳೆಯ ಚಿನ್ನದ ಆಭರಣಗಳ ಭಾರಿ ನಿಧಿ ಪತ್ತೆ!

Gold: ಸೌದಿ ಅರೇಬಿಯಾದ ಅಲ್-ಖಾಸಿಮ್ ಪ್ರಾಂತ್ಯದ ಪುರಾತನ ತಾಣವಾದ ದಿರಿಯಾ ಎಂಬಲ್ಲಿ ಇತ್ತೀಚೆಗೆ ಉತ್ಖನನ ನಡೆದಿದೆ. ಈ ವೇಳೆ ಮಧ್ಯಪ್ರಾಚ್ಯದ ಪುರಾತತ್ವ ಇತಿಹಾಸದಲ್ಲೇ ಅತ್ಯಂತ ಅದ್ಭುತವಾದ ಆವಿಷ್ಕಾರವೊಂದು ನಡೆದಿದೆ. ಸುಮಾರು 1,200 ವರ್ಷಗಳಿಗಿಂತಲೂ ಹಳೆಯದಾದ ಮಣ್ಣಿನ ಮಡಕೆಯಲ್ಲಿ ಬಚ್ಚಿಡಲಾಗಿದ್ದ 100ಕ್ಕೂ ಹೆಚ್ಚು ಚಿನ್ನ, ಬೆಳ್ಳಿ ಹಾಗೂ ಅಮೂಲ್ಯ ರತ್ನಳಿಂದ ಕೂಡಿದ ಆಭರಣಗಳಿಂದ ತುಂಬಿದ ನಿಧಿಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಸೌದಿ ಪರಂಪರೆ ಆಯೋಗದ ಪುರಾತತ್ವ ವಿಜ್ಞಾನಿಗಳ ತಂಡವು ಈ ನಿಧಿಯನ್ನು ಪತ್ತೆಹಚ್ಚಿದೆ. ಇದಕ್ಕೆ 'ದಿರಿಯಾ ನಿಧಿ' (Diriyah Treasure) ಎಂದು ಹೆಸರಿಡಲಾಗಿದೆ. ಈ ಆಭರಣಗಳು ಇಸ್ಲಾಮಿಕ್ ಇತಿಹಾಸದ ಆರಂಭಿಕ 'ಅಬ್ಬಾಸಿಡ್' (Abbasid) ರಾಜವಂಶದ ಕಾಲಕ್ಕೆ ಸೇರಿವೆ ಎಂದು ಸಂಶೋಧಕರು ಧೃಢಪಡಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

Saudi Arabia 1 200-Year-Old Diriyah Treasure Unearthed Rare Abbasid Gold and Gem Jewelry Found

ಮಡಕೆಯೊಳಗಿದ್ದ ನಿಧಿಯಲ್ಲಿ ಏನಿತ್ತು?

ದಿರಿಯಾ ಪುರಾತತ್ವ ತಾಣದಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಉತ್ಖನನ ನಡೆಸುತ್ತಿರುವ ತಂಡಕ್ಕೆ ಈ ಬಾರಿ ಮಣ್ಣಿನಡಿಯಲ್ಲಿ ಹೂತಿಟ್ಟಿದ್ದ ಮಡಕೆ (Ceramic jar) ಸಿಕ್ಕಿದೆ. ಅದರೊಳಗೆ ಒಂದಕ್ಕೊಂದು ಹೊಂದಿಕೆಯಾಗುವ ವಿಶಿಷ್ಟ ವಿನ್ಯಾಸದ ಆಭರಣಗಳ ಸೆಟ್ ಪತ್ತೆಯಾಗಿದೆ. ಇವುಗಳಲ್ಲಿ ಹೂವಿನ ಆಕಾರದ ಚಿನ್ನದ ಸರಗಳು, ತಟ್ಟೆಗಳು, ವಿವಿಧ ಬಣ್ಣಗಳ ಮಣಿಗಳು, ಮಧ್ಯದಲ್ಲಿ ಸುಂದರವಾದ ಬಣ್ಣದ ರತ್ನಗಳನ್ನು ಹೊಂದಿರುವ ದೊಡ್ಡ ವೃತ್ತಾಕಾರದ ಆಭರಣಗಳು ಸೇರಿವೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಅಂದಿನ ಕಾಲದಲ್ಲೇ ಚಿನ್ನವನ್ನು ಕೈಯಿಂದ ಬಡಿದು ಆಕಾರ ಕೊಡುವುದು ಮತ್ತು ರತ್ನಗಳನ್ನು ಕೆತ್ತುವ ಲೋಹದ ತಂತ್ರಜ್ಞಾನವನ್ನು ಬಳಸಿ ಈ ಆಭರಣಗಳನ್ನು ತಯಾರಿಸಲಾಗಿದೆ. ಈ ತಾಣದಲ್ಲಿ ಕೇವಲ ನಿಧಿಯಷ್ಟೇ ಅಲ್ಲದೆ ವಸತಿ ಕಟ್ಟಡಗಳ ಗೋಡೆಗಳು, ಸಿಮೆಂಟ್‌ನಿಂದ ನಿರ್ಮಿಸಿದ ನೀರಿನ ತೊಟ್ಟಿಗಳು, ಮಣ್ಣಿನ ಪಾತ್ರೆಗಳು ಹಾಗೂ ಗಾಜಿನ ಉಪಕರಣಗಳೂ ಪತ್ತೆಯಾಗಿವೆ. ಇದು ಕೇವಲ ಪ್ರವಾಸಿಗರು ತಂಗುವ ತಾತ್ಕಾಲಿಕ ಶಿಬಿರವಾಗಿರದೆ, ಒಂದು ಖಾಯಂ ವಸಾಹತಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ.

ಇಸ್ಲಾಮಿಕ್ ಸ್ವರ್ಣಯುಗದ ಇತಿಹಾಸ

ಈ ಆಭರಣಗಳು ಕ್ರಿ.ಶ 750ರಲ್ಲಿ ಅಧಿಕಾರಕ್ಕೆ ಬಂದು, ಕ್ರಿ.ಶ 1,258ರವರೆಗೆ ಇಸ್ಲಾಮಿಕ್ ಜಗತ್ತನ್ನು ಆಳಿದ ಅಬ್ಬಾಸಿಡ್ ಖಲೀಫರ ಕಾಲದ್ದಾಗಿವೆ. ಇತಿಹಾಸಕಾರರು ಈ ಅವಧಿಯನ್ನು ಇಸ್ಲಾಮಿಕ್ ಸ್ವರ್ಣಯುಗ ಎಂದು ಕರೆಯುತ್ತಾರೆ. ವಿಜ್ಞಾನ, ಸಾಹಿತ್ಯ ಮತ್ತು ಕಲೆಗೆ ಈ ಯುಗದಲ್ಲಿ ಅಪಾರ ಪ್ರೋತ್ಸಾಹ ಸಿಕ್ಕಿತ್ತು. ಅಬ್ಬಾಸಿಡ್ ಯುಗದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪ್ರಸ್ತುತ ಜಗತ್ತಿನಲ್ಲಿ ಉಳಿದಿರುವುದು ತೀರಾ ವಿರಳ. ಏಕೆಂದರೆ ಕಾಲಾನಂತರದಲ್ಲಿ ಇವುಗಳನ್ನು ಕರಗಿಸಿ ಬೇರೆ ರೂಪಕ್ಕೆ ಬದಲಾಯಿಸಲಾಗುತ್ತಿತ್ತು. ಹೀಗಾಗಿ ದಿರಿಯಾದಲ್ಲಿ ಸಿಕ್ಕಿರುವ ಆಭರಣಗಳು ಇತಿಹಾಸದ ದೃಷ್ಟಿಯಿಂದ ಅತ್ಯಂತ ಅಮೂಲ್ಯವಾಗಿವೆ.

ಹಜ್ ಪ್ರವಾಸಿಗನ ನಿಧಿಯೇ? ಸೃಷ್ಟಿಯಾದ ಹೊಸ ರಹಸ್ಯ

ಈ ನಿಧಿ ಪತ್ತೆಯಾದ ಸ್ಥಳವು ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದುದಾಗಿದೆ. ದಿರಿಯಾ ಪ್ರದೇಶವು ಇರಾಕ್‌ನ ಬಸ್ರಾ ನಗರದಿಂದ ಸೌದಿ ಅರೇಬಿಯಾದ ಮೆಕ್ಕಾ ನಗರಕ್ಕೆ ಸಂಪರ್ಕ ಕಲ್ಪಿಸುವ ಐತಿಹಾಸಿಕ 'ಹಜ್ ಯಾತ್ರೆಯ' ಮುಖ್ಯ ರಸ್ತೆಯ ಪಕ್ಕದಲ್ಲಿದೆ. ರೇಡಿಯೋಕಾರ್ಬನ್ ತಪಾಸಣೆಯ ಪ್ರಕಾರ, ಈ ಪ್ರದೇಶವು ಕ್ರಿ.ಶ 743 ಮತ್ತು 753 ರ ಅವಧಿಯಲ್ಲಿ ಸಕ್ರಿಯವಾಗಿತ್ತು.

ಇಷ್ಟು ಬೆಲೆಬಾಳುವ ಆಭರಣಗಳನ್ನು ಮಡಕೆಯಲ್ಲಿಟ್ಟು ಮಣ್ಣಿನಡಿಯಲ್ಲಿ ಬಚ್ಚಿಟ್ಟು, ನಂತರ ಅದನ್ನು ತೆಗೆದುಕೊಳ್ಳದೇ ಹಾಗೇ ಬಿಟ್ಟುಹೋಗಲು ಕಾರಣವೇನು? ಎಂಬುದು ಈಗ ಪುರಾತತ್ವ ಇಲಾಖೆಗೆ ದೊಡ್ಡ ರಹಸ್ಯವಾಗಿ ಉಳಿದಿದೆ. ಪ್ರಮುಖ ಮಾಹಿತಿಗಳ ಪ್ರಕಾರ, ಅಂದಿನ ಕಾಲದಲ್ಲಿ ಹಜ್ ಯಾತ್ರೆಗೆ ಹೋಗುವ ಪ್ರವಾಸಿಗರು ದರೋಡೆಕೋರರ ಭಯದಿಂದ ತಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಸುರಕ್ಷಿತ ಜಾಗದಲ್ಲಿ ಹೂತಿಡುತ್ತಿದ್ದರು.

ಮರಳಿ ಬರುವಾಗ ಅದನ್ನು ತೆಗೆದುಕೊಂಡು ಹೋಗುವ ಪ್ಲಾನ್ ಇರುತ್ತಿತ್ತು. ಆದರೆ ಈ ಆಭರಣಗಳ ಮಾಲೀಕ ಬಹುಶಃ ದಾರಿಯಲ್ಲೇ ಮರಣ ಹೊಂದಿರಬಹುದು ಅಥವಾ ಯಾವುದೇ ಕಾರಣಕ್ಕೆ ಮರಳಿ ಬರಲಾಗದೆ ಆ ನಿಧಿ ಹಾಗೇ ಉಳಿದಿರಬಹುದು ಎಂದು ಊಹಿಸಲಾಗಿದೆ. ಮತ್ತೊಂದು ಮಾಹಿತಿ ಪ್ರಕಾರ, ಸ್ಥಳೀಯವಾಗಿ ನಡೆದ ದಂಗೆಯ ಸಮಯದಲ್ಲಿ ಶ್ರೀಮಂತ ನಿವಾಸಿಯೊಬ್ಬರು ಇದನ್ನು ಬಚ್ಚಿಟ್ಟಿರಬಹುದು ಎನ್ನಲಾಗಿದೆ. ಪ್ರಸ್ತುತ ಈ ಅಪರೂಪದ ಆಭರಣಗಳನ್ನು ಸೌದಿಯ ಸಂಶೋಧನಾ ಕೇಂದ್ರದಲ್ಲಿ ಸಂರಕ್ಷಿಸಲಾಗಿದ್ದು, ಅಂದಿನ ಕಾಲದ ಜಾಗತಿಕ ವ್ಯಾಪಾರ ಮತ್ತು ಕಲಾ ನೈಪುಣ್ಯತೆಯನ್ನು ಅರ್ಥಮಾಡಿಕೊಳ್ಳಲು ಇದು ವಿಜ್ಞಾನಿಗಳಿಗೆ ದೊಡ್ಡ ಸಹಾಯ ಆದಂತಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+