Russia-Ukraine War: ಉಕ್ರೇನ್ ವಿರುದ್ಧ ತಾಜಾ.. ತಾಜಾ.. ದಾಳಿ ಆರಂಭಿಸಿದ ರಷ್ಯಾ ಮಿಲಿಟರಿ!
ರಷ್ಯಾ ಸೇನೆ ಕೊಡುತ್ತಿರುವ ಏಟಿಗೆ ಬೆಚ್ಚಿ ಬಿದ್ದಿರುವ ಉಕ್ರೇನ್ ಇದೀಗ ಪರದಾಡುತ್ತಿದೆ. ಈ ರೀತಿ ರಷ್ಯಾ ಮಿಲಿಟರಿ ಪದೇ ಪದೇ ತನ್ನ ಭೀಕರ ದಾಳಿಯನ್ನು ಉಕ್ರೇನ್ ಸೇನೆಗೆ ತೋರಿಸಿ, ಯುದ್ಧದ ರುಚಿ ತೋರಿಸುತ್ತಿರುವುದು ಭಯ ಹುಟ್ಟಿಸಿದೆ. ಅದರಲ್ಲೂ ಉಕ್ರೇನ್ ರಾಜಧಾನಿ & ಸುತ್ತಮುತ್ತಲ ನಗರಗಳನ್ನೇ ಟಾರ್ಗೆಟ್ ಮಾಡಿ ಭೀಕರ ಡ್ರೋನ್ ದಾಳಿ ನಡೆಸಲಾಗುತ್ತಿದ್ದು, ಈಗ ಕೂಡ ಅಷ್ಟೇ ರಷ್ಯಾ ಸೇನೆ ಹಾರಿಸಿದ ಡ್ರೋನ್‌ಗಳ ಹಾವಳಿಗೆ ಇದೀಗ ಉಕ್ರೇನ್ ಸೇನೆಗೆ ದೊಡ್ಡ ಆಘಾತ ಸಿಕ್ಕಂತಾಗಿದೆ.
ಉಕ್ರೇನ್ ದೇಶದ ಹಲವು ದೊಡ್ಡ, ದೊಡ್ಡ ಪ್ರಾಂತ್ಯಗಳೂ ಸೇರಿದಂತೆ ನಗರಗಳು ಈಗಾಗಲೇ ರಷ್ಯಾ ಸೇನೆಯ ಹಿಡಿತಕ್ಕೆ ಸಿಲುಕಿವೆ. ಹೀಗಿದ್ದರೂ ರಷ್ಯಾ ಮಿಲಿಟರಿ ಮಾತ್ರ ಇನ್ನಷ್ಟು ಖಡಕ್ ಅಟ್ಯಾಕ್ ನಡೆಸುತ್ತಿದ್ದು, ಪರಿಸ್ಥಿತಿ ಇನ್ನಷ್ಟು ಕಠಿಣವಾಗುತ್ತಿದೆ. ನಿನ್ನೆ ರಾತ್ರಿ ಕೂಡ ಹೀಗೆಯೇ ರಷ್ಯಾ ಮಿಲಿಟರಿ ಉಕ್ರೇನ್ ವಿರುದ್ಧ ದಾಳಿ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಈ ದಾಳಿಯಲ್ಲಿ ಉಕ್ರೇನ್ ರಾಜಧಾನಿ ಕೀವ್ & ಒಡೆಸ್ಸಾ ನಗರಗಳನ್ನ ಟಾರ್ಗೆಟ್ ಮಾಡಿ ಡ್ರೋಣ್ ಹಾರಿಸಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಉಕ್ರೇನ್ ಸೇನೆ ಇದೀಗ ಭಯಗೊಂಡು ರಾಜಧಾನಿ ಕೀವ್ ಸುತ್ತಲೂ ಭದ್ರತೆ ಮತ್ತಷ್ಟು ಹೆಚ್ಚು ಮಾಡಿದೆ.

ರಷ್ಯಾ ಸೇನೆಗೆ ತಡೆ ಇಲ್ಲ!
ಉಕ್ರೇನ್ ದೇಶದ ಒಳಗೆ ರಷ್ಯಾ ಸೇನೆ ಇದೀಗ ಅದೆಷ್ಟು ಸುಲಭವಾಗಿ & ವೇಗವಾಗಿ ಮುಂದಕ್ಕೆ ನುಗ್ಗುತ್ತಿದೆ ಅಂದ್ರೆ ರಷ್ಯಾ ಸೇನೆಗೆ ಯಾವುದೇ ಅಡೆ & ತಡೆ ಇಲ್ಲದಾಗಿದೆ. ಅದರಲ್ಲೂ ರಷ್ಯಾ ಗಡಿಗೆ ಹೊಂದಿಕೊಂಡ ಉಕ್ರೇನ್ ಪ್ರದೇಶಗಳು ಈಗಾಗಲೇ ರಷ್ಯಾ ಸೇನೆಯ ವಶಕ್ಕೆ ಹೋಗಿವೆ. ಆದರೆ ಉಕ್ರೇನ್ ಬಳಿ ಈಗ ಉಳಿದುಕೊಂಡ ಪ್ರಮುಖ ನಗರ ಎಂದರೆ ಅದು ಕೀವ್ ಮಾತ್ರ. ಉಕ್ರೇನ್ ತನ್ನ ರಾಜಧಾನಿ ರಕ್ಷಣೆಗೆ ಅಂತಾ ಹಲವು ರೀತಿಯ ಭದ್ರತಾ ಕ್ರಮಗಳನ್ನ ಜಾರಿಗೆ ತಂದಿದ್ದರೂ ಪ್ರಯೋಜನ ಆಗುತ್ತಿಲ್ಲ. ಅಲ್ಲದೆ ರಷ್ಯಾ ಮಿಲಿಟರಿ ಇನ್ನೇನು ಉಕ್ರೇನ್ ಕ್ಯಾಪಿಟಲ್ ಸಿಟಿಗೆ ಕೂಡ ಮುತ್ತಿಗೆ ಹಾಕುವುದು ಗ್ಯಾರಂಟಿ ಆಗುತ್ತಿದೆ.
ಒಂದೊಂದೇ ಪ್ರದೇಶಗಳು ರಷ್ಯಾ ವಶಕ್ಕೆ?
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಬರೋಬ್ಬರಿ ಎರಡು ಮುಕ್ಕಾಲು ವರ್ಷವೇ ಕಳೆದು ಹೋಗಿದೆ. ಈ ಎರಡು ಮುಕ್ಕಾಲು ವರ್ಷದಲ್ಲಿ, ಉಕ್ರೇನ್ ದೇಶದ ಪೂರ್ವ ಭಾಗ ರಷ್ಯಾದ ಭಾಗಶಃ ಹಿಡಿತಕ್ಕೆ ಸಿಕ್ಕಾಗಿದೆ. ಇದು ಉಕ್ರೇನ್ ಅಧ್ಯಕ್ಷ್ಯ ಝೆಲೆನ್ಸ್‌ಸ್ಕಿ ಮತ್ತು ಉಕ್ರೇನ್ ದೇಶದ ಬೆಂಬಲಕ್ಕೆ ನಿಂತಿರುವ ಅಮೆರಿಕದ ಬೇಸರಕ್ಕೆ ಕಾರಣವಾಗಿದೆ. ಇಂತಹ ಸಮಯದಲ್ಲೇ ಈಗ ರಷ್ಯಾ ಮತ್ತಷ್ಟು ಪ್ರದೇಶಗಳನ್ನ ಉಕ್ರೇನ್ ವಶದಿಂದ ಕಿತ್ತುಕೊಂಡಿದೆ. ಅದರಲ್ಲೂ ರಷ್ಯಾದ ಮಿಲಿಟರಿ ಉಕ್ರೇನ್ ರಾಜಧಾನಿ ಸುತ್ತಮುತ್ತಲ ಭಾಗದಲ್ಲಿ ಸಾಕಷ್ಟು ಹಿಡಿತ ಸಾಧಿಸುತ್ತಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸುವ ಮುನ್ಸೂಚನೆ ನೀಡಿದೆ.












Click it and Unblock the Notifications