ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ರಷ್ಯಾದ ಉದ್ಯಮಿಯ ನಿಗೂಢ ಸಾವು

|
Google Oneindia Kannada News

ರಷ್ಯಾವು ಉಕ್ರೇನ್‌ ಮೇಲೆ ದಾಳಿ ಆರಂಭಿಸಿ ಕೆಲವೇ ಕೆಲವು ದಿನಗಳಲ್ಲಿ ಉಕ್ರೇನ್ ಮೂಲದ ರಷ್ಯಾ ಉದ್ಯಮಿಯೊಬ್ಬರು ನಿಗೂಢ ರೀತಿಯಲ್ಲಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಉದ್ಯಮಿ ಮಿಖಾಯಿಲ್ ವ್ಯಾಟ್‌ಫೋರ್ಡ್‌ ಬ್ರಿಟನ್ನಿನ ಅತ್ಯಂತ ಪ್ರತಿಷ್ಠಿತ ಎಸ್ಟೇಟ್‌ ಒಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸರ್ರೆಯ ವರ್ಜೀನಿಯಾ ವಾಟರ್‌ನಲ್ಲಿರುವ ವೆಂಟ್‌ವರ್ತ್ ಎಸ್ಟೇಟ್‌ನಲ್ಲಿ ಕೆಲಸ ಮಾಡುವವರೊಬ್ಬರು ಇವರ ಮೃತದೇಹವನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಉಕ್ರೇನ್‌ ಯುದ್ಧ: ಕೀವ್‌ ರೈಲು ನಿಲ್ದಾಣ ಸ್ಪೋಟಿಸಿದ ರಷ್ಯಾಉಕ್ರೇನ್‌ ಯುದ್ಧ: ಕೀವ್‌ ರೈಲು ನಿಲ್ದಾಣ ಸ್ಪೋಟಿಸಿದ ರಷ್ಯಾ

ವ್ಯಾಟ್‌ಫೋರ್ಡ್ ಅವರಿಗೆ 66 ವರ್ಷ ವಯಸ್ಸಾಗಿದ್ದು, ಅವರಿಗೆ 3 ಮಕ್ಕಳಿದ್ದಾರೆ, ಉಕ್ರೇನ್‌ನಲ್ಲಿರುವ ತೈಲ ಸಂಸ್ಕರಣಾಗಾರಗಳಿಂದ ಸಂಪತ್ತುಗಳಿಸಿ ಬಳಿಕ ಬ್ರಿಟನ್‌ಗೆ ತೆರಳಿ ತಮ್ಮ ಉದ್ಯಮವನ್ನು ಪ್ರಾರಂಭಿಸಿದ್ದರು.

Russian Oil Tycoon Found Dead In UK Mansion

ಉದ್ಯಮಿಯ ಹಿಟ್‌ಲಿಸ್ಟ್‌ನಲ್ಲಿ ವ್ಯಾಟ್‌ಫೋರ್ಡ್ ಇದ್ದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ, ಹಾಗೆಯೇ ಬ್ರಿಟನ್‌ನಲ್ಲಿ ಹಲವು ಮಂದಿಯನ್ನು ಮಾಸ್ಕೋ ಕೊಂದಿದೆ ಎಂದು ಹೇಳಲಾಗಿದೆ.

ವ್ಯಾಟ್‌ಫೋರ್ಡ್ ಅವರ ಸ್ನೇಹಿತರೊಬ್ಬರು ಹೇಳುವ ಪ್ರಕಾರ, ಉಕ್ರೇನ್‌ನಲ್ಲಿರುವ ಪರಿಸ್ಥಿತಿಯು ಇವರ ಮೇಲೆ ಪರಿಣಾಮ ಬೀರಿರಬಹುದು ಎಂದು ಅಂದಾಜಿಸಲಾಗಿದೆ, ಅವರ ಸಾವು ಹಾಗೂ ಉಕ್ರೇನ್ ಮೇಲಿನ ಆಕ್ರಮಣ ಖಂಡಿತವಾಗಿಯೂ ಕಾಕತಾಳೀಯವಲ್ಲ ಎನ್ನಲಾಗಿದೆ.

ಇನ್ನೊಬ್ಬ ಸ್ನೇಹಿತರು ಹೇಳುವ ಪ್ರಕಾರ, ವ್ಯಾಟ್‌ಫೋರ್ಡ್ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಯುಕೆಯಲ್ಲಿ ರಷ್ಯಾದ ಪ್ರಜೆಗಳ ಸಾವಿನ ಕುರಿತು ಅನುಮಾನಗಳು ಇರುವುದು ಸಹಜ, ವ್ಯಾಟ್‌ಫೋರ್ಡ್ 2000ರಲ್ಲಿ ಇಲ್ಲಿಗೆ ಬಂದ ಬಳಿಕ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಅವರು ಎರಡನೇ ಪತ್ನಿ ಜೇನ್, ಇಬ್ಬರು ಮಕ್ಕಳು ಹಾಗೂ ಮೊದಲ ಪತ್ನಿಯ ಓರ್ವ ಮಗನ ಜತೆಗೆ ವೆಂಟ್‌ವರ್ತ್ ಎಸ್ಟೇಟ್‌ನಲ್ಲಿ ವಾಸಿಸುತ್ತಿದ್ದರು. ಅವರು 2015 ರಲ್ಲಿ ತಮ್ಮ ಮನೆಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಸಂಡೇ ಟೈಮ್ಸ್ ಪ್ರಾಪರ್ಟಿ ಆರ್ಟಿಕಲ್‌ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ಡಾರ್ಮಿ ಹೌಸ್‌ಗೆ ತೆರಳಿದ್ದರು.

ವಿಲ್ಲಾವನ್ನು ಅಪಾರ್ಟ್‌ಮೆಂಟ್‌ಗಳಾಗಿ ವಿಂಗಡಿಸಲಾಗಿದೆ. ಅವರ ತಾಯಿ ಅಲ್ಲಿಯೇ ವಾಸಿಸುತ್ತಿದ್ದರು, ಮಗ ಮೃತಪಟ್ಟಾಗ ಅಲ್ಲಿಯೇ ಇದ್ದರು. ಮಿಖಾಯಿಲ್ ಅವರಿಗೆ ಯಾವುದೇ ಕೊರತೆಯಿರಲಿಲ್ಲ, ಪತ್ನಿ, ಮಕ್ಕಳು, ಕನಸಿನ ಮನೆಯೊಂದಿಗೆ ನೆಮ್ಮದಿಯಾಗಿದ್ದರು.

ವ್ಯಾಟ್‌ಫೋರ್ಡ್ ಸಾವಿನ ಬಳಿಕ ಪತ್ನಿ ಜೇನ್ ಅವರೊಂದಿಗಿನ ಫೋಟೊವೊಂದನ್ನು ಹಂಚಿಕೊಂಡಿದ್ದರು. ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್‌ನಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಯುದ್ಧ 8ನೇ ದಿನಕ್ಕೆ ಕಾಲಿಟ್ಟಿದೆ. ದಾಳಿ ತೀವ್ರಗೊಳ್ಳುತ್ತಿದೆ. ಉಕ್ರೇನ್​ರಾಜಧಾನಿ ಕೀವ್ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸುವ ಸೂಚನೆ ಸಿಕ್ಕಿದ ಬೆನ್ನಲ್ಲೇ ಅಲ್ಲಿನ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಲಾಗಿದೆ.

'ಕೀವ್​ನಲ್ಲಿ ವಾಯುದಾಳಿ ಎಚ್ಚರಿಕೆ. ನಿವಾಸಿಗಳು ಹತ್ತಿರದ ಸುರಕ್ಷಿತ ಆಶ್ರಯಗಳಿಗೆ ತೆರಳಬೇಕು' ಎಂದು ದಿ ಕೀವ್​ ಇಂಡಿಪೆಂಡೆಂಟ್ ಟ್ವೀಟ್ ಮಾಡಿದೆ. ಕೀವ್ ಮಾತ್ರವಲ್ಲದೆ ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್, ಚೆರ್ನಿಹಿವ್ ಮುಂತಾದ ನಗರಗಳಲ್ಲಿ ದಾಳಿ ನಡೆಯಬಹುದೆಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಕೀವ್, ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್, ಚೆರ್ನಿಹಿವ್ ಮತ್ತು ಚೆರ್ನಿಹಿವ್ ಒಬ್ಲಾಸ್ಟ್, ವೊಲಿನ್ ಒಬ್ಲಾಸ್ಟ್, ಚೆರ್ಕಾಸಿ ಒಬ್ಲಾಸ್ಟ್, ಕಿರೊವೊಹ್ರಾಡ್ ಒಬ್ಲಾಸ್ಟ್, ಪೋಲ್ಟವಾ ಒಬ್ಲಾಸ್ಟ್, ಒಬ್ಲಾಝ್ಝೆಸ್ಟ್, ಕ್ಮೆಲ್ನಿಟ್ಸ್ಕಿ ನಗರಗಳಲ್ಲಿ ರಷ್ಯಾ ವೈಮಾನಿಕ ದಾಳಿ ನಡೆಸಬಹುದೆಂದು ಮುಂಚಿತವಾಗಿ ತಿಳಿಸಲಾಗಿದೆ.

ಈ ಮಧ್ಯೆ ಉಕ್ರೇನ್‌ನ ಈಶಾನ್ಯ ನಗರ ಸುಮಿಯಲ್ಲಿರುವ ಸುಮಿ ಸ್ಟೇಟ್ ಯೂನಿವರ್ಸಿಟಿಯ ಅಧ್ಯಾಪಕರ ಕಟ್ಟಡದ ಮೇಲೆ ಇಂದು ಬೆಳಗ್ಗೆ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿವೆ ಎಂದು ಸುಮಿ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಡಿಮಿಟ್ರೋ ಝೈವಿಟ್ಸ್ಕಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್​ ಮೇಲೆ ರಷ್ಯಾ ಆಕ್ರಮಣದ ವಿಚಾರವಾಗಿ ವೋಟಿಂಗ್ ನಡೆದಿದೆ. 141 ರಾಷ್ಟ್ರಗಳು ಉಕ್ರೇನ್‌ ಮೇಲಿನ ರಷ್ಯಾ ದಾಳಿಯ ವಿರುದ್ಧ ಮತ ಚಲಾಯಿಸಿದರೆ, ಐದು ರಾಷ್ಟ್ರಗಳು ರಷ್ಯಾ ಪರವಾಗಿ ಮತ ಚಲಾಯಿಸಿವೆ. ಇನ್ನು ಭಾರತ ಸೇರಿ 35 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.

Recommended Video

ಬಿಜೆಪಿ ಬಗ್ಗೆ ಏನೂ ಹೇಳ್ಬೇಡಿ , ಅಟೆನ್ಷನ್ ಸೀಕಿಂಗ್ ಅಷ್ಟೇ ಅವರ ಕೆಲ್ಸ | Oneindia Kannada

English summary
A Russian tycoon Mikhail Watford has been found hanged in his garage at home on one of Britain's most exclusive estates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X