ಉಕ್ರೇನ್‌ನಲ್ಲಿರುವ ಭಾರತದ ಔಷಧ ಕಂಪನಿಯ ಗೋದಾಮಿನ ಮೇಲೆ ರಷ್ಯಾದ ಕ್ಷಿಪಣಿ ದಾಳಿ

ಉಕ್ರೇನ್‌ನ ಭಾರತೀಯ ಔಷಧ ಕಂಪನಿಯ ಗೋದಾಮಿನ ಮೇಲೆ ರಷ್ಯಾದ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಕೈವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ರಷ್ಯಾ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಭಾರತದಲ್ಲಿನ ಉಕ್ರೇನ್‌ನ ರಾಯಭಾರ ಕಚೇರಿ ಆರೋಪ ಮಾಡಿದೆ.

ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ರಷ್ಯಾದ ಕ್ಷಿಪಣಿ ದಾಳಿ ನಡೆಸಿದೆ. ಭಾರತದೊಂದಿಗೆ ವಿಶೇಷ ಸ್ನೇಹವಿದೆ ಎಂದು ಹೇಳಿಕೊಳ್ಳುತ್ತಾ, ರಷ್ಯಾ ಸರ್ಕಾರ ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ, ಮಕ್ಕಳು ಮತ್ತು ವೃದ್ಧರಿಗೆ ಮೀಸಲಾದ ಔಷಧಿಗಳನ್ನು ನಾಶಪಡಿಸುತ್ತದೆ ಎಂದು ಉಕ್ರೇನ್‌ನ ರಾಯಭಾರ ಕಚೇರಿ ಆರೋಪಿಸಿದೆ.

Russian missile strikes indian pharma warehouse ukraine

ಉಕ್ರೇನ್‌ನಲ್ಲಿರುವ ಬ್ರಿಟನ್ ರಾಯಭಾರಿ ಮಾರ್ಟಿನ್ ಹ್ಯಾರಿಸ್ ರಷ್ಯಾದ ದಾಳಿಗಳು ಕೈವ್‌ನಲ್ಲಿರುವ ಪ್ರಮುಖ ಔಷಧ ಕಂಪನಿಯ ಗೋದಾಮನ್ನು ನಾಶಪಡಿಸಿವೆ ಎಂದು ಆರೋಪಿಸಿದ್ದಾರೆ. ರಷ್ಯಾದ ಡ್ರೋನ್‌ಗಳು ದಾಳಿ ನಡೆಸಿವೆ, ಕ್ಷಿಪಣಿಯಲ್ಲ ಎಂದು ಮಾರ್ಟಿನ್ ಸ್ಪಷ್ಟನೆ ನೀಡಿದ್ದಾರೆ. ಗೋದಾಮು ಭಾರತೀಯ ಔಷಧ ಕಂಪನಿಗೆ ಸೇರಿದೆಯೇ ಇಲ್ಲವೇ ಎನ್ನುವ ಬಗ್ಗೆ ಅವರು ಇನ್ನೂ ಸ್ಪಷ್ಟಪಡಿಸಿಲ್ಲ.

"ಶನಿವಾರ ಬೆಳಿಗ್ಗೆ ರಷ್ಯಾದ ಡ್ರೋನ್‌ಗಳು ಕೈವ್‌ನಲ್ಲಿರುವ ಪ್ರಮುಖ ಔಷಧ ಗೋದಾಮನ್ನು ಸಂಪೂರ್ಣವಾಗಿ ನಾಶಪಡಿಸಿದವು, ವೃದ್ಧರು ಮತ್ತು ಮಕ್ಕಳಿಗೆ ಅಗತ್ಯವಿರುವ ಔಷಧಿಗಳ ದಾಸ್ತಾನುಗಳನ್ನು ಸುಟ್ಟುಹಾಕಿದವು. ಉಕ್ರೇನಿಯನ್ ನಾಗರಿಕರ ವಿರುದ್ಧ ರಷ್ಯಾದ ಭಯೋತ್ಪಾದನಾ ಅಭಿಯಾನ ಮುಂದುವರೆದಿದೆ" ಎಂದು ಮಾರ್ಟಿನ್ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಮುಂಜಾನೆ, ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್ ರಷ್ಯಾದ ಇಂಧನ ಮೂಲಸೌಕರ್ಯದ ಮೇಲೆ ಕಳೆದ ದಿನದಲ್ಲಿ ಐದು ದಾಳಿಗಳನ್ನು ನಡೆಸಿದೆ ಎಂದು ಆರೋಪಿಸಿದೆ, ಅಮರಿಕ ಮಧ್ಯಸ್ಥಿಕೆ ನಡುವೆ ಕದನ ವಿರಾಮವಿದ್ದರೂ ಉಕ್ರೇನ್ ದಾಳಿ ಮಾಡಿದೆ ಎಂದು ಆರೋಪ ಕೇಳಿಬಂದಿದೆ.

ಉಕ್ರೇನ್ ಮತ್ತು ರಷ್ಯಾ ಕಳೆದ ತಿಂಗಳು ಪರಸ್ಪರರ ಇಂಧನ ಸೌಲಭ್ಯಗಳ ಮೇಲಿನ ದಾಳಿಗಳನ್ನು ವಿರಾಮಗೊಳಿಸಲು ಒಪ್ಪಿಕೊಂಡವು, ಆದರೆ ಎರಡೂ ಕಡೆಯಿಂದ ಕದನ ವಿರಾಮ ಉಲ್ಲಂಗೆನಾಯಗಿದೆ ಎಂದು ಆರೋಪಿಸಲಾಗಿದೆ. ಭಾರತವು ಉಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿ ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡಿದ್ದರೂ, ಅದು ಬಹಿರಂಗವಾಗಿ ಯಾವುದೇ ದೇಶಕ್ಕೆ ಬೆಂಬಲ ನೀಡಿಲ್ಲ.

ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ನಂತರ ಭಾರತವು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಖರೀದಿ ಮಾಡುತ್ತಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಕೆಲವು ಯುರೋಪಿಯನ್ ದೇಶಗಳು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಿದ್ದರಿಂದ ರಷ್ಯಾದ ತೈಲವು ಇತರ ಅಂತರರಾಷ್ಟ್ರೀಯ ಮಾನದಂಡಗಳಿಗೆ ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯವಿತ್ತು ಎಂದು ಭಾರತ ಪರಿಸ್ಥಿತಿಯ ಲಾಭ ಪಡೆಯಿತು.

ಭಾರತದ ಪ್ರಮುಖ ತೈಲ ಮೂಲವಾಗಿ ರಷ್ಯಾ ಮುಂದುವರೆದಿದೆ. ಫೆಬ್ರವರಿಯಲ್ಲಿ ಭಾರತ ರಷ್ಯಾದಿಂದ ದಿನಕ್ಕೆ 1.48 ಮಿಲಿಯನ್ ಬ್ಯಾರೆಲ್ (bpd) ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದು, ಜನವರಿಯಲ್ಲಿ 1.67 ಮಿಲಿಯನ್ ಬ್ಯಾರೆಲ್ ಆಮದು ಮಾಡಿಕೊಳ್ಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+