Vladimir Putin: ವ್ಲಾಡಿಮಿರ್ ಪುಟಿನ್‌ಗೆ ಹೃದಯಾಘಾತ- ಮಗುಚಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದ ರಷ್ಯಾ ಅಧ್ಯಕ್ಷ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಅವರು ತಮ್ಮ ಮಲಗುವ ಕೋಣೆಯ ನೆಲದ ಮೇಲೆ ಮಗುಚಿ ಬಿದ್ದಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್‌ನ ವರದಿ ತಿಳಿಸಿದೆ.

ಟೆಲಿಗ್ರಾಮ್ ಚಾನೆಲ್‌ನ ಹೇಳಿಕೆಯ ಪ್ರಕಾರ, ವ್ಲಾಡಿಮಿರ್‌ ಪುಟಿನ್‌ ಅವರು ರಾತ್ರಿ 9 ಗಂಟೆಯ ಸುಮಾರಿಗೆ ಮಲಗುವ ಕೋಣೆಯ ನೆಲದ ಮೇಲೆ ಮಲಗಿರುವುದನ್ನು ಭದ್ರತಾ ಅಧಿಕಾರಿಗಳು ಗಮನಿಸಿದ್ದಾರೆ.

Russian President Vladimir Putin suffers heart attack, found lying on floor

ವ್ಲಾಡಿಮಿರ್‌ ಪುಟಿನ್‌ ಅವರು ಟೇಬಲ್‌ ಮೇಲಿದ್ದ ಆಹಾರವನ್ನು ತಿಂದಿದ್ದಾರೆ. ಬಳಿಕ ಅವರು ಟೇಬಲ್‌ ಅನ್ನು ಕೈಯಿಂದ ಹೊಡೆದಿದ್ದಾರೆ. ಆ ನಂತರ ಅವರು ನೆಲದ ಮೇಲೆ ಮಗುಚಿ ಬಿದ್ದಿದ್ದಾರೆ. ಇದು ಶಬ್ದಕ್ಕೆ ಕಾರಣವಾಯಿತು. ಶಬ್ದವನ್ನು ಕೇಳಿದ ಬಳಿಕ ಭದ್ರತಾ ಸಿಬ್ಬಂದಿ ಒಳಗೆ ಹೋದರು ಎಂದು ಮಿರರ್‌ ಮಾಧ್ಯಮ ವರದಿ ಮಾಡಿದೆ.

ನೆಲದ ಮೇಲೆ ಮಲಗಿರುವಾಗ ಪುಟಿನ್ ಅವರು ಕಣ್ಣುಗಳನ್ನು ತಿರುಗಿಸುತ್ತಿದ್ದರು ಎಂದು ವರದಿಯಾಗಿದೆ.

ಪುಟಿನ್‌ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಪಕ್ಕದ ಕೊಠಡಿಯೊಂದರಲ್ಲಿದ್ದ ವೈದ್ಯರನ್ನು ತಕ್ಷಣವೇ ಕರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷವಾದ ಸುಸಜ್ಜಿತ ಕೋಣೆಗೆ ರಷ್ಯಾದ ಅಧ್ಯಕ್ಷರನ್ನು ತಕ್ಷಣವೇ ಸ್ಥಳಾಂತರಿಸಲಾಯಿತು. ಅಲ್ಲಿನ ವೈದ್ಯರು ಪುಟಿನ್‌ ಅವರನ್ನು ಅಧಿಕೃತ ನಿವಾಸದೊಳಗೆ ಇರುವ ವಿಶೇಷ ತೀವ್ರ ನಿಗಾ ಘಟಕಕ್ಕೆ ಕರೆದೊಯ್ದುರು ಎಂದು ವರದಿಯಾಗಿದೆ.

Russian President Vladimir Putin suffers heart attack, found lying on floor

'ಸಮಯಕ್ಕೆ ಸರಿಯಾಗಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಆ ಬಳಿಕ ಪುಟಿನ್‌ಗೆ ಪ್ರಜ್ಞೆ ಮರಳಿ ಬಂದಿತು' ಎಂದು ಮಿರರ್‌ ಚಾನೆಲ್ ವರದಿ ಮಾಡಿದೆ.

ಪುಟಿನ್ ಅವರ ಆರೋಗ್ಯದ ಕುರಿತ ಯಾವುದೇ ಹೇಳಿಕೆಯನ್ನು ಕ್ರೆಮ್ಲಿನ್ ನೀಡಿಲ್ಲ.

'ಪುಟಿನ್‌ ಅವರ ಎಲ್ಲಾ ಅಧಿಕೃತ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಪುಟಿನ್‌ ಅವರು ಮಗುಚಿ ಬಿದ್ದ ಬಳಿಕ ಹಲವಾರು ಜನರು ದೂರವಾಣಿ ಮೂಲಕ ಪರಸ್ಪರ ಸಂಪರ್ಕಿಸಿದರು. ಮುಂಬರುವ ದಿನಗಳಲ್ಲಿ ಪುಟಿನ್‌ ಅವರಿಗೆ ಗಂಭೀರ ಸಮಸ್ಯೆಗಳು ಎದುರಾದರೆ, ಯಾವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಮಾಲೋಚನೆ ಮಾಡಲಾಯಿತು' ಎಂದು ಮಿರರ್ ಮಾಧ್ಯಮ ವರದಿ ಮಾಡಿದೆ.

ಕಳೆದ ವರ್ಷ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಪುಟಿನ್ ಅವರ ಆರೋಗ್ಯವು ಹದಗೆಟ್ಟಿರುವ ಬಗ್ಗೆ ಹಲವಾರು ವರದಿಗಳು ಪ್ರಕಟಗೊಂಡಿವೆ. ಪುಟಿನ್‌ ಅವರಿಗೆ ಕ್ಯಾನ್ಸರ್ ಆಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಅವರಿಗೆ ಪಾರ್ಕಿನ್ಸನ್ ಕಾಯಿಲೆ ಇದೆ ಎಂದು ವರದಿಗಳು ಪ್ರಕಟಗೊಂಡಿದ್ದವು. ಆದರೆ, ರಷ್ಯಾದ ನಾಯಕ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯ ಉತ್ತಮವಾಗಿದೆ ಎಂದು ಕ್ರೆಮ್ಲಿನ್ ಪದೇ ಪದೇ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+