Russia & Ukraine: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್...
ಭಾರತ & ರಷ್ಯಾ ನಡುವೆ ಮಹತ್ವದ ಸಂಬಂಧ ಇದೆ, ಎರಡೂ ದೇಶಗಳು ಹತ್ತಿರ ಹತ್ತಿರ ಸಾವಿರ ವರ್ಷಗಳ ಸಂಬಂಧ ಇದೆ. ಇಂತಹ ಸಂಬಂಧ ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದು, ಭಾರತ ಇದೀಗ ರಷ್ಯಾ ದೇಶಕ್ಕೆ ಇನ್ನಷ್ಟು ಹತ್ತಿರವಾಗಿದೆ. ಅದರಲ್ಲೂ ಉಕ್ರೇನ್ ವಿರುದ್ಧವೇ ಯುದ್ಧ ಸಾರಿದ್ದ ರಷ್ಯಾಗೆ ಸಂಕಷ್ಟ ಎದುರಾಗಿರುವ ಸಮಯದಲ್ಲಿ ಭಾರತ ಸಾಕಷ್ಟು ಸಹಾಯ ಮಾಡಿದೆ. ಹೀಗಿದ್ದಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
ಪ್ರಧಾನಿ ಮೋದಿ ಅವರ ಬಗ್ಗೆ ಈ ಹಿಂದೆ ಕೂಡ ಹಲವು ಬಾರಿ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಹೊಗಳಿಕೆಯ ಮಾತುಗಳನ್ನ ಆಡಿದ್ದಾರೆ. ಅಲ್ಲದೆ ಭಾರತದ & ರಷ್ಯಾದ ನಡುವೆ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ? ಎಂಬುದನ್ನ ಕೂಡ ಪದೇ ಪದೇ ಬಿಡಿಸಿ ಹೇಳಿದ್ದಾರೆ ವ್ಲಾದಿಮಿರ್ ಪುಟಿನ್ ಅವರು. ಹೀಗಿದ್ದಾಗ ಮತ್ತೊಮ್ಮೆ ಪ್ರಧಾನಿ ಮೋದಿ ಅವರ ನಿರ್ಧಾರಗಳ ಬಗ್ಗೆ & ದೂರ ದೃಷ್ಟಿ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್, ಏನು ಹೇಳಿದ್ದಾರೆ ಅಂದ್ರೆ...

ಪ್ರಧಾನಿ ಮೋದಿ ಗ್ರೇಟ್ ಎಂದ ಪುಟಿನ್!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ನಿಲ್ಲಿಸಲು ಯಾವ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನ ವಿವರಿಸಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನ ಗ್ರೇಟ್ ಎಂದಿದ್ದಾರೆ ವ್ಲಾದಿಮಿರ್ ಪುಟಿನ್ ಅವರು.
ಅಂದಹಾಗೆ ಉಕ್ರೇನ್ ಮತ್ತು ರಷ್ಯಾ ಯುದ್ಧ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಕಾಲ್ ಮಾಡಿದಾಗ ಪ್ರತಿಬಾರಿ ಕೂಡ ಯುದ್ಧದ ಬಗ್ಗೆ ಮಾಹಿತಿ ಪಡೆಯುತ್ತಾರೆ, ಹಾಗೇ ಯುದ್ಧ ನಿಲ್ಲಿಸಿ ಎಂದು ಶಾಂತಿ ಮಂತ್ರ ಜಪಿಸುತ್ತಾರೆ ಅಂತಾ ಪುಟಿನ್ ಹೇಳಿದ್ದಾರೆ.
ರಷ್ಯಾಗೆ ಹೋಗಲಿದ್ದಾರೆ ಪ್ರಧಾನಿ ಮೋದಿ
ಬ್ರಿಕ್ಸ್ ಸಮ್ಮೇಳನದ ಹಿನ್ನೆಲೆಯಲ್ಲಿ ರಷ್ಯಾ ಮಾಧ್ಯಮಗಳ ಎದುರು ಸುದ್ದಿಗೋಷ್ಠಿ ನಡೆಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಎಲ್ಲಾ ಮಾಹಿತಿ ಹಂಚಿಕೊಂಡರು. ಅಲ್ಲದೆ ಇದೇ ವಿಚಾರವಾಗಿ ಭಾರತದ ನಡೆ ಬಗ್ಗೆ ಶ್ಲಾಘನೆ ಕೂಡ ವ್ಯಕ್ತಪಡಿಸಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್.
ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಷ್ಯಾಗೆ ಭೇಟಿಯನ್ನ ನೀಡುತ್ತಿದ್ದು, ಅಕ್ಟೋಬರ್ 22 ಮತ್ತು 23ಕ್ಕೆ ಪ್ರಧಾನಿ ಮೋದಿ ಅವರು ರಷ್ಯಾ ರಾಜಧಾನಿ ಮಾಸ್ಕೋಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಮೂಲಕ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸುವ ಜೊತೆಗೆ ಪುಟಿನ್ ಅವರ ಜೊತೆಗೂ ಮಾತುಕತೆ ನಡೆಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು. ಇದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲೂ ಉಕ್ರೇನ್ & ರಷ್ಯಾ ಯುದ್ಧದ ಸಮಯದಲ್ಲಿ ಈ ಬೆಳವಣಿಗೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ.












Click it and Unblock the Notifications