• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರ್ಗರ್ ತಿನ್ನಲು ಹೆಲಿಕಾಪ್ಟರ್ ಬುಕ್ ಮಾಡಿದ ರಷ್ಯಾದ ಮಿಲಿಯನೇರ್: 2 ಲಕ್ಷ ರೂಪಾಯಿ ಖರ್ಚು

|

ಮಾಸ್ಕೊ, ಡಿಸೆಂಬರ್ 04: ರಷ್ಯಾ ಮೂಲದ ಮಿಲಿಯನೇರ್ ತನ್ನ ಗೆಳತಿಯ ಜೊತೆಯಲ್ಲಿ ಬರ್ಗರ್‌ ತಿನ್ನಲು ಹೆಲಿಕಾಪ್ಟರ್ ಬುಕ್‌ ಮಾಡುವ ಮೂಲಕ ಸುದ್ದಿಯಾಗಿದ್ದಾನೆ. 49 ಬ್ರಿಟನ್ ಪೌಂಡ್ ಮೌಲ್ಯದ ಬರ್ಗರ್, ಫ್ರೈಸ್, ಮಿಲ್ಕ್‌ಶೇಕ್‌ಗಾಗಿ ಈತ ಹೆಲಿಕಾಪ್ಟರ್‌ನಲ್ಲಿ 450 ಕಿ.ಮೀ ದೂರ ಸಾಗಿದ್ದು, ಎರಡು ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾನೆ.

ರಷ್ಯಾದ ಸ್ಥಳೀಯ ವಾಹಿನಿ ಪ್ರಕಾರ ರಜಾ ದಿನಗಳನ್ನು ಕಳೆಯುತ್ತಿರುವ 33 ವರ್ಷದ ರಷ್ಯಾದ ಮಿಲಿಯನೇರ್ ವಿಕ್ಟರ್ ಮಾರ್ಟಿನೋವ್, ಒಟ್ಟಾರೆ 450 ಕಿ.ಮೀ ಕಿಲೋಮೀಟರ್ ದೂರದ ಮೆಕ್‌ಡೊನಾಲ್ಡ್ಸ್‌ ಔಟ್‌ಲೇಟ್‌ಗೆ ತೆರಳಲು ಹೆಲಿಕಾಪ್ಟ್‌ರ್ ಬುಕ್ ಮಾಡಿದ್ದಾನೆ.

ಮಾಸ್ಕೊ ಕಂಪನಿಯೊಂದರ ಸಿಇಒ ಆಗಿರುವ ವಿಕ್ಟರ್, ತನ್ನ ದುಬಾರಿ ವೆಚ್ಚದ ರೈಡ್ ಸುದ್ದಿಯಾಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದಾರೆ. ''ನಾನು ಮತ್ತು ನನ್ನ ಗರ್ಲ್‌ಫ್ರೆಂಡ್ ಆರ್ಗ್ಯಾನಿಕ್ ಫುಡ್‌ನಿಂದ ಬೇಸತ್ತಿದ್ದೇವೆ, ಹೀಗಾಗಿ ಬರ್ಗರ್‌ ತಿನ್ನಲು ದೂರದಲ್ಲಿರುವ ಮೆಕ್‌ಡೊನಾಲ್ಡ್ಸ್‌ಗೆ ತೆರಳಿದ್ದೆವು'' ಎಂದು ವಿಕ್ಟರ್ ಮಾರ್ಟಿನೋವ್ ಹೇಳಿದರು.

ಡೈಲಿ ಸ್ಟಾರ್‌ ವರದಿಯ ಪ್ರಕಾರ, ಮೆಕ್‌ಡೊನಾಲ್ಡ್ಸ್‌ ಔಟ್‌ಲೆಟ್‌ನಲ್ಲಿ ಅವರು ಆರ್ಡರ್ ಮಾಡಿದ್ದ ಬರ್ಗರ್‌ ಒಟ್ಟಾರೆ ಮೌಲ್ಯವು 49 ಪೌಂಡ್ (ಅಂದಾಜು 4,800 ರೂಪಾಯಿ) ಆಗಿದೆ. ಆದರೆ ಹೆಲಿಕಾಪ್ಟರ್‌ನಲ್ಲಿ ಹೋಗಿದ್ದ ವೆಚ್ಚವು ಸುಮಾರು 2,000 ಪೌಂಡ್ (2 ಲಕ್ಷ ರೂಪಾಯಿ) ನಷ್ಟಿದೆ.

English summary
A Russian Millionaire booked a helicopter just to enjoy mcdonalds meals to the nearest outlet that was 450 KM away
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X